183 ದಿನಗಳಿಂದ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವು!

ಜಮೀನು ವಿಚಾರಕ್ಕೆ ಸಂಬಂಧಿಸಿ ಶ್ರೀ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ-ಬೆನಕಹಳ್ಳಿ ಗ್ರಾಮದಲ್ಲಿ  ನಡೆದಿದೆ.

Land sale issue  farmer died during a sit-in against a cement factory at kalaburagi district rav

ಕಲಬುರಗಿ (ಮೇ.28) : ಜಮೀನು ವಿಚಾರಕ್ಕೆ ಸಂಬಂಧಿಸಿ ಶ್ರೀ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ-ಬೆನಕಹಳ್ಳಿ ಗ್ರಾಮದಲ್ಲಿ  ನಡೆದಿದೆ.

ರೈತ ದೇವಿಂದ್ರಪ್ಪ(50) ಧರಣಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿ. ಕಳೆದ 183 ದಿನಗಳಿಂದ ಸಿಮೆಂಟ್ ಫ್ಯಾಕ್ಟರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ ನೂರಾರು ರೈತರು. ಅನಾರೋಗ್ಯದಲ್ಲೂ ಅನ್ಯಾಯದ ವಿರುದ್ಧ ಧರಣಿ ಕುಳಿತಿದ್ದ ದೇವಿಂದ್ರಪ್ಪ 

ಸಿಮೆಂಟ್ ಫ್ಯಾಕ್ಟರಿಗೆ ಜಮೀನು ಮಾರಾಟ:

ಶ್ರೀ ಸಿಮೆಂಟ್ ಕಂಪನಿಗೆ 2.20 ಎಕರೆ ಜಮೀನು ಮಾರಾಟ ಮಾಡಿದ್ದ ರೈತ. ಹಲವಾರು ರೈತರು ಜಮೀನು ಮಾರಾಟ ಮಾಡಿದ್ದರು. ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಜಮೀನು ಖರೀದಿಸಿದ್ದ ಕಂಪನಿ. ಆದರೆ ಜಮೀನು ಮಾರಾಟ ಮಾಡಿದ ಬಳಿಕ ಮಾತಿನಂತೆ ರೈತರಿಗೆ ಉದ್ಯೋಗ ನೀಡಿಲ್ಲ. ಸೂಕ್ತ ಪರಿಹಾರವೂ ನೀಡದ ಕಂಪನಿ. ಇತ್ತ ಇದ್ದ ಜಮೀನು ಕಳೆದುಕೊಂಡು ಉದ್ಯೋಗವಿಲ್ಲದೆ ಕಂಗಲಾಗಿರುವ ರೈತರು. ಹೀಗಾಗಿ ಕಳೆದ 183 ದಿನಗಳಿಂದ ಸೂಕ್ತ ಪರಿಹಾರ/ ಉದ್ಯೋಗ ನೀಡುವಂತೆ ನಿರಂತರವಾಗಿ ಧರಣಿ ನಡೆಸುತ್ತಿರು ರೈತರು. ಧರಣಿ ವೇಳೆ ದೇವಿಂದ್ರಪ್ಪ ಸಾವು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 3 ದಿನದಲ್ಲಿ ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ

ಆನೆ ದಾಳಿಗೆ ಕಾಡಿನಲ್ಲಿ ಹಸು

ಆನೇಕಲ್‌: ಮಹಿಳೆಯೋರ್ವರು ಸಮೀಪದ ಕಾದಂಚಿನಲ್ಲಿ ಹಸು ಮೆಯಿಸುತ್ತಿದ್ದ ವೇಳೆ ಕಾಡಾನೆಯೊಂದು ಹಠಾತ್‌ ದಾಳಿ ನಡೆಸಿ ಕೊಂದಿರುವ ಘಟನೆ ಬೆಂಗಳೂರು ದಕ್ಷಿಣ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.

ಮಹದೇವಮ್ಮ(48) ಕಾಡಾನೆ ದಾಳಿಯಿಂದ ಮೃತಪಟ್ಟಮಹಿಳೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಮೃತ ಮಹಿಳೆ ಅನಧಿಕೃತವಾಗಿ ಕಾಡು ಪ್ರವೇಶಿಸಿದರು. ಹಾಗಾಗಿ ಸಾವು ಸಂಭವಿಸಿದ್ದು, ಅರಣ್ಯಾ ಧಿಕಾರಿಗಳು ನೊಂದ ಕುಟುಂಬದ ಸದಸ್ಯರಿಗೆ ಕೂಡಲೇ ಶವವನ್ನ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದರೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಮೃತಳ ಕುಟುಂಬಸ್ಥರು, ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನವೇ ಘಟನೆಗೆ ಕಾರಣವೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಆಲಿಕಲ್ಲು ಮಳೆಗೆ ಬೀದರ್‌ ರೈತ ಸಾವು: ಸಾವಿರಾರು ಎಕರೆ ಬಿಳಿಜೋಳ, ಮಾವು ಬೆಳೆ ನಷ್ಟ

ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಕುಟುಂಬ ಸದಸ್ಯ ರೊಬ್ಬರಿಗೆ ಉದ್ಯೋಗ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಬನ್ನೇರುಘಟ್ಟಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶವವನ್ನು ವಾರಸುದಾರರ ವಶಕ್ಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios