ನಷ್ಟ ಸರಿದೂಗಿಸಲು ಕೆಎಸ್‌ಆರ್‌ಟಿಸಿ ಹಳೆಯ ಬಸ್‌ಗಳಿಗೆ ಹೊಸ ರೂಪ..!

ಹೊಸ ಬಸ್‌ಗಳನ್ನು ಕೊಂಡುಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ. ರೊರೋನಾದಿಂದ ಕೆಎಸ್‌ಆರ್‌ಟಿಸಿಗೆ ಸಾಕಷ್ಟು ನಷ್ಟವಾಗಿದ್ದು ಇದನ್ನು ಸರಿದೂಗಿಸಲು ಹಳೇ ಬಸ್‌ಗಳನ್ನೇ ರಿಪೇರಿ ಮಾಡಿ, ರಸ್ತೆಗೆ ಇಳಿಸಲು ಮುಂದಾದ ಕೆಎಸ್‌ಆರ್‌ಟಿಸಿ 

KSRTC Revamps Old Buses to Compensate for Losses in Karnataka grg

ಚಿಕ್ಕಬಳ್ಳಾಪುರ(ಜು.22): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲ ವಿಭಾಗೀಯ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳ ನವೀಕರಣ ಪ್ರಾರಂಭಿಸಿದೆ. ಹೌದು ಹೊಸ ಬಸ್‌ಗಳನ್ನು ಕೊಂಡುಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ. ರೊರೋನಾದಿಂದ ಕೆಎಸ್‌ಆರ್‌ಟಿಸಿಗೆ ಸಾಕಷ್ಟು ನಷ್ಟವಾಗಿದ್ದು ಇದನ್ನು ಸರಿದೂಗಿಸಲು ಹಳೇ ಬಸ್‌ಗಳನ್ನೇ ರಿಪೇರಿ ಮಾಡಿ, ರಸ್ತೆಗೆ ಇಳಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿಯ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ‘ಕನ್ನಡಪ್ರಭ’ ದೊಂದಿಗೆ ಮಾತನಾಡಿ, ಹೊಸ ಬಸ್‌ಗಳನ್ನು ಖರೀದಿಸುವ ಬದಲು ಹಳೆಯ ಬಸ್‌ಗಳನ್ನು ನವೀಕರಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಹೊಸ ಬಸ್‌ಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಈಗಿರುವ ಹಳೇ ಬಸ್‌ಗಳನ್ನೇ ನವೀಕರಿಸಿ ರಸ್ತೆಗೆ ಇಳಿಸಲು ನಿರ್ಧರಿಸಿದ್ದು, ಪ್ರತಿ ಬಸ್‌ಗೆ ಸುಮಾರು 3ರಿಂದ 4 ಲಕ್ಷ ರುಪಾಯಿ ವೆಚ್ಚವಾಗಲಿದೆ ಎಂದರು.

ಕೆಎಸ್‌ಆರ್‌ಟಿಸಿ ಚಾಲಕ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಯತ್ನ: ಗೃಹ ಸಚಿವ ಪರಮೇಶ್ವರ್

ಹೊಸ ಉಪಕರಣ, ಹೊಸ ಬಾಡಿ

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿಯ 8,100 ಬಸ್‌ಗಳು ತಲಾ 10ಲಕ್ಷ ಕಿಮೀಕ್ಕಿಂತ ಹೆಚ್ಚು ಸಂಚರಿಸಿದ ನಂತರ ನಿಂತಿವೆ. ಹೀಗೆ ನಿಂತ ನಿಗಮದ ಸುಮಾರು 1,000 ಬಸ್‌ಗಳನ್ನು ನವಿಕರಿಸಲಾಗುತ್ತಿದ್ದು, ಕಳೆದ ಜುಲೈ-ಆಗಸ್ಟ್‌ನಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಭಾಗಗಳನ್ನು ಹೊರ ತೆಗೆದು ಹೊಸ ಉಪಕರಣ ಜೋಡಿಸಲಾಗುವುದು. ಬಸ್‌ನ ಬಾಡಿಯನ್ನು ಹೊಸದಾಗಿ ತಯಾರಿಸಿ ಅಳವಡಿಸಲಾಗುವುದು. ಪ್ಯಾನೆಲಿಂಗ್‌ ಕೆಲಸ ಮುಗಿದಿದೆ, ಬಸ್‌ನ ಹೊರಭಾಗಕ್ಕೆ ಹೊಸ ಲೋಹದ ಹಾಳೆಗಳನ್ನು ಬಳಸಲಾಗುತ್ತದೆ. ಕಿಟಕಿಗಳು ಮತ್ತು ವಿಂಡ್‌ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತದೆ. ಹೊಸ ಸೀಟ್‌ ಕುಶನ್‌ಗಳು ಮತ್ತು ಕವರ್‌ಗಳನ್ನು ಹಾಕುತ್ತೇವೆ. ಎಂಜಿನ್‌ ಹದಗೆಟ್ಟಿದ್ದರೇ ನಮ್ಮ ಕಾರ್ಯಾಗಾರಗಳಲ್ಲಿಯೇ ನಮ್ಮ ಎಂಜಿನಿಯರ್‌ಗಳೇ ರಿಪೇರಿ ಮಾಡುತ್ತಾರೆ ಎಂದು ವಿವರಿಸಿದರು.

ನವೀಕರಣಕ್ಕಾಗಿ ನಾವು ಆಯ್ಕೆ ಮಾಡಿದ ಬಸ್‌ಗಳು ಸುಮಾರು 11-12 ವರ್ಷಗಳಷ್ಟು ಹಳೆಯವು, ಆದರೆ ಹೆಚ್ಚಿನ ಬಳಕೆಯಿಂದಾಗಿ ಸ್ಕ್ರ್ಯಾಪ್‌ ಆಗುವ ಅಂಚಿನಲ್ಲಿದ್ದವು. ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಕಿ.ಮೀ.ಗಟ್ಟಲೇ ಸಂಚರಿಸಿದ ಹಳೆಯ ಕೆಎಸ್‌ಆರ್‌ ಟಿಸಿ ಬಸ್‌ಗಳಿಗೆ ಈಗ ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ಪ್ರಾದೇಶಿಕ ಉಪ ವಿಭಾಗದ ವರ್ಕ್ಶಾಪ್‌ನಲ್ಲಿ ಹೊಸ ರೂಪ ನೀಡಲಾಗುತ್ತಿದೆ ಎಂದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ವಿಮೆ: ಇಷ್ಟು ಬೃಹತ್‌ ಮೊತ್ತದ ಪರಿಹಾರ ದೇಶದಲ್ಲೇ ಮೊದಲು..!

12 ಹಳೆ ಬಸ್‌ಗಳಿಗೆ ಹೊಸ ಕವಚ

ಇಲ್ಲಿಯವರೆಗೂ ಚಿಕ್ಕಬಳ್ಳಾಪುರ ಉಪ ವಿಭಾಗದ ಕೆಎಸ್‌ಆರ್‌ಟಿಸಿ ವರ್ಕ್ಶಾಪ್‌ನಲ್ಲಿ ಹಳೆಯ 12 ಕೆಎಸ್‌ಆರ್‌ ಟಿಸಿ ಬಸ್‌ಗಳಿಗೆ ಹೊಸರೂಪದಲ್ಲಿ ಕವಚ ನಿರ್ಮಾಣ ಮಾಡುವ ಮೂಲಕ ಸಂಪೂರ್ಣ ಹೊಸ ಮಾದರಿಯಾಗಿ ಬಸ್‌ಗಳನ್ನು ಸಜ್ಜುಗೊಳಿಸಿ ಪ್ರಯಾಣಿಕರ ಸೇವೆಗೆ ಒದಗಿಸುತ್ತಿದೆ. ಹೊಸ ಬಸ್‌ ಖರೀದಿಸಬೇಕಾದರೆ ಕೆಎಸ್‌ ಆರ್‌ಟಿಸಿಗೆ ಕನಿಷ್ಠ 30 ಲಕ್ಷ ವೆಚ್ಚ ಆಗುತ್ತದೆ. ಆದರೆ ಕೇವಲ 3 ರಿಂದ 4 ಲಕ್ಷ ರೂ. ವೆಚ್ಚದಲ್ಲಿ ಮಾತ್ರ ಹೊಸ ಬಸ್‌ಗಳ ಮಾದರಿಯಲ್ಲಿ ಬಸ್‌ಗಳನ್ನು ತಾಂತ್ರಿಕವಾಗಿ ಗುಣಮಟ್ಟದಿಂದ ಸಿದ್ಧಪಡಿಸುವ ಕೆಲಸವನ್ನು ಸ್ಥಳೀಯವಾಗಿ ಕೈಗೊಳ್ಳುವ ಮೂಲಕ ಜಿಲ್ಲೆಯ ಕೆಎಸ್‌ಆರ್‌ಟಿಸಿ ಅ​ಧಿಕಾರಿಗಳು ಗಮನ ಸೆಳೆಯುತ್ತಿದ್ದಾರೆ.

ಬೆಂಗಳೂರು ಮಹಾನಗರದ ಬಿಎಂಟಿಸಿ ಬಸ್‌ಗಳಿಗೆ ಇರುವ ಮಾದರಿಯಲ್ಲಿ ಹಳೆಯ ಕೆಎಸ್‌ಆರ್‌ಟಿಸಿ ಬಸ್‌ ಗಳಿಗೆ ಕವಚ ನಿರ್ಮಾಣದ ವೇಳೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರದ ಪ್ರಾದೇಶಿಕ ವರ್ಕ್ಶಾಪ್‌ನಲ್ಲಿ ಇದೇ ಮೊದಲ ಬಾರಿಗೆ ಕವಚ ನಿರ್ಮಾಣ ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios