'ವೈದ್ಯರ ನಡೆ ಹಳ್ಳಿಗಳ ಕಡೆ'   ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್

* ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಯೋಜನೆ ಜಾರಿಗೆ ಮುಂದಾದ ಸರ್ಕಾರ
* ವೈದ್ಯರ ಜೊತೆಗೆ ತರಬೇತಿ ಅವಧಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಳಕೆ
* ಮೊಬೈಲ್ ಕ್ಲಿನಿಕ್ ಮೂಲಕ ಜಾರಿಗೆ ಬರಲಿದೆ ವೈದ್ಯರ ನಡೆ ಹಳ್ಳಿಗಳ‌ ಕಡೆ
* ಹಳ್ಳಿ ಹಳ್ಳಿಗೆ ತೆರಳುವ ಮೊಬೈಲ್ ಕ್ಲಿನಿಕ್ ಎಲ್ಲರ ತಪಾಸಣೆ ನಡೆಸಲಿದೆ

Karnataka Fights Corona Vaidyara nade halligala kade mobile clinic rounds in every village mah

ಬೆಂಗಳೂರು(ಮೇ 23) ಕೊರೋನಾ ನಿಯಂತ್ರಣಕ್ಕೆ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಸರ್ಕಾರ ಹಳ್ಳಿಗಳಲ್ಲಿ ಕೊರೋನಾ ಸೋಂಕು ಕಂಟ್ರೋಲ್  ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ಗೊತ್ತಿರುವ ವಿಚಾರ.  ಇದೀಗ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಯೋಜನೆ ಜಾರಿ ಮಾಡಿದೆ.

ವೈದ್ಯರ ಜೊತೆಗೆ ತರಬೇತಿ ಅವಧಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಳಕೆಗೆ ನಿರ್ಧಾರ ಮಾಡಲಾಗಿದೆ. ಮೊಬೈಲ್ ಕ್ಲಿನಿಕ್ ಮೂಲಕ  ವೈದ್ಯರು ಹಳ್ಳಿಗೆ ತೆರಳಲಿದ್ದಾರೆ.

ಕೊರೋನಾಕ್ಕೆ ಹೆದರಿ ಮಂತ್ರಿಸಿದ ತೆಂಗಿನಕಾಯಿ ಮೊರೆಹೋದರು

ಹಳ್ಳಿ ಹಳ್ಳಿಗೆ ತೆರಳುವ ಮೊಬೈಲ್ ಕ್ಲಿನಿಕ್ ಎಲ್ಲರ ತಪಾಸಣೆ ನಡೆಸಲಿದೆ. ಹಳ್ಳಿಯಲ್ಲೇ‌ ಚಿಕಿತ್ಸೆ, ಅಗತ್ಯ ಇದ್ದವರನ್ನ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ರವಾನಿಸಲಿದೆ. ಕೊರೊನಾ ಔಷಧ ಕಿಟ್ ಅನ್ನು ಮೊಬೈಲ್‌ ಕ್ಲಿನಿಕ್ ಹಳ್ಳಿ ಹಳ್ಳಿಯಲ್ಲೂ ವಿತರಿಸಲಿದೆ.

ಕೊರೋನಾ ನಿಯಮಾವಳಿಗಳ ಪಾಲನೆ ಮಾಡಿಕೊಂಡು ಈ ಮೊಬೈಲ್ ಕ್ಲಿನಿಕ್ ಕೆಲಸ ಮಾಡಲಿದೆ. ಕಂದಾಯ ಸಚಿವ ಆರ್. ಅಶೋಕ್ ಕೆಲ ದಿನಗಳ ಹಿಂದೆಯೇ ಯೋಜನೆಯ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ  ಹಾಗೂ ಜಿಲ್ಲಾಡಳಿತ ಆಯಾ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿದೆ. 

"

Latest Videos
Follow Us:
Download App:
  • android
  • ios