ಮಂಗಳೂರು-ಮುಂಬೈ ನಡುವೆ ಮಲ್ಟಿಆ್ಯಕ್ಸಿಲ್ ಬಸ್ ಸಂಚಾರ ಆರಂಭ ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಮಧ್ಯಾಹ್ನ 12.45 ಗಂಟೆಗೆ ಹೊರಟು ಮುಂಬೈಗೆ ಮರುದಿನ ಬೆಳಗ್ಗೆ 7 ಕ್ಕೆ ತಲುಪುತ್ತದೆ
ಮಂಗಳೂರು (ಡಿ.19): ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗದಿಂದ ಮಂಗಳೂರು-ಮುಂಬೈ (Mangaluru Mumbai) (ಮಂಗಳೂರಿನಿಂದ ವಯಾ ಮೂಡುಬಿದಿರೆ, ಕಾರ್ಕಳ, ನಿಟ್ಟೆ, ಬೆಳ್ಮಣ್ಣು, ಶಿರ್ವ ಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಸತಾರ, ಪೂನಾ ಮಾರ್ಗವಾಗಿ ಮುಂಬೈ) ಮಾರ್ಗದಲ್ಲಿ ವೋಲ್ವೋ (Volvo) ಮಲ್ಟಿ ಆ್ಯಕ್ಸಿಲ್ ಸಾರಿಗೆಯು ಡಿ.12ರಿಂದ ಕಾರ್ಯಾಚರಣೆ ಆರಂಭಿಸಿದೆ.
ಈ ಸಾರಿಗೆಯು ಮಂಗಳೂರು (Mangaluru) ಬಸ್ಸು (Bus) ನಿಲ್ದಾಣದಿಂದ ಮಧ್ಯಾಹ್ನ 12.45 ಗಂಟೆಗೆ ಹೊರಟು ಮುಂಬೈಗೆ ಮರುದಿನ ಬೆಳಗ್ಗೆ 7 ಕ್ಕೆ ತಲುಪುತ್ತದೆ. ಮರು ಪ್ರಯಾಣದಲ್ಲಿ ಮುಂಬೈಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8ಕ್ಕೆ ಮಂಗಳೂರು ತಲಪುತ್ತದೆ.
ಮಂಗಳೂರಿನಿಂದ ಮುಂಬೈಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 1,400 ರು. ಆಗಿದೆ. ಪ್ರಯಾಣಿಕರಿಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಹತ್ತಿರದ ರಿಸರ್ವೇಶನ್ ಕೌಂಟರ್‌ನ್ನು (Resarvation) ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ಸು ನಿಲ್ದಾಣ ಮೊ.ಸಂಖ್ಯೆ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಮೊ.ಸಂಖ್ಯೆ: 9663211553, ಉಡುಪಿ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266400, ಕುಂದಾಪುರ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266009 ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೋಲ್ವೋ ಬಸ್ ದರ ಕಡಿತ : ಕೊರೋನಾ (Corona) ಬಳಿಕ ಪ್ರಯಾಣಿಕರಿಲ್ಲದೆ ಡಿಪೋಗಳಲ್ಲಿ (Depo) ಧೂಳು ತಿನ್ನುತ್ತಿದ್ದ ಹವಾ ನಿಯಂತ್ರಿತ ವೋಲ್ವೊ ಬಸ್‌ಗಳಿಗೆ (Volvo Bus) ಪ್ರಯಾಣಿಕರನ್ನು ಆಕರ್ಷಿಸಲು ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿತಗೊಳಿಸಿ ಬಿಎಂಟಿಸಿ (BMTC) ಅದೇಶಿಸಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯಿಂದ ಸುಮಾರು 700ಕ್ಕೂ ಹೆಚ್ಚು ವೋಲ್ವೊ ಬಸ್‌ಗಳು ರಸ್ತೆ ಗಿಳಿದಿರಲಿಲ್ಲ. ಅಲ್ಲದೆ, ಐಟಿ ಕಂಪೆನಿಗಳಿಂದ(IT Company) ಗುತ್ತಿಗೆಗೆ ಪಡೆದಿದ್ದ ಬಸ್‌ಗಳನ್ನು (Bus) ಹಿಂದಿರುಗಿಸಲಾಗಿತ್ತು. ಆದರೆ, ಈ ವಾಹನಗಳಿಗೆ ನಿರ್ವಹಣೆಗಾಗಿ ಬಿಎಂಟಿಸಿ (BMTC) ಮಾಸಿಕವಾಗಿ ಕೊಟ್ಯಂತರ ರು.ಗಳನ್ನು ವ್ಯವಯಿಸುತ್ತಿತ್ತು. ಇದರಿಂದ ಸಾರ್ವಜನಿಕ ವಲಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಬಿಎಂಟಿಸಿ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಜೊತೆಗೆ, ಪ್ರಯಾಣ ದರವನ್ನು ಕಡಿಮೆ ಮಾಡಿ ವೋಲ್ವೊ ಬಸ್‌ಗಳನ್ನು ರಸ್ತೆಗಳಿಸುವಂತೆ ಆಗ್ರಹಗಳು ಕೇಳಿ ಬಂದಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ಅಧಿಕಾರಿಗಳು ಇದೀಗ ಪ್ರಯಾಣ ದರದಲ್ಲಿ ಶೇ.34 ರಷ್ಟು ಕಡಿತಗೊಳಿಸಿದ್ದು, ಕಳೆದ ಎರಡು ವರ್ಷಗಳಿಂದ ಮೂಲೆಗೆ ಬಿದ್ದಿದ್ದ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು ನಗರದಲ್ಲಿ(Bengaluru) ಈವರೆಗೂ 9 ಮಾರ್ಗಗಳಲ್ಲಿ 83 ವೋಲ್ವೊ ಬಸ್‌ಗಳು ಕಾರ್ಯಚರಣೆ ನಡೆಸುತ್ತಿದ್ದು, ಡಿ.17ರಿಂದ 12 ಮಾರ್ಗಗಳಲ್ಲಿ 90 ಎಸಿ ಬಸ್‌ಗಳನ್ನ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಷ್ಕೃತ ದರಗಳ ವಿವರ
ದಿನ ಪಾಸುಗಳಿಗೆ(Daily Pass) ಈ ಹಿಂದೆ ಇದ್ದ 120 ರು.ಗಳನ್ನು 100 ರು.ಗಳಿಗೆ ಕಡಿತಗೊಳಿಸಲಾಗಿದೆ. 2,000ರು.ಗಳಿದ್ದ ಮಾಸಿಕ ಪಾಸಿನ ದರವನ್ನು 1,500ರು.ಗಳಿಗೆ ಇಳಿಸಲಾಗಿದೆ. ಅಲ್ಲದೆ, 50 ಕಿಮೀಗಳಿಗಿದ್ದ 90 ರು.ಗಳ ಪ್ರಯಾಣ ದರವನ್ನು ಶುಕ್ರವಾರದಿಂದ 50 ರು.ಗೆ ಇಳಿಕೆ ಮಾಡಲಾಗಿದೆ.
ದೂರದ ಅಂತರ(ಕೀ.ಮೀಗಳಲ್ಲಿ) ಪ್ರಸ್ತುತ ದರ ಪರಿಷ್ಕೃತ ದರ(ರು.ಗಳಲ್ಲಿ)
2 10 10
4 15 15
6 20 20
8 30 25
10 35 25
12 35 30
14 45 30
16 45 35
18 50 35
20 55 35
