ಸೋಂಕಿತ ತಂದೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕರ್ತವ್ಯನಿರತ ವೈದ್ಯರ ಮೇಲೆ ಮೃತನ ಮಗ ಹಲ್ಲೆ  ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಘಟನೆ

ಬಳ್ಳಾರಿ (ಮೇ.24):ಕೋವಿಡ್‌ ಸೋಂಕಿತ ತಂದೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕರ್ತವ್ಯನಿರತ ವೈದ್ಯರ ಮೇಲೆ ಮೃತನ ಮಗ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ವಿಮ್ಸ್‌ ಆಸ್ಪತ್ರೆಯಲ್ಲಿ ಭಾನುವಾರ ಜರುಗಿದೆ. ಡಾ.ಪ್ರಿಯದರ್ಶಿನಿ ಹಲ್ಲೆಗೊಳಗಾದ ವೈದ್ಯೆ.

Add Asianetnews Kannada as a Preferred SourcegooglePreferred

 ಸಂಗನಕಲ್ಲು ಗ್ರಾಮದ ಮಲ್ಲಿಕಾರ್ಜುನಗೌಡ ಹೃದಯಸಂಬಂಧಿ ಕಾಯಿಲೆ ಹಾಗೂ ಕೋವಿಡ್‌ನಿಂದ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಮೃತ ವ್ಯಕ್ತಿಯ ಮಗ ತಿಪ್ಪೇಸ್ವಾಮಿ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಪ್ರಿಯದರ್ಶಿನಿ ಮೇಲೆ ಹಲ್ಲೆ ನಡೆಸಿದ್ದಾರೆ. 

'ವೈದ್ಯರ ನಡೆ ಹಳ್ಳಿಗಳ ಕಡೆ' ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್ ..

ಈ ದೃಶ್ಯ ಸಿಸಿ ಕ್ಯಾಮೆ​ರಾದಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಆರೋಪಿ ತಿಪ್ಪೇಸ್ವಾಮಿ ವಿರುದ್ಧ ಕೌಲ್‌ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕೋವಿಡ್‌ ಸೋಂಕಿತರ ಪ್ರಥಮ ಸಂಪರ್ಕಿತವಾಗಿರುವುದರಿಂದ ಇನ್ನೂ ಬಂಧಿಸಲಾಗಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona