ವಾಲಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಕಳಶ : ಭಕ್ತರದಲ್ಲಿ ಕೆಡುಕಿನ ಆತಂಕ

  • ನೂರಾರು ವರ್ಷಗಳ ಪುರಾತನ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ 
  • ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ದೇವಾಲಯದ ಗೋಪುರ ಕಳಶ ಬಾಗಿದ್ದು ತೀವ್ರ ಆತಂಕ
Inclined Melukote Yoganarsimha Swamy Temple Kalash Creates Panic Among Devotees snr

ಮಂಡ್ಯ(ನ.13): ನೂರಾರು ವರ್ಷಗಳ ಪುರಾತನ ಮಂಡ್ಯ ಜಿಲ್ಲೆ (Mandya) ಪಾಂಡವಪುರ ತಾಲೂಕಿನ (pandavapura taluk) ಐತಿಹಾಸಿಕ ಧಾರ್ಮಿಕ ಕ್ಷೇತ್ರ (Historical Temple) ಮೇಲುಕೋಟೆ (Melukote) ಯೋಗಾನರಸಿಂಹ ಸ್ವಾಮಿ ದೇವಾಲಯದ ಗೋಪುರ ಕಳಶ ಬಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. 

 ಮೇಲುಕೋಟೆ ಬೆಟ್ಟದ (Melukote Hill) ಮೇಲಿರುವ ಯೋಗಾನರಸಿಂಹ ಸ್ವಾಮಿ ಸನ್ನಿಧಿಯ ಗೋಪುರದಲ್ಲಿ ಕಳಶ ಬಾಗಿದ್ದು, ಕೆಡಕಿನ ಮುನ್ಸೂಚನೆಯೇ ಎಂಬ ಆತಂಕದಲ್ಲಿ ಭಕ್ತರಿದ್ದು (Devotees), ವಾಲಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಇದನ್ನು ಶೀಘ್ರ ದುರಸ್ಥಿ ಕಾರ್ಯ ನಡೆಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. 
 
ಮಂಡ್ಯ (mandya) ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ  ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲು ಕೋಟೆಯ ಪುರಾತನ ದೇವಾಲಯದ ರಾಜಗೋಪುರದಲ್ಲಿ ಭಿನ್ನವಾದ ಕಳಸವಿತ್ತು. ಇದೀಗ ಕಳಶ ಬಾಗಿರೋದು ಭಕ್ತ ವೃಂದ ಬೇಸರಗೊಂಡಿದೆ. 

ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆ ಇದ್ದು ಗರ್ಭ ಗುಡಿಯ ದೇವರ ದರ್ಶನದಷ್ಟೇ ಕಳಸ ದರ್ಶನವೂ ಇಲ್ಲಿ ಮಹತ್ವ ಪಡೆದಿತ್ತು.  ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದ್ದು (Hindu), ಶುಭ ಸಂಕೇತದ ಕಳಶ ಬಾಗಿದರೂ ಇಲ್ಲಿನ ಯಾವ ಅಧಿಕಾರಿಗಳು (Officers) ಈ ಬಗ್ಗೆ ಗಮನ ಹರಿಸಿಲ್ಲ.  ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದರೂ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ.  

ದೇಗುಲದ ಕಳಸ ಸರಿ ಪಡಿಸದ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಮೇಲುಕೋಟೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು,  ಜನರ ನಂಬಿಕೆ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ಶ್ರೀರಂಗ ಪಟ್ಟಣದ (Shrirangapattana) ಶ್ರೀರಂಗನಾಥ ಸ್ವಾಮಿಯ ದೇವಾಲಯದ ಕಳಶ ಬಿದ್ದಾಗ ಮಹಾರಾಜರ ಸಾವು ಸಂಭವಿಸಿತ್ತು.  ಕಳಶ ಬಿದ್ದ ಕೆಲವೇ ತಿಂಗಳಲ್ಲಿ  ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್  ನಿಧನರಾಗಿದ್ದರು. 

ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದಾಗಲೂ ನಿರ್ಲಕ್ಷ್ಯ ತೋರಲಾಗಿತ್ತು. ಈಗ ಯೋಗನರಸಿಂಹ ಸ್ವಾಮಿ ದೇವಾಲಯ ಕಳಶ ಬಾಗಿರುವುದರಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದ್ದು ಶೀಘ್ರ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು  ಕಳಶ ಮರು ಪ್ರತಿಷ್ಠಾಪಿಸುವಂತೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

  • ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ.
  • ಕೆಡಕಿನ ಮುನ್ಸೂಚನೆಯೇ ಎಂಬ ಆತಂಕದಲ್ಲಿ ಭಕ್ತರು!
  • ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿರೋದಕ್ಕೆ ಆತಂಕ. 
  • ಮೇಲುಕೋಟೆ ಬೆಟ್ಟದ ಯೋಗಾನರಸಿಂಹ ಸ್ವಾಮಿ ಸನ್ನಿಧಿಯ ಗೋಪುರದಲ್ಲಿ ಬಾಗಿರುವ ಕಳಶ.
  • ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ.

 ಕಳಸ ಕೆಡವಿದ್ದ ದುರುಳರು : ವಿಜಯನಗರ(ಅ.31): ದೇವಾಲಯದ(Temple) ಗೋಪುರದ ಕಳಸ ದುಷ್ಕರ್ಮಿಗಳು(Miscreants) ಕೆಡವಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ. 

ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿ(Huvina Hadagali) ತಾಲೂಕಿನ ಹಿರೇಹಡಗಲಿಯಲ್ಲಿರುವ ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. 

ನಿನ್ನೆ(ಶನಿವಾರ) ರಾತ್ರೋ ರಾತ್ರಿ  ಕಿಡಿಗೇಡಿಗಳು ಹಿರೇಹಡಗಲಿ ಗ್ರಾಮದ(Village) ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದ(Katte Basavaeshwara Temple) ಗೋಪುರದ ಕಳಸವನ್ನ ಕೆಡವಿ ಹಾಕಿ ಪರಾರಿಯಾಗಿದ್ದಾರೆ. 

ರಾತ್ರಿ ಕಾವಲುಗಾರರು(Security Guard) ಇಲ್ಲದೇ ಇರುವ ಸಮಯ ನೋಡಿಕೊಂಡು ದೇವಸ್ಥಾನದ ಕಳವನ್ನ ದುಷ್ಕರ್ಮಿಗಳು ಕೆಡವಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

ಘಟನಾ ಸ್ಥಳಕ್ಕೆ ಪುರಾತತ್ವ ಇಲಾಖೆ(Department of Archeology) ಅಧಿಕಾರಿಗಳು  ಹಾಗೂ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios