Asianet Suvarna News Asianet Suvarna News

ಬಿಜೆಪಿಯ 7 ಶಾಸಕರಿಗೆ ನೊಟೀಸ್‌ ನೀಡಲು ಹೈಕೋರ್ಟ್‌ ಸೂಚನೆ

  • ಬಿಜೆಪಿಯ ಏಳು ಜನ ವಿಧಾನ ಪರಿಷತ್‌ ಸದಸ್ಯರು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು 
  • ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಚುನಾಯಿತ ಪಾಲಿಕೆ ಸದಸ್ಯರು ಸಲ್ಲಿಸಿದ್ದ ರಿಟ್‌ ಅರ್ಜಿ
  • 7 ವಿಧಾನ ಪರಿಷತ್‌ ಸದಸ್ಯರಿಗೆ ನೊಟೀಸ್‌ ನೀಡಲು ಸೂಚನೆ 
high Court instructs to issue notice 7 BJP MLAs snr
Author
Bengaluru, First Published Nov 18, 2021, 6:34 AM IST
  • Facebook
  • Twitter
  • Whatsapp

 ಕಲಬುರಗಿ (ನ.18):  ಬಿಜೆಪಿಯ (BJP) ಏಳು ಜನ ವಿಧಾನ ಪರಿಷತ್‌ (MLC) ಸದಸ್ಯರು ಕಲಬುರಗಿ (Kalaburagi) ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ನ (Congress) ಚುನಾಯಿತ ಪಾಲಿಕೆ ಸದಸ್ಯರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಬುಧವಾರ ವಿಚಾರಣೆಗೆ ಅಂಗೀಕರಿಸಿರುವ ಕರ್ನಾಟಕ ಹೈಕೋರ್ಟ್‌ (Karnataka high Court) ಕಲಬುರಗಿ ಪೀಠವು ಎಲ್ಲಾ 7 ವಿಧಾನ ಪರಿಷತ್‌ ಸದಸ್ಯರಿಗೆ ನೊಟೀಸ್‌ (Notice) ನೀಡಲು ಸೂಚನೆ ನೀಡಿದ್ದು, ಈ ಕುರಿತಂತೆ ನ.29ಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ತಿಳಿಸಿದೆ.

ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ (Mayor election) ಮತ ಚಲಾಯಿಸುವ ಉದ್ದೇಶದಿಂದ ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಜೆಪಿ (BJP) ಪರಿಷತ್‌ ಸದಸ್ಯರಾದ ಲಕ್ಷ್ಮಣ ಸವದಿ (Laxmana savadi), ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್‌, ಲೆಹರ್‌ ಸಿಂಗ್‌, ರಘುನಾಥ ಮಲ್ಕಾಪುರೆ ಹಾಗೂ ಸಾಯಬಣ್ಣ ತಳವಾರ ಅವರು ಆನ್‌ಲೈನ್‌ (online) ಮೂಲಕ ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ನ (Congress) ಪಾಲಿಕೆಯ ಸದಸ್ಯರಾದ ವರ್ಷಾ ಜಾನೆ ಹಾಗೂ ತೃಪ್ತಿ ಲಾಖೆ ಅವರು ಹೈಕೋರ್ಟ್‌ (Higjh Court) ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಬುಧವಾರ ಸದರಿ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಐ ಅರುಣ್‌ ಅವರಿದ್ದ ನ್ಯಾಯಪೀಠವು ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ನೊಟೀಸ್‌ (Notice) ಜಾರಿಗೊಳಿಸಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎಎಸ್‌ ಪೊನ್ನಣ್ಣ ಅವರು ವಾದ ಮಂಡಿಸಿದರು.

ಏತನ್ಮಧ್ಯೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ಗೆ ಘೋಷಣೆಯಾಗಿರುವ ಚುನಾವಣೆಯಲ್ಲಿ (Election) ಜಿಲ್ಲಾಡಳಿತದ ಸಿಬ್ಬಂದಿ ಮುಳುಗಿರೋದರಿಂದಾಗಿ ಮೇಯರ್‌, ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿ ಚುನಾವಣೆಗಳನ್ನು ನಡೆಸುವುದು ಕಷ್ಟವಾಗಲಿದೆ ಎಂಬ ಕಾರಣ ಮುಂದೊಡ್ಡಿ ಕಲಬುರಗಿ (Kalaburagi) ಪ್ರಾದೇಶಿಕ ಆಯುಕ್ತ ಪ್ರಸಾದ್‌ ಇವರು ಮೇಯರ್‌ ಚುನಾವಣೆಯನ್ನೇ ಮುಂದೂಡಿದ್ದಾರೆ.

ಈ ವಿಚಾರವನ್ನು ಕಾಂಗ್ರೆಸ್‌ (congress) ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ. ಬಿಜೆಪಿ ಅಧಿಕಾರ ದುರುಪಯೋಗಕ್ಕೆಂದೇ ಹೀಗೆ ನ.20 ಕ್ಕೆ ನಿಗದಿಯಾಗಿದ್ದ ಚುನಾವಣೆ ದಿಢೀರನೆ ಮುಂದೂಡಿದೆ. ಅದೇ ದಿನ ಚುನಾವಣೆಗಳನ್ನು ನಡೆಸುವಂತೆ ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್‌ ಹೈಕೋರ್ಟ್‌ನಲ್ಲಿ (high Court) ಈಗಾಗಲೇ ಹೂಡಿರುವ ದಾವೆಯಲ್ಲಿಯೇ ಈ ಬೆಳವಣಿಗೆಯನ್ನು ಪ್ರಸ್ತಾಪಿಸಿ ನ್ಯಾಯಾಲಯದ ಗಮನ ಸೆಳೆಯುವ ಸಿದ್ಧತೆಯಲ್ಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಬಿಜೆಪಿ ಗೆಲುವಿನ ವಿಶ್ವಾಸ : 

ಅವಿಭಜಿತ  ದಕ್ಷಿಣ ಕನ್ನಡ (Dakshina  Kannada) ಜಿಲ್ಲೆಯ 13 ಕ್ಷೇತ್ರಗಳಲ್ಲಿ ಬಿಜೆಪಿ (BJP) 12 ವಿಧಾನ ಸಭಾ ಕ್ಷೇತ್ರಗಳಲ್ಲಿ (Assembly Constituency) ಶಾಸಕರನ್ನು ಹೊಂದಿದೆ. ಎರಡು ಸಂಸದರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಸಾಕಷ್ಟು ಸಂಖ್ಯೆಯ ಪಕ್ಷದ ಹಾಗೂ ಪಕ್ಷದ ಬೆಂಬಲಿತ ಸದಸ್ಯರು ಇರುವುದರಿಂದ ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಪಕ್ಷದ ಅಭ್ಯರ್ಥಿ ನಿಚ್ಚಳವಾಗಿ ಗೆಲುವು ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota shrinivas poojary) ಭರವಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿಗೆ ಸಮೀಪದ ಹೆಮ್ಮಾಡಿಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಪಕ್ಷದ ಹಾಗೂ ಪಕ್ಷದ ಪ್ರಮುಖರು ತೆಗೆದುಕೊಳ್ಳುತ್ತಾರೆ ಎಂದರು.

ಸ್ವಾಭಾವಿಕವಾಗಿ ಹಂಸಲೇಖ (Hamsalekha) ಒಬ್ಬ ಕಲಾವಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಯಾರಾದರೂ ಸಾಧು-ಸಂತರು, ಅಸ್ಪ್ರಶ್ಯತೆ ನಿವಾರಣೆಗಾಗಿ, ಅಸ್ಪ್ರಶ್ಯತೆ ಇರುವ ಕೇರಿಗಳಲ್ಲಿ ಸಂಚಾರ ಮಾಡಿ, ಅವರಿಗೆ ಕೈ ಮುಟ್ಟಿಪ್ರಸಾದವನ್ನು ನೀಡಿ, ಹಿಂದೂ ಧರ್ಮ ಒಂದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದವರು ಹಿರಿಯ ಪೇಜಾವರ ಶ್ರೀಗಳು. ಅವರ ಬಗ್ಗೆ ಹಂಸಲೇಖ ಲಘುವಾಗಿ ಮಾತನಾಡಿದ್ದು, ಅವರ ಭಕ್ತರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ನೋವಾಗಿದೆ. ಅವರು ಈ ಕುರಿತು ಕ್ಷಮೆ ಕೇಳಿರುವುದು ನನಗೆ ಗೊತ್ತಿಲ್ಲ, ಆದರೆ ಹಂಸಲೇಖ ಅವರು ಸ್ವಾಮೀಜಿಯವರ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ಸಚಿವ ಕೋಟ ಆಕ್ಷೇಪ ವ್ಯಕ್ತಪಡಿಸಿದರು.

Follow Us:
Download App:
  • android
  • ios