BMTC Students Pass: ಬಸ್‌ ಪಾಸ್‌ ಇಲ್ಲದಿದ್ದರೆ ಶಾಲಾ ಐಡಿ ಇದ್ರೂ ಸಾಕು

  • ಬಸ್‌ ಪಾಸ್‌ ಇಲ್ಲದಿದ್ದರೆ ಶಾಲಾ ಐಡಿ ಇದ್ರೂ ಸಾಕು
  • ಶುಲ್ಕದ ರಸೀದಿ ಮತ್ತು ಗುರುತಿನ ಚೀಟಿಯನ್ನು ತೋರಿಸಿ ಡಿ.31ರ ವರೆಗೂ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸಬಹುದು
Students ID can be used instead of pass in BMTC snr

 ಬೆಂಗಳೂರು (ಡಿ.17): ನಗರದ ವಿದ್ಯಾರ್ಥಿಗಳು (Students) ಶಾಲಾ-ಕಾಲೇಜುಗಳಲ್ಲಿ (School) ಪಾವತಿಸಿರುವ ಶುಲ್ಕದ ರಸೀದಿ ಮತ್ತು ಗುರುತಿನ ಚೀಟಿಯನ್ನು ತೋರಿಸಿ ಡಿ.31ರ ವರೆಗೂ ನಗರ ಸಾರಿಗೆ ಬಸ್‌ಗಳಲ್ಲಿ (BMTC) ಸಂಚರಿಸಬಹುದು ಎಂದು ಬಿಎಂಟಿಸಿ ತಿಳಿಸಿದೆ. ಈಗಾಗಲೇ ನ.14ರಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ (Online) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 80 ಸಾವಿರ ವಿದ್ಯಾರ್ಥಿಗಳು ಪಾಸು ಪಡೆದಿದ್ದಾರೆ. ಇನ್ನುಳಿದಂತೆ ಹಲವು ವಿದ್ಯಾರ್ಥಿಗಳು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದು, ಪಾಸ್‌ ಪಡೆಯುವವರೆಗೂ ವಿದ್ಯಾರ್ಥಿಗಳು ಶುಲ್ಕ ರಸೀದಿ ಮತ್ತು ಗುರುತಿನ ಚೀಟಿ ತೋರಿಸಿ ಮನೆಯಿಂದ ಕಾಲೇಜಿನವರೆಗೂ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಟಿಸಿ ಆದೇಶದಿಂದ ಇನ್ನೂ ಪಾಸ್ ಪಡೆದುಕೊಳ್ಳದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬಹುದಾಗಿದೆ. ಶಾಲೆಯ ಐಡಿಯನ್ನು ಬಳಸಿ ಬಿಎಂಟಿಸಿಯಲ್ಲಿ ಪ್ರಯಾಣ ಮಾಡಬಹುದಾಗಿದೆ. 

ಬಸ್ ಪಾಸ್ ದೂರದ ಮಿತಿ ಏರಿಕೆ :  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ (KSRTC Bus) ವಿದ್ಯಾರ್ಥಿಗಳ ಬಸ್‌ ಪಾಸ್‌ (Bus Pass) ಸಂಚಾರ ಮಿತಿಯನ್ನು 60 ಕಿ.ಮೀ.ನಿಂದ 100 ಕಿ.ಮೀ.ವರೆಗೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು (B Shriramulu) ಭರವಸೆ ನೀಡಿದ್ದಾರೆ. ಬುಧವಾರ ಜೆಡಿಎಸ್‌ ಸದಸ್ಯ ಎಚ್‌.ಕೆ.ಕುಮಾರಸ್ವಾಮಿ (HK Kumaraswamy) ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ 60 ಕಿ.ಮೀ. ಮಿತಿಯವರೆಗೆ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ  (Students) ಬಸ್‌ ಪಾಸ್‌ ವಿತರಣೆ ಮಾಡಲಾಗುತ್ತಿದೆ. 60 ಕಿ.ಮೀ. ಮಿತಿಯಿಂದ 100 ಕಿ.ಮೀ.ಗೆ ಹೆಚ್ಚಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಶಾಲಾ ಕಾಲೇಜುಗಳು (School - College) ಪ್ರಾರಂಭವಾಗಿರುವುದರಿಂದ ಶೈಕ್ಷಣಿಕ ದಾಖಲೆಗಳನ್ನು ಒದಗಿಸಿ ಸೇವಾಸಿಂಧು ಮೂಲಕವು ಸಹ ಬಸ್‌ಪಾಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಹಳೆ ಬಸ್‌ಗಳ ಅನುಪಯುಕ್ತಗೊಳಿಸಲು ಕ್ರಮ:  9 ಲಕ್ಷ ಕಿ.ಮೀ. ಕ್ರಮಿಸಿದ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳನ್ನು ಅನುಪಯುಕ್ತಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. 

ಬಿಜೆಪಿಯ (BJP) ಅಪ್ಪಚ್ಚು ರಂಜನ್‌ (Appachu Ranjan ) ಪ್ರಶ್ನೆಗೆ ಈ ಉತ್ತರ ನೀಡಿದ ಅವರು, ಹಳೆಯ ವಾಹನಗಳನ್ನು (Vehicle) ತೆಗೆದು ಹೊಸ ವಾಹನಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಒಂಬತ್ತು ಲಕ್ಷ ಕಿ.ಮೀ. ಕ್ರಮಿಸಿದ ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ 15 ವರ್ಷಗಳ ಕಾಲ ವಾಹನ ಓಡಾಡಿದ ವಾಹನಗಳನ್ನು ಅನುಪಯುಕ್ತಗೊಳಿಸಬೇಕು ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಾಂಗ್ರೆಸ ಸದಸ್ಯ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಪೂರಕ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಕೋವಿಡ್‌ (Covid ) ಹಿನ್ನೆಲೆಯಲ್ಲಿ ನಿಗಮ ತೀವ್ರ ಸಂಕಷ್ಟದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತುಂಬಾ ಕಷ್ಟಕರವಾಗಿದೆ. ಆರ್ಥಿಕ ಮಿತಿಯನ್ನು ಗಮನದಲ್ಲಿರಿಸಿಕೊಂಡು ಕುಶಾಲನಗರದಲ್ಲಿ ವಿಭಾಗೀಯ ಕಾರ್ಯಗಾರ ಆರಂಭಿಸಲು ಕ್ರಮವಹಿಸಲಾಗುವುದು ಎಂದರು.

ಆದಾಯ ಹೆಚ್ಚಿಸಲು ಕ್ರಮ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭ ದಾಯಕವಾಗಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲು ಸರ್ಕಾರವು ಐಎಎಸ್‌  (IAS) ಅಧಿಕಾರಿ ಶ್ರೀನಿವಾಸ ಮೂರ್ತಿ ಅವರ ಏಕಸದಸ್ಯ ಸಮಿತಿಯನ್ನು ರಚಿಸಿದೆ. ಸಮಿತಿಯ ಮಾಡುವ ಶಿಫಾರಸ್ಸಿನ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ ಅವರ ಪ್ರಶ್ನೆಗೆ ಸಚಿವ ಬಿ. ಶ್ರೀರಾಮುಲು ಉತ್ತರಿಸಿದರು.

Latest Videos
Follow Us:
Download App:
  • android
  • ios