Asianet Suvarna News Asianet Suvarna News

ರಾಜ್ಯದ ಮೊದಲ ಸಿಎನ್‌ಜಿ ಖಾಸಗಿ ಬಸ್ಸು ಸಂಚಾರ : ಎಲ್ಲಿಂದ - ಎಲ್ಲಿಗೆ..?

  •  ರಾಜ್ಯದ ಮೊದಲ ಸಿಎನ್‌ಜಿ ಖಾಸಗಿ ಬಸ್ಸು ಸಂಚಾರ : ಎಲ್ಲಿಂದ - ಎಲ್ಲಿಗೆ..?
  •  ನಾಯಕನಹಟ್ಟಿಉದ್ಯಮಿಯಿಂದ 2 ಸಿಎನ್‌ಜಿ ಬಸ್ಸುಗಳ ಖರೀದಿ
  •  ಕಡಿಮೆ ಸದ್ದು, ಕಡಿಮೆ ಹೊಗೆ ಸಿಎನ್‌ಜಿ ಬಸ್‌ಗಳ ವಿಶೇಷ
  •  ನಾಯಕನಹಟ್ಟಿಯಿಂದ ಶಿವಮೊಗ್ಗ, ಬೆಂಗ್ಳೂರು ನಡುವೆ ಸಂಚಾರ
     
Karnataka First CNG Bus Service Begins on January 5th snr
Author
Bengaluru, First Published Jan 5, 2022, 8:17 AM IST

 ಚಿತ್ರದುರ್ಗ (ಜ.05):  ರಾಜ್ಯದ ಮೊದಲ ಸಿಎನ್‌ಜಿ (CNG)  ಇಂಧನ ಚಾಲಿತ ಖಾಸಗಿ ಬಸ್ಸುಗಳು ಚಿತ್ರದುರ್ಗ (Chitradurga)  ಜಿಲ್ಲೆಯಲ್ಲಿ ಬುಧವಾರದಿಂದ ಓಡಾಡಲಿವೆ. ನಾಯಕನ ಹಟ್ಟಿಯ ಉದ್ಯಮಿ ಜೆ.ಆರ್‌.ರವಿಕುಮಾರ್‌ (Ravikumar) ಅವರು ಎರಡು ಸಿಎನ್‌ಜಿ ಬಸ್‌ಗಳನ್ನು (Bus) ಖರೀದಿಸಿದ್ದಾರೆ.  ಐವತ್ತಕ್ಕೂ ಹೆಚ್ಚು ಖಾಸಗಿ ಬಸ್ಸು ಹೊಂದಿರುವ ರವಿಕುಮಾರ್‌ ಅವರಿಗೆ ಡೀಸೆಲ್‌ (Diesel) ಬೆಲೆ ಹಚ್ಚಳದಿಂದಾಗಿ ಬಸ್ಸುಗಳನ್ನು ಓಡಿಸುವುದೇ ಸಂಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾದಾಗ ಸಿಎನ್‌ಜಿ ಬಸ್ಸು ಓಡಿಸುವ ಐಡಿಯಾ ಹೊಳೆಯಿತು. 

ತಕ್ಷಣವೇ ಕಾರ್ಯೋನ್ಮುಖರಾಗಿ ಈಷರ್‌ ಕಂಪನಿಯ 2 ಚಾಸಿಗಳನ್ನು ಖರೀದಿಸಿದ್ದಾರೆ. ತಮಿಳುನಾಡಿನ (Tamilnadu) ಕರೂರ್‌ನಲ್ಲಿ ಬಾಡಿ ಕಟ್ಟಿಸಿದ ಈ ಬಸ್‌ಗಳು (Bus) ಎರಡು ದಿನಗಳ ಹಿಂದೆಯಷ್ಟೇ ಚಿತ್ರದುರ್ಗದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿ ಆಗಿವೆ. ಬುಧವಾರದಿಂದ ನಾಯಕನಹಟ್ಟಿ-ಶಿವಮೊಗ್ಗ ಹಾಗೂ ನಾಯಕನಹಟ್ಟಿ-ಬೆಂಗಳೂರು ನಡುವೆ ಈ ಬಸ್ಸುಗಳ ಸಂಚರಿಸಲಿವೆ. ಬಸ್ಸಿನ ಬೆಲೆ 29 ಲಕ್ಷ ರು. ಬಸ್ಸಿನಲ್ಲಿ 20 ಕೆ.ಜಿ. ತೂಕದ ಎರಡು ಹಾಗೂ 10 ಕೆ.ಜಿ. ತೂಕದ ಎರಡು ಗ್ಯಾಸ್‌ (Gas) ಟ್ಯಾಂಕ್‌ಗಳಿವೆ. 1 ಕೆಜಿ ಗ್ಯಾಸ್‌ಗೆ 6-8 ಕಿ.ಮೀ ಮೈಲೇಜ್‌ ಬರುತ್ತದೆ. 40 ಪ್ರಯಾಣಿಕರನ್ನು ಹೊತ್ತೊಯ್ಯುವ ಈ ಬಸ್‌ ಹೊಗೆಯುಗುಳದ ಪರಿಸರ ಸ್ನೇಹಿ ಬಸ್‌.

ನಾಲ್ಕು ಟ್ಯಾಂಕ್‌ಗಳಲ್ಲಿ ಸಮಾನವಾಗಿ ಅನಿಲ ಪೂರೈಕೆಯಾಗುತ್ತದೆ. 40 ಮಂದಿ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಈ ಬಸ್ಸಿಗಿದೆ. ಸದ್ಯ ಡೀಸೆಲ್‌ (Diesel)  ದರ ಲೀಟರ್‌ಗೆ  ರು.84 ಇದೆ. ಒಂದು ಲೀಟರ್‌ಗೆ ಬಸ್ಸುಗಳು (Bus) ನಾಲ್ಕರಿಂದ ಆರು ಕಿ.ಮೀ.ನಷ್ಟುದೂರ ಸಂಚರಿಸುತ್ತವೆ. ಸಿಎನ್‌ಜಿ ಕೆಜಿಗೆ ರು.64 ಇದ್ದು, 6 ರಿಂದ 8 ಕಿ.ಮೀ.ನಷ್ಟುಮೈಲೇಜ್‌ ನೀಡುತ್ತದೆ. ಡೀಸೆಲ್‌ ಬಸ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆ ಹೊಗೆಯುಗುಳುವ, ಸದ್ದಿಲ್ಲದೆ ಸಂಚರಿಸುತ್ತವೆ ಎನ್ನುವುದು ಈ ಬಸ್‌ಗಳ ವಿಶೇಷ.

ಡೀಸೆಲ್‌ ದುಬಾರಿಯಾದ್ದರಿಂದ ಬಸ್ಸುಗಳನ್ನು ಓಡಿಸುವುದು ಕಷ್ಟವೆನಿಸಿ ಸಿಎನ್‌ಜಿಗೆ (CNG) ಹೊರಳಿದ್ದೇನೆ. ಸದ್ಯ ಎರಡು ಬಸ್ಸುಗಳು ಮಾತ್ರ ಓಡಿಸುತ್ತಿದ್ದೇನೆ. ಪ್ರತಿ ಬಸ್ಸಿಗೆ ರು.29 ಲಕ್ಷ ವೆಚ್ಚ ತಗುಲಿದೆ. ಲಾಭದಾಯಕವಾಗಿ ಪರಿಣಮಿಸಿದರೆ ಮತ್ತೊಂದಿಷ್ಟುಬಸ್ಸುಗಳ ರೂಪಾಂತರಕ್ಕೆ ಮುಂದಾಗುತ್ತೇನೆ.

- ಜೆ.ಆರ್‌.ರವಿಕುಮಾರ್‌, ಉದ್ಯಮಿ

ಉಚಿತ ಬಸ್ ಪಾಸ್ :  

ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ಬಿಎಂಟಿಸಿಯಿಂದ(BMTC) ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳಿಗೆ(Women Staff) ಅನುಕೂಲವಾಗಲು ‘ವನಿತಾ ಸಂಗಾತಿ’ ಉಚಿತ ಬಸ್‌ಪಾಸ್‌(Free Bus Pass) ಯೋಜನೆಗೆ ಗಾರ್ಮೆಂಟ್ಸ್‌ಗಳ ಆಡಳಿತ ಮಂಡಳಿ ಕೈಜೋಡಿಸದ ಪರಿಣಾಮ ಸಾವಿರಾರು ಕಾರ್ಮಿಕರು ಯೋಜನೆಯ ಲಾಭದಿಂದ ವಂಚಿತರಾಗುವ ಸಾಧ್ಯತೆ ಇದೆ.

ಈ ಯೋಜನೆ ಜಾರಿಗಾಗಿ ಕಾರ್ಮಿಕ ಇಲಾಖೆ(Department of Labor) 30 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಜನವರಿ 1ರಿಂದಲೇ ಮಾಸಿಕ ಪಾಸುಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ನಾಲ್ಕು ದಿನ ಮುಗಿದರೂ ಬಿಎಂಟಿಸಿ ಪಾಸ್‌ ಕೊಡಿಸಲು ಗಾರ್ಮೆಂಟ್ಸ್‌ಗಳ(Garments) ಮಾಲಿಕರು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Free Bus: ಗಾರ್ಮೆಂಟ್ಸ್‌ ಮಹಿಳಾ ಸಿಬ್ಬಂದಿಗೆ ಫ್ರೀ ಬಸ್‌ಪಾಸ್‌

ಈ ಯೋಜನೆಗೆ ಕಾರ್ಮಿಕ ಇಲಾಖೆಯಿಂದ ಶೇ.40, ಗಾರ್ಮೆಂಟ್ಸ್‌ಗಳ ಆಡಳಿತ ಮಂಡಳಿಯಿಂದ ಶೇ.40 ಮತ್ತು ಬಿಎಂಟಿಸಿಯಿಂದ ಶೇ.20 ಅನುದಾನದಲ್ಲಿ(Grants) ಹಣ ಸಂದಾಯ ಮಾಡುವುದಾಗಿ ತೀರ್ಮಾನಿಸಲಾಗಿತ್ತು. ಆದರೆ, ಜನವರಿ 4ರವರೆಗೂ ಕೇವಲ 59 ಮಂದಿಗೆ ಪಾಸ್‌ ನೀಡಬೇಕು ಎಂದು ಬಿಎಂಟಿಸಿಗೆ ಮನವಿ ಮಾಡಲಾಗಿದೆ. ಆದರೆ ಗಾರ್ಮೆಂಟ್ಸ್‌ಗಳ ಆಡಳಿತ ಮಂಡಳಿಗಳ ಪಾಲು ತುಂಬಿಲ್ಲ. ಆದ್ದರಿಂದ ಈವರೆಗೂ ಪಾಸ್‌ ವಿತರಣೆ ಮಾಡಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಯೋಜನೆಗೆ ಗಾಮೆಂಟ್ಸ್‌ ಮಾಲೀಕರಿಂದ ಶೇ.40 ರಷ್ಟು ವೆಚ್ಚ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಇದು ಗಾರ್ಮೆಂಟ್ಸ್‌ಗಳ ಆಡಳಿತ ಮಂಡಳಿಗೆ ಹೆಚ್ಚಿನ ಹೊರೆಯಾಗಲಿದೆ. ಇದೇ ಕಾರಣದಿಂದ ಈ ಯೋಜನೆಯ ಮಾಹಿತಿಯನ್ನು ಸಿಬ್ಬಂದಿಗೆ ನೀಡುತ್ತಿಲ್ಲ ಎಂದು ಸಿದ್ಧ ಉಡುಪು ನೌಕರರ ಸಂಘದ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಗಾರ್ಮೆಂಟ್ಸ್‌ಗಳಿಂದಲೇ ಸಿಬ್ಬಂದಿಗೆ ಬಸ್‌ ವ್ಯವಸ್ಥೆ

ನಗರದಲ್ಲಿ ಒಟ್ಟು 8 ಲಕ್ಷಕ್ಕೂ ಹೆಚ್ಚು ಗಾರ್ಮೆಂಟ್ಸ್‌ ನೌಕರರಿದ್ದಾರೆ. ಈ ಪೈಕಿ ಅಧಿಕೃತವಾಗಿ 4 ಲಕ್ಷ ಸಿಬ್ಬಂದಿಯಿದ್ದು, ಅವರಲ್ಲಿ ಶೇ.80ರಷ್ಟು ಮಹಿಳೆಯರಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಗಾರ್ಮೆಂಟ್ಸ್‌ನ ಹತ್ತಿರದಲ್ಲಿಯೇ ಮನೆಗಳನ್ನು ಮಾಡಿಕೊಂಡಿರುವುದರಿಂದ ಪಾಸ್‌ ಪಡೆಯಲು ಮುಂದಾಗುತ್ತಿಲ್ಲ.

ಅಲ್ಲದೆ, ಬಹುತೇಕ ಗಾರ್ಮೆಂಟ್ಸ್‌ಗಳಲ್ಲಿ ಸಿಬ್ಬಂದಿಗಾಗಿ ಬಸ್‌ ವ್ಯವಸ್ಥೆ ಮಾಡಿದ್ದು, ಅವರ ವೇತನದಿಂದಲೇ(Salary) ಇದರ ವೆಚ್ಚವನ್ನು ಕಡಿತ ಮಾಡಲಾಗುತ್ತಿದೆ. ಆದ್ದರಿಂದ ಬಿಎಂಟಿಸಿ ಬಸ್‌ಪಾಸ್‌ ಕೊಡಿಸಬೇಕಾದಲ್ಲಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಗಾರ್ಮೆಂಟ್ಸ್‌ಗಳ ಮಾಲಿಕರು ಸಿಬ್ಬಂದಿಗೆ ಮಾಹಿತಿ ನೀಡಿಲ್ಲ. ಇದರಿಂದ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ ಎಂದು ಗಾರ್ಮೆಂಟ್ಸ್‌ ನೌಕರರ ಸಂಘದ ಸದಸ್ಯೆ ಯಶೋಧಾ ಮಾಹಿತಿ ನೀಡಿದ್ದಾರೆ.

BMTC Students Pass: ಬಸ್‌ ಪಾಸ್‌ ಇಲ್ಲದಿದ್ದರೆ ಶಾಲಾ ಐಡಿ ಇದ್ರೂ ಸಾಕು

ಅನಾನುಕೂಲಕರ ಪರಿಸ್ಥಿತಿ

ನಗರದಲ್ಲಿ ಹಲವು ಗಾರ್ಮೆಂಟ್ಸ್‌ ನೌಕರರಿಗೆ ಬಸ್‌ ನಿಲ್ದಾಣ ದೂರ ಇರುವುದರಿಂದ ಬಹುತೇಕ ಮಂದಿ ಮನೆಯಿಂದ ಕಾರ್ಖಾನೆಗೆ(Factory) ಹೋಗಲು ಆಟೋ ರಿಕ್ಷಾಗಳನ್ನು ಬಳಸುತ್ತಿದ್ದಾರೆ. ಇದರಿಂದ ಪಾಸ್‌ ಪಡೆದುಕೊಂಡರೂ ಪ್ರಯೋಜನವಿರುವುದಿಲ್ಲ. ಆದ್ದರಿಂದ ಹಲವು ಸಿಬ್ಬಂದಿ ಪಾಸ್‌ ಪಡೆದುಕೊಳ್ಳಲು ಮುಂದಾಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಗುಡ್‌ನ್ಯೂಸ್, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರ ಇಳಿಕೆ

ಬಿಎಂಟಿಸಿಯು (Bangalore Metropolitan Transport Corporation) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್‌ಗಳನ್ನು (Bus Pass) ನೀಡುತ್ತಿದ್ದು, ಸಾರ್ವಜನಿಕರನ್ನು ವೋಲ್ವೋ ಸೇವೆಗಳಲ್ಲಿ ಪ್ರಯಾಣಿಸಲು ಉತ್ತೇಜಿಸುವ ಸಲುವಾಗಿ, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರವನ್ನು ರೂ.2000 ರಿಂದ ರೂ.1500 ಕ್ಕೆ ಇಳಿಸಿದೆ. ಪರಿಷ್ಕೃತ ವಜ್ರ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ವಜ್ರ ಸೇವೆಗಳಲ್ಲಿ ಕಂಡಕ್ಟರ್‌ಗಳ ಮೂಲಕ ಮತ್ತು ಬಿಎಂಟಿಸಿಯ ಪ್ರಮುಖ ಬಸ್ ನಿಲ್ದಾಣಗಳು ಮತ್ತು ಟಿಟಿಎಂಸಿಗಳಲ್ಲಿ ನೀಡಲಾಗುತ್ತಿದೆ.

Follow Us:
Download App:
  • android
  • ios