ಕೆಎಸ್‌ಆರ್‌ಟಿಸಿ ಚಾಲಕ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಯತ್ನ: ಗೃಹ ಸಚಿವ ಪರಮೇಶ್ವರ್

ಮಂಡ್ಯ ಜಿಲ್ಲೆಯ ನಾಗಮಂಗಲ ಕೆಎಸ್‌ಆರ್‌ಟಿಸಿ ಡಿಪೋದ ಚಾಲಕ ಕಂ ನಿರ್ವಾಹಕ ಎಚ್‌.ಆರ್‌.ಜಗದೀಶ್‌ ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಚೋದನೆ ಇಲ್ಲ ಎಂದು ಸಿಐಡಿ ವರದಿ ನೀಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸದನದಲ್ಲಿ ತಿಳಿಸಿದರು.

KSRTC bus driver jagadish suicide case home minister dr g parameshwar statement at bengaluru rav

ವಿಧಾನಸಭೆ (ಜು.21) :  ಮಂಡ್ಯ ಜಿಲ್ಲೆಯ ನಾಗಮಂಗಲ ಕೆಎಸ್‌ಆರ್‌ಟಿಸಿ ಡಿಪೋದ ಚಾಲಕ ಕಂ ನಿರ್ವಾಹಕ ಎಚ್‌.ಆರ್‌.ಜಗದೀಶ್‌ ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಚೋದನೆ ಇಲ್ಲ ಎಂದು ಸಿಐಡಿ ವರದಿ ನೀಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸದನದಲ್ಲಿ ತಿಳಿಸಿದರು.

ಇತ್ತೀಚೆಗೆ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ನಡುವೆ ತೀವ್ರ ವಾಗ್ಯುದ್ದಕ್ಕೆ ಕಾರಣವಾಗಿದ್ದ ಈ ಪ್ರಕರಣದ ತನಿಖಾ ವರದಿಯನ್ನು ಗೃಹ ಸಚಿವರು ಗುರುವಾರ ಸದನದಲ್ಲಿ ವಿವರಿಸಿದರು.

ಬಿಎಂಟಿಸಿ ಚಾಲಕನಿಗೆ ಅನಾರೋಗ್ಯ, ಬಸ್ ಚಲಾಯಿಸಿ ಮಾನವೀಯತೆ ಮೆರೆದ ಎಸಿಪಿ

 

ಆದರೆ, ಈ ತನಿಖಾ ವರದಿ ಬಗ್ಗೆ ಆಡಳಿತ ಪಕ್ಷದ ಸದಸ್ಯ ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿ ವರದಿ ನ್ಯಾಯೋಚಿತವಾಗಿಲ್ಲ, ಯಾರನ್ನೋ ಮೆಚ್ಚಿಸಲು ವರದಿ ನೀಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಚಿವ ಚೆಲುವರಾಯಸ್ವಾಮಿ ದನಿಗೂಡಿಸಿ, ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಚಿಕಿತ್ಸೆ ತಡವಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರಣ. ಏಕೆಂದರೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ವರ್ಗಾವಣೆ ಮಾಡುವುದು ಬೇಡವೆಂದು ತಾನೇ ಹೇಳಿದ್ದಾಗಿ ಸದನದಲ್ಲೇ ಹೇಳಿದ್ದಾರೆ. ಹಾಗೆ ಹೇಳಲು ಕಾರಣವೇನು? ನಂತರ ಮಾಜಿ ಸಚಿವ ಹಾಗೂ ಅವರ ಬೆಂಬಲಿಗರು ಆ ಚಾಲಕನನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಅನ್ನು ಟಿ.ಬಿ.ಕ್ರಾಸ್‌ ಬಳಿ ತಡೆದಿದ್ಯಾಕೆ. ಮಾಜಿ ಸಚಿವರು ಆ ಚಾಲಕನನ್ನು ದುರುದ್ದೇಶಕ್ಕೆ ಬಳಸಿಕೊಂಡಿದ್ದಾರೆ.

ಜಗದೀಶ್‌ಗೆ ಡೆತ್‌ನೋಟ್‌ ಹೆಸರಲ್ಲಿ ನವೀನ್‌ ಕುಮಾರ್‌ ಎಂಬಾತ ಪತ್ರ ಬರೆದುಕೊಡಲು ಯಾರ ಚಿತಾವಣೆ ಇದೆ? ಕುಮಾರಸ್ವಾಮಿ ಮತ್ತು ಅವರ ತಂಡ ಜಿಲ್ಲೆಯ ಎಲ್ಲ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಅವಹೇಳನ ಮಾಡಿದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಬಳಿಕ ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್‌, ಸದ್ಯದ ವರದಿ ಆ ವ್ಯಕ್ತಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಎನ್ನುವುದಕ್ಕಷ್ಟೆಸೀಮಿತವಾಗಿದೆ. ಶಾಸಕರು, ಸಚಿವರ ಆಗ್ರಹದಂತೆ ಇನ್ನಷ್ಟುವ್ಯಾಪಕವಾಗಿ ತನಿಖೆ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ವರದಿಯ ವಿವರಣೆ ನೀಡಿದ ಸಚಿವರು, 38 ಸಾಕ್ಷಿದಾರರ ವಿಚಾರಣೆ ನಡೆಸಿ ಸಿಐಡಿ ಪೊಲೀಸರು ವರದಿ ನೀಡಿದ್ದಾರೆ. ಜಗದೀಶ್‌ ಮದ್ದೂರು ಡಿಪೋಗೆ ತನ್ನನ್ನು ವರ್ಗಾವಣೆ ಮಾಡಿದ್ದನ್ನು ರದ್ದುಪಡಿಸುವಂತೆ ಅಧಿಕಾರಗಳ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿ ತನ್ನ ಸಹೋದ್ಯೋಗಿ ಚಾಲಕ ಕಂ ನಿರ್ವಾಹಕ ನವೀನ್‌ ಕುಮಾರ್‌ ಎಂಬಾತನಿಂದ ಬರೆಸಿದ ಪತ್ರಕ್ಕೆ ಸಹಿ ಹಾಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ವೈಯಕ್ತಿಕ ಕಾರಣದ ಹೊರತು ಯಾವುದೇ ರಾಜಕೀಯ ಒತ್ತಡ, ವೈಯಕ್ತಿಕ ಪ್ರಚೋದನೆ ಇಲ್ಲ ಎಂದು ವರದಿಯಲ್ಲಿ ತಿಳಿಸಿರುವುದಾಗಿ ಹೇಳಿದರು.

ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌: ವರ್ಗಾವಣೆಗೆ ಬೇಸತ್ರಾ ಜಗದೀಶ್‌..?

 

ಸಿಐಡಿ ಐದು ಶಿಫಾರಸು:

ಜಗದೀಶ್‌ಗೆ ಪತ್ರ ಬರೆದುಕೊಟ್ಟಿದ್ದಲ್ಲದೆ ಈ ವಿಚಾರವನ್ನು ಮೊದಲೇ ಅಧಿಕಾರಿಗಳ ಗಮನಕ್ಕೆ ತರದೆ ಬೇಜವಾಬ್ದಾರಿ ತೋರಿದ ನವೀನ್‌ ಕುಮಾರ್‌, ಡಿಪೋದ ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್‌ ಎಸ್‌.ಎಲ್‌. ವಿರುದ್ಧ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲು, ಹಾಗೂ ಚಾಲಕ ಇದ್ದ ಆಂಬ್ಯುಲೆ®್ಸ… ತಡೆದವರ ವಿರುದ್ಧ ಕಾನೂನು ಕ್ರಮಕ್ಕೂ ಸಿಐಡಿ ಶಿಪಾರಸು ಮಾಡಿದೆ ಎಂದು ಸದನಕ್ಕೆ ತಿಳಿಸಿದರು. ಅಲ್ಲದೆ, ಈ ಪ್ರಕರಣ ಸಂಬಂಧ ನೀಡಿದ ದೂರಿನ ಬಗ್ಗೆ ಎಫ್‌ಐಆರ್‌ ದಾಖಲಿಸಿ ಕ್ರಮ ವಹಿಸಿದ ಸ್ಥಳೀಯ ಠಾಣಾಧಿಕಾರಿ ಅಶೋಕ್‌ ಕುಮಾರ್‌ ವಿರುದ್ಧವೂ ಕ್ರಮಕ್ಕೆ ಸಿಐಡಿ ಶಿಫಾರಸು ಮಾಡಿದೆ. ಅದರಂತೆ ಕ್ರಮ ವಹಿಸಲಾಗುವುದು ಎಂದರು.

Latest Videos
Follow Us:
Download App:
  • android
  • ios