Asianet Suvarna News Asianet Suvarna News

ಹುಚ್ಚು ಗಣಿ ದೇವಾಲಯ ಪುನರ್‌ ಪ್ರತಿಷ್ಠಾಪನೆ ಮಾಡಿಯೇ ಚುನಾವಣೆ ಎದುರಿಸುತ್ತೇನೆ

  • ತಾಲೂಕಿನ ಹುಚ್ಚಗಣಿಯ ಪುರಾತನವಾದ ಮಹದೇವಮ್ಮ ದೇವಾಲಯ
  • ಮಹದೇವಮ್ಮ ದೇವಾಲಯವನ್ನು ಪುನರ್‌ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಯೇ ಮುಂದಿನ ಚುನಾವಣೆ
MLA Harshavardhan Donate 5 lakh to huchangi temple snr
Author
Bengaluru, First Published Nov 18, 2021, 8:26 AM IST

 ನಂಜನಗೂಡು (ನ.18):  ತಾಲೂಕಿನ ಹುಚ್ಚ ಗಣಿಯ (Huchagani Temple) ಪುರಾತನವಾದ ಮಹದೇವಮ್ಮ ದೇವಾಲಯವನ್ನು (Temple) ಪುನರ್‌ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಯೇ ಮುಂದಿನ ಚುನಾವಣೆಗೆ ಹೋಗುತ್ತೇನೆ ಎಂದು ಶಾಸಕ ಬಿ. ಹರ್ಷವರ್ಧನ್‌ (Harshavardhan) ಹೇಳಿದರು.

ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಧ್ವಂಸಗೊಂಡಿದ್ದ ಮಹದೇವಮ್ಮ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ವೈಯಕ್ತಿಕ ಸಂಬಳದಿಂದ 5 ಲಕ್ಷ ರು. ಗಳ ದೇಣಿಗೆ ಚೆಕ್‌ನ್ನು ದೇವಾಲಯದ ಸಮಿತಿಯವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ನಾನು ಶಾಸಕನಾಗಿ (MLA) ಆಯ್ಕೆಯಾದ ನಂತರ ದೇಶದ ಸಂವಿಧಾನ ಮತ್ತು ಕಾನೂನನ್ನು ಎತ್ತಿ ಹಿಡಿಯುತ್ತೇನೆಂದು ಶಪಥ ಮಾಡಿದ್ದೆ. ಸುಪ್ರೀಂಕೋರ್ಟ್‌ (Supreme Court) ದೇವಾಲಯ ತೆರವು ಮಾಡುವುದಕ್ಕೆ ಆದೇಶ ನೀಡಿತ್ತು, ದೇವಾಲಯ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದೆ, ಅಲ್ಲದೆ 2 ದಿನ ಕಾಯುವಂತೆ ತಹಸೀಲ್ದಾರ್‌ (Tahasildar), ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅದು ನನ್ನ ಕೈಯಲ್ಲಿ ಇರಲಿಲ್ಲ, ಆದರೆ ನ್ಯಾಯಾಲಯದ ಆದೇಶ ಪಾಲಿಸಲು ಅಧಿಕಾರಿಗಳು ದೇವಾಲಯ ತೆರವು ಮಾಡಿದ್ದರು. ಜಿಲ್ಲೆಯಲ್ಲಿ ಕೊನೆಯ ದೇವಾಲಯ ಇದಾಗಿತ್ತು.

ದೇವಾಲಯ ಧ್ವಂಸ ನಂತರ ರಾಜ್ಯ ಸರ್ಕಾರ (Karnataka Govt) ಕೂಡ ಎಚ್ಚೆತ್ತುಕೊಂಡು ಸುಪ್ರೀಂಕೋರ್ಟ್‌ (Supreme Court) ಆದೇಶವಾಗಿ ಒಂದು ವರ್ಷ ನಂತರ ದೇವಾಲಯ ತೆರವು ಮಾಡದಂತೆ ಕಾನೂನು ರೂಪಿಸಿತು. ಸರ್ಕಾರ ಈ ಮೊದಲೆ ನಿರ್ಣಯ ಕೈಗೊಂಡಿದ್ದರೆ ದೇವಾಲಯವನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದರು.

ದೇವಾಲಯದ ಪುನರ್‌ ನಿರ್ಮಾಣಕ್ಕೆ ನನ್ನ ವೈಯಕ್ತಿಕವಾಗಿ 5 ಲಕ್ಷ ರು. ಗಳ ಚೆಕ್‌ನ್ನು ದೇವಾಲಯದ ಸಮಿತಿಯವರಿಗೆ ವಿತರಿಸಿದ್ದೇನೆ. ಬೇರೆ ಮೂಲಕಗಳಿಂದಲೂ ಕೂಡ ದೇವಾಲಯ ನಿರ್ಮಾಣಕ್ಕೆ ದೇಣಿಗೆ ತರಲು ಪ್ರಯತ್ನಿಸುತ್ತೇನೆ. ದಾನಿಗಳೂ ಕೂಡ ಕೈ ಜೋಡಿಸುವಂತೆ ಈ ಮೂಲಕ ಮನವಿ ಮಾಡುತ್ತೇನೆ. ಮುಂದಿನ ಚುನಾವಣೆ (Election) ವೇಳೆಗೆ ದೇವಾಲಯ ನಿರ್ಮಿಸಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಬಿಜೆಪಿ (BJP) ತಾಲೂಕು ಅಧ್ಯಕ್ಷ ಪಿ. ಮಹೇಶ್‌, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಮುಖಂಡರಾದ ಬಸಪ್ಪ, ಶಿವರುದ್ರ, ಚಂದ್ರು, ಉದಯರವಿ, ನಾಗರಾಜೇಗೌಡ, ಪಿಡಿಓ ಮಹದೇವಸ್ವಾಮಿ, ಬಿಜೆಪಿ ಕಾರ್ಯಕರ್ತರು ಇದ್ದರು.

ಮತ್ತೊಂದು ಟ್ವಿಸ್ಟ್  :   ಹುಚ್ಚಗಣಿ ಮಹದೇವಮ್ಮ ದೇವಾಲಯ (Huchchagani Mahadevamma Temple ) ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.  ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಇದೀಗ ದೇವಾಲಯ ತೆರವು ವಿಚಾರ ತಿರುವು ಪಡೆದುಕೊಂಡಿದೆ. 

 ನಂಜನಗೂಡಿನಲ್ಲಿಂದು ಮಾತನಾಡಿದ ಶಾಸಕ ಹರ್ಷವರ್ಧನ್ (Harshavardhan) ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಡುವ ಹೇಳಿಕೆ ನೀಡಿದ್ದಾರೆ.  ದೇವಸ್ಥಾನ ಉಳಿಸಲು ಡಿಸಿಗೆ, ತಹಶೀಲ್ದಾರ್ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದರು.  ತಹಶೀಲ್ದಾರ್ ಡಿಸಿಗೆ ವರದಿ ಕೊಟ್ಟಾಗ, ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತಿರಾ? ಎಂದು ಡಿಸಿ ಪ್ರಶ್ನಿಸಿದ್ದಾರೆ. ದೇವಾಲಯ ತೆರವು ಮಾಡಲು ಜಿಲ್ಲಾಧಿಕಾರಿಯೇ ಕಾರಣ ಎಂದು ಹೇಳಿದ್ದಾರೆ. 

'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'

ದೇವಾಲಯ ತೆರವು ವಿಚಾರವಾಗಿ ಡಿಸಿ ಪ್ರಶ್ನೆ ಮಾಡಿದಾಗ ತಹಶೀಲ್ದಾರ್ (Tahasildar) ಬಳಿ ಉತ್ತರ ಇರಲಿಲ್ಲ. ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಿದ್ದಿವಿ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ.  ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಡಿಸಿ ಆರ್ಡರ್ ಮಾಡಿದ್ದಾರೆ ಎಂದು ಹರ್ಷವರ್ಧನ್ ಹೇಳಿದರು. 

ಠಾಣಾ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಹಿನ್ನೆಲೆಯಲ್ಲಿ 13 ದೇವಸ್ಥಾನಗಳನ್ನು ಉಳಿಸಲಾಯಿತು. ಮಹದೇವಮ್ಮ ದೇವಸ್ಥಾನವನ್ನು ಉಳಿಸುವಂತೆ ತಹಶೀಲ್ದಾರ್ ರಿಗೆ ರಿಪೋಟ್೯ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಅವರು ಡಿಸಿಗೆ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಇದರಲ್ಲಿ ಅವರದ್ದು ತಪ್ಪಿಲ್ಲವೆಂದು ಹೇಳಿದರು. 

  ಯಾವುದೇ ದಾಖಲಾತಿ ಇಲ್ಲದೇ ದೇವಸ್ಥಾನ ಹೇಗೆ ಉಳಿಸುತ್ತೀರಾ? ಎಂದು ಪ್ರಶ್ನಿಸಿ ದೇವಾಲಯ ತೆರವಿಗೆ ಡಿಸಿ ಆರ್ಡರ್ ಕೊಟ್ಟಿದ್ದಾರೆ. ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಮಾಡಿರುವುದಕ್ಕೆ ನನಗೂ ಬೇಸರವಿದೆ. ಈ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಶಾಸಕ ಹರ್ಷವರ್ಧನ್ ಹೇಳಿದರು.

Follow Us:
Download App:
  • android
  • ios