ರಸ್ತೆಯಲ್ಲಿ ವ್ಯಾಪಾರಿಯೊಬ್ಬರು ರಸ್ತೆಬದಿಯ ಕೆಸರು ನೀರಿನಲ್ಲಿ ಶುಂಠಿ ತೊಳೆದು ಮಾರಾಟಕ್ಕಿಟ್ಟಿದ್ದಾರೆ. ಈ ಕಲುಷಿತ ನೀರಿನ ಬಳಕೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇಂತಹ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಂಗಳೂರು: ಬಿಕರ್ನಕಟ್ಟೆ-ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕೆಸರು ನೀರಿನಲ್ಲಿ ಶುಂಠಿಯನ್ನು ತೊಳೆದು ಸ್ವಚ್ಚಗೊಳಿಸಿದ ಘಟನೆ ನಡೆದಿದೆ.

ವ್ಯಾಪಾರಿ ರಸ್ತೆ ಬದಿಯ ಹೊಂಡದಲ್ಲಿ ನಿಂತಿದ್ದ ಕಲುಷಿತ ಹಾಗೂ ನಿಂತ ನೀರನ್ನು ಬಳಸಿ ಶುಂಠಿಯನ್ನು ತೊಳೆದು ಬಳಿಕ ಮಾರಾಟಕ್ಕೆ ಇಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ವಾಹನ ಸವಾರರು ಹಾಗೂ ಪಾದಾಚಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿರುವ ನೀರಿನಲ್ಲಿ ಆಹಾರ ಪದಾರ್ಥಗಳನ್ನು ತೊಳೆಯುವುದರಿಂದ ಅವುಗಳಿಗೆ ಮಣ್ಣು, ಬ್ಯಾಕ್ಟೀರಿಯಾ ಹಾಗೂ ಇತರ ಮಾಲಿನ್ಯಕಾರಕಗಳು ಅಂಟಿಕೊಳ್ಳುವ ಸಾಧ್ಯತೆಯಿದ್ದು, ಅನಾರೋಗ್ಯಕ್ಕೆ ಕಾರಣವಾಗಲಿದ್ದು, ಇಂತಹದಕ್ಕೆ ಕಡಿವಾಣ ಹಾಕಬೇಕಾಗಿದ್ದು, ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಭಾಭವನ ಕಾಮಗಾರಿ ಪ್ರಗತಿ ಪರಿಶೀಲನೆ

ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಿರ್ಮಾಣ ಹಂತದಲ್ಲಿರುವ ಹವಾ ನಿಯಂತ್ರಿತ ಸಭಾ ಭವನದ ಕಾಮಗಾರಿ ಬಗ್ಗೆ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಸಭೆ ಜರಗಿತು.ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಭಾಭವನದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲರ ಸಹಕಾರ ಬೇಕೆಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ಆರ್ಕಿಟೆಕ್ಟ್ ಗೋಪಾಲ್ ಭಟ್ ಎ ಜಿ ಅಸೋಸಿಯೇಟ್ ಉಡುಪಿ ತಾರಾನಾಥ್ ಶೆಟ್ಟಿ ಮುಂಬೈ, ಸಹಾಯಕ ಇಂಜಿನಿಯರ್ ಧೀರಜ್ ಉಡುಪಿ ,ನಿರ್ಮಾಣ ಕಾಮಗಾರಿಯ ಕಂಟ್ರಾಕ್ಟರ್ ಶಿವಪ್ರಸಾದ್ ರೈ, ರವಿ ರಾಜ್ ಶೆಟ್ಟಿ ಜತ್ತಬೆಟ್ಟು, ಹಾಗೂ ಹವಾ ನಿಯಂತ್ರಣ ಸರಬರಾಜುದಾರ ಎಲೆಕ್ಟ್ರಿಕಲ್ ಕಾಮಗಾರಿಯ ಮುಖ್ಯಸ್ಥರು ಹಾಗೂ ಕನ್ಸಲ್ಟೆಂಟ್ ಫಾಲ್ಸ್ ಸೀಲಿಂಗ್, ಸೌಂಡ್ ಸಿಸ್ಟಮ್, ಅಕೋಸ್ಟಿಕ್ ಅಳವಡಿಕೆದಾರರು ಉಪಸ್ಥಿತರಿದ್ದರು.

ಇದನ್ನೂ ಓದಿ: ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಮೂವರು ನಾಪತ್ತೆ, ಓರ್ವನ ಶವ ಪತ್ತೆ, ಇಬ್ಬರಿಗಾಗಿ SDRF ಶೋಧ!