ಶಿವಮೊಗ್ಗ, (ಜ.23): ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ನಟೋರಿಯಸ್ ರೌಡಿಗಳ ಎಣ್ಣೆ ಪಾರ್ಟಿಗೆ ತಮ್ಮ ಕ್ವಾಟರ್ಸ್​ ನೀಡಿದ್ದಾರೆ.ಶಿವಮೊಗ್ಗದ ವಿನೋಬನಗರದಲ್ಲಿರುವ ಸಿವಿಲ್ ಪೋಲಿಸ್ ವಸತಿ ಗೃಹ ರೌಡಿಗಳು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. 

"

ಕುಖ್ಯಾತ ಭೂಗತ ಪಾತಕಿ ನವಲೆ ಅನಂದ, ರೌಡಿಶೀಟರ್ ಕೊಕ್ರೆ ಶ್ಯಾಮ ಎನ್ನುವರು ಪೊಲೀಸ್ ವಸತಿಗೃಹದ  ರೂಮ್ 101ರಲ್ಲಿ ಎಣ್ಣೆ ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

ಸಂಚಾರಿ ಪೋಲಿಸ್ ಪುನೀತ್ ಎಂಬುವವರಿಗೆ ಹಂಚಿಕೆಯಾಗಿದ್ದ ರೂಮ್ ಅನ್ನು ಬಾರ್ ಮಾಡಿಕೊಂಡು ಕಳೆದ 15 ದಿನಗಳಿಂದ ಠಿಕಾಣಿ ಹೂಡಿ ಭರ್ಜರಿ  ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ.

ಪೋಲಿಸ್ ಕ್ವಾಟರ್ಸ್​ನಲ್ಲಿ ರೌಡಿಗಳ ಚಟುವಟಿಕೆ ನಡೆಯುತ್ತಿರುವುದು ಸುವರ್ಣನ್ಯೂಸ್ ಗೆ  ಎಸ್ಪಿ ಅಭಿನವ್ ಖರೆ ಖಚಿತಪಡಿಸಿದ್ದಾರೆ. 

ಈ ಮೂಲಕ ರೌಡಿಗಳ ಡೀಲ್ ಗಳಿಗೆ ಅಡ್ಡೆಯಾಗಿತ್ತಾ ಪೋಲಿಸ್ ಕ್ವಾಟರ್ಸ್​ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. 

ಕುಖ್ಯಾತ ಪಾತಕಿಗಳು ಪೋಲಿಸ್ ಕ್ವಾಟರ್ಸ್​ನಲ್ಲಿರುತ್ತಿದ್ದ ಮಾಹಿತಿ ಪಡೆದ ಎಸ್ಪಿ ಅಭಿನವ್ ಖರೆ,  ಪೋಲಿಸ್ ಪೇದೇ ಮತ್ತು ಕುಖ್ಯಾತಿ ಪಾತಕಿಗಳ ಸಂಬಂಧದ ಬಗ್ಗೆ ತನಿಖೆ ನಡೆಸಲು ಎಸ್ಪಿ ಸೂಚನೆ ನೀಡಿದ್ದಾರೆ.

ಇನ್ನು ದೊಡ್ಡಪೇಟೆ ಸಿಪಿಐ ವಸಂತ ಕುಮಾರ್ , ಪಿಎಸ್ ಐಗಳಾದ ಗಿರೀಶ್ , ರವಿ ಅವರು ಕ್ವಾಟರ್ಸ್ ಪರಿಶೀಲನೆ ಮಾಡುತ್ತಿದ್ದಾರೆ. 

ಕುಖ್ಯಾತ ರೌಡಿ ನವಲೆ ಅನಂದ  ಇಂಟರ್ ನ್ಯಾಷನಲ್ ಡಾನ್ ಬನ್ನಂಜೆ ರಾಜನ ಸಹಚರನಾಗಿದ್ದು, ಕೋಕಾ ಅಕ್ಟ್ ಅಡಿ ಬಂಧಿತನಾಗಿ ಜೈಲಿನಲ್ಲಿದ್ದ ನವಲೆ ಅನಂದ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.