ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸನಾತನ ಧರ್ಮದ ಬಗ್ಗೆ ಪುತ್ರ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಮೈಸೂರು (ಜು.2): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin) ಅವರ ಪತ್ನಿ ದುರ್ಗಾ(Durga stalin) ಅವರು ಸೋಮವಾರ ಚಾಮುಂಡಿ ಬೆಟ್ಟ(Chamundi betta)ಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಗ ಸನಾತನ ಧರ್ಮ ನಾಶಕ್ಕೆ ಪಣ, ತಾಯಿ ದೈವಾರಾಧಕಳು!
ಸ್ಟಾಲಿನ್ ಅವರ ಪುತ್ರ, ಮಾಜಿ ಡಿಸಿಎಂ ಹಾಗೂ ಹಾಲಿ ತಮಿಳುನಾಡು ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ನಾಶ(Destruction of Sanatan Dharma) ಮಾಡಬೇಕು ಎಂದು ಇತ್ತೀಚೆಗೆ ವಿಧಾನಸಭೆಯ ಕಲಾಪದಲ್ಲಿಯೇ ಹೇಳಿಕೆ ನೀಡಿದ್ದರು. ಆದರೆ ಅವರ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿರುವುದು ಮಹತ್ವ ಪಡೆದುಕೊಂಡಿದೆ.
ದೇವಾಲಯಕ್ಕೆ ತೆರಳಿದ ನಂತರ ದುರ್ಗಾ ಸ್ಟಾಲಿನ್ ಅವರು ನಗರದ ವಿ.ವಿ.ಮೊಹಲ್ಲಾದಲ್ಲಿರುವ ಶಾಸಕ ಜಿ.ಟಿ. ದೇವೇಗೌಡರ(GT Devegowd) ನಿವಾಸಕ್ಕೆ ಭೇಟಿ ನೀಡಿ, ಜಿಟಿಡಿ ಕುಟುಂಬ ಆತಿಥ್ಯ ಸ್ವೀಕರಿಸಿದರು.
. ಜಿ.ಟಿ.ದೇವೇಗೌಡ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೂ ಆದ ಕೆ.ಲಲಿತಾ ಮತ್ತು ಕುಟುಂಬದವರು ದುರ್ಗಾ ಅವರನ್ನು ಸ್ವಾಗತಿಸಿ
ಕೊಡಗಿನ ಖಾಸಗಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬದವರು, ಸೋಮವಾರ ಕೊಡಗಿನಿಂದ ಮೈಸೂರಿಗೆ ರಸ್ತೆ ಮೂಲಕ ಪೊಲೀಸರ ಭದ್ರತೆಯಲ್ಲಿ ಆಗಮಿಸಿದರು. ನಂತರ ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.
ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೂ ಭೇಟೀ
ಅತ್ತ ಮಗ ಸನಾತನ ಹಿಂದೂ ಧರ್ಮವನ್ನು ಉಗ್ರವಾಗಿ ದೂಷಿಸುತಿದ್ದರೆ, ಇತ್ತ ತಾಯಿ ಮಾತ್ರ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ಈ ಹಿಂದೆ ಮಗನ ಹೇಳಿಕೆ ವಿವಾದ ನಡುವೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪತ್ನಿ ದುರ್ಗಾ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಮಾತ್ರವಲ್ಲ ತಾಯಿ ಮೂಕಾಂಬಿಕೆಗೆ ಚಿನ್ನದ ಕಿರೀಟವನ್ನೂ ಒಪ್ಪಿಸಿದ್ದರು.
ತಮಿಳುನಾಡಿನ ಸಾಕಷ್ಟು ಮಂದಿಯಂತೆ ದುರ್ಗಾ ಅವರು ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆಯಾಗಿದ್ದಾರೆ. ಅವರು ತನ್ನ ಕೆಲವು ಸ್ನೇಹಿತೆಯರೊಂದಿಗೆ ಕೊಲ್ಲೂರು ದೇವಾಲಯಕ್ಕೆ ಆಗಾಗ ಭೇಟಿ ನೀಡಿದ್ದಾರೆ. ಇದೀಗ ಇತ್ತೀಚೆಗೆ ನಡೆದ ತಮಿಳನಾಡು ಚುನಾವಣೆಯಲ್ಲಿ ಎಂಕೆ ಸ್ಟಾಲಿನ್, ಉದಯನಿಧಿ ಸ್ನಾಲಿನ್ ಹೀನಾಯ ಸೋಲಿನ ಬಳಿಕ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ತಂದೆ ಮಗ ಹಿಂದೂ ಧರ್ಮ, ಆಚರಣೆ ದ್ವೇಷಿಗಳಾದರೆ ದುರ್ಗಾ ಆರಾಧಕಳು ಎಂಥ ವಿಚಿತ್ರವಲ್ಲವೇ? .


