ಸನಾತನ ಧರ್ಮ ನಾಶಕ್ಕೆ ಕರೆಕೊಟ್ಟ ಉದಯನಿಧಿ ಸ್ಟಾಲಿನ್‌ಗೆ ಶೀಘ್ರದಲ್ಲಿ ಉಪಮುಖ್ಯಮಂತ್ರಿ ಪಟ್ಟ!

ತಮಿಳುನಾಡು ಸಿಎಂ ಸ್ಟಾಲಿನ್  ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ತಮ್ಮ ಸನಾತನ ಧರ್ಮ ನಾಶಕ್ಕೆ ಕರೆ ಕೊಟ್ಟು ಭಾರಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಆದರೆ ಉದಯನಿಧಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ಸನಾತನ ಧರ್ಮದ ನಾಶಕ್ಕೆ ಕರೆಕೊಟ್ಟ ಉದಯನಿಧಿ ಸ್ಟಾಲಿನ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತಿದೆ.

Udhayanidhi Stalin who calls eradication of Sanatana Dharma to become Tamil Nadu Deputy CM Soon ckm

ಚೆನ್ನೈ(ಜ.09) ಸನಾತನ ಧರ್ಮ ಡೆಂಗ್ಯೂ ಮೆಲೆರಿಯಾ ಇದ್ದಂತೆ, ಇದನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಕರೆಕೊಟ್ಟ ತಮಿಳುನಾಡು ಕ್ರೀಡಾ ಸಚಿವ ಉದನಿಧಿ ಸ್ಟಾಲಿನ್‌ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೇ ಉದಯನಿಧಿ ಸ್ಟಾಲಿನ್‌ಗೆ ಇದೀಗ ತಮಿಳುನಾಡು ಉಪಮುಖ್ಯಮಂತ್ರಿ ಪಟ್ಟ ಕಟ್ಟಲು ಎಲ್ಲಾ ಸಿದ್ಧತೆ ನಡೆದಿದೆ. ಸನಾತನ ಧರ್ಮದ ನಾಶಕ್ಕೆ ಕರೆಕೊಟ್ಟ ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ ಶೀಘ್ರದಲ್ಲೇ ತಮಿಳುನಾಡು ಉಪಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರೆ, ಅವರ ಪುತ್ರ ಇದೇ ಉದಯನಿಧಿ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆಯಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಎಂಕೆ ಸ್ಟಾಲಿನ್ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ಕುಟುಂಬದಲ್ಲಿರುವ ಡಿಎಂಕೆ ಹಿಡಿತ ಒಂದಿಂಚು ಕದಲದಂತೆ ಮಾಡಲು ಇದೀಗ ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ ಕಟ್ಟಲಾಗುತ್ತಿದೆ. ಎಂಕೆ ಸ್ಟಾಲಿನ್ ಅನುಪಸ್ಥಿತಿಯಲ್ಲಿ ಪುತ್ರ ಉದಯನಿಧಿ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಿ ತಮಿಳುನಾಡು ಜವಾಬ್ದಾರಿ ನಿರ್ವಹಿಸಲಿದ್ದಾರೆ.

 

ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ, ಮತ್ತೆ ವಿವಾದ ಸೃಷ್ಟಿಸಿದ ಸ್ಟಾಲಿನ್!

ಜನವರಿ 21 ರಂದು ಡಿಎಂಕೆ ಯೂಥ್ ವಿಂಗ್ ಘಟಕ ಮಹತ್ವದ ಸಭೆ ಕರೆದಿದೆ. ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಉದಯನಿಧಿ ಸ್ಟಾಲಿನ್ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಡಿಎಂಕೆ ಪಾರ್ಟಿ ನಾಯಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಉದಯನಿಧಿ ಸ್ಟಾಲಿನ್ ಪಕ್ಷದಲ್ಲಿ ಅತ್ಯಂತ ಸಕ್ರಿಯವಾಗಿದ್ದಾರೆ. ಅವರು ಸಮರ್ಥವಾಗಿ ಉಪಮುಖ್ಯಮಂತ್ರಿ ಸ್ಥಾನ ನಿರ್ವಹಿಸಲಿದ್ದಾರೆ ಎಂದು ಡಿಎಂಕೆ ಕಾರ್ಯದರ್ಶಿ ಟಿಕೆಎಸ್ ಎಳನಗೋವನ್ ಹೇಳಿದ್ದಾರೆ.

ಈ ಕುರಿತು ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ವಿದೇಶಿ ಪ್ರವಾಸ ತೆರಳುತ್ತಿದ್ದಾರೆ. ಈ ವೇಳೆ ಆಡಳಿತದಲ್ಲಿ ಯಾವುದೇ ಅಚಡಣೆಯಾಗಬಾರದು. ಜನಸಾಮಾನ್ಯರಿಗೆ ಸಮಸ್ಯೆಗಳು ಎದುರಾಗಬಾರದು. ಹೀಗಾಗಿ ಮುಖ್ಯಮಂತ್ರಿಗಳುು ತಮ್ಮ ಜವಾಬ್ದಾರಿಯನ್ನು ಇತರರಿಗೆ ವಹಿಸುವ ಸಾಧ್ಯತೆ ಇದೆ. ಆದರೆ ಉಪಮುಖ್ಯಮಂತ್ರಿ ಪಟ್ಟ ಯಾರಿಗೆ ನೀಡಬೇಕು ಅನ್ನೋದು ಸಿಎಂಗೆ ಬಿಟ್ಟ ವಿಚಾರ. ಈ ಕುರಿತು ನನಗೇನು ತಿಳಿದಿಲ್ಲ. ಪಕ್ಷದ ಹಿರಿಯರು ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿರ್ಧರಿಲಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

 

ಪಾಕ್ ಕ್ರಿಕೆಟಿಗನ ಮುಂದೆ ಜೈಶ್ರೀರಾಮ್ ಘೋಷಣೆ ತಪ್ಪೆಂದ ಉದನಿಧಿ ಸ್ಟಾಲಿನ್, ಅಣ್ಣಾಮಲೈ ತಿರುಗೇಟು!
 

Latest Videos
Follow Us:
Download App:
  • android
  • ios