Asianet Suvarna News Asianet Suvarna News

Delhi: 10 ವರ್ಷ ಮೇಲ್ಪಟ್ಟ 1 ಲಕ್ಷ ಡೀಸೆಲ್‌ ವಾಹನ ನೋಂದಣಿ ರದ್ದು

ಹಸಿರು ನ್ಯಾಯಾಧಿಕರಣದ ಆದೇಶದಂತೆ ದೆಹಲಿಯಲ್ಲಿ 10 ವರ್ಷ ಮೀರಿದ 1 ಲಕ್ಷ ವಾಹನಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ವಾಹನಗಳು ದೆಹಲಿಯಲ್ಲಿ ಇನ್ನು ಬಳಕೆಗೆ ನಿಷ್ಕ್ರಿಯವಾಗಲಿದೆ. 

More than 1 lakh 10 year old diesel vehicles de registered in Delhi gvd
Author
Bangalore, First Published Jan 2, 2022, 8:30 AM IST

ನವದೆಹಲಿ (ಜ.2): ಹಸಿರು ನ್ಯಾಯಾಧಿಕರಣದ (NGT) ಆದೇಶದಂತೆ ದೆಹಲಿಯಲ್ಲಿ 10 ವರ್ಷ ಮೀರಿದ 1 ಲಕ್ಷ ವಾಹನಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ವಾಹನಗಳು ದೆಹಲಿಯಲ್ಲಿ ಇನ್ನು ಬಳಕೆಗೆ ನಿಷ್ಕ್ರಿಯವಾಗಲಿದೆ. ಆದರೆ ಇವುಗಳನ್ನು ಎಲೆಕ್ಟ್ರಿಕ್‌ ಮಾದರಿಗೆ (Electric Vehicle Converter) ಬದಲಾಯಿಸಬಹುದು ಅಥವಾ ಇತರೆ ರಾಜ್ಯಗಳ ಜನರಿಗೆ ಮಾರಾಟ ಮಾಡಬಹುದು.

ರದ್ದಾದ ವಾಹನಗಳ ಪೈಕಿ 87000 ಕಾರು, ಉಳಿದವು ವಾಣಿಜ್ಯ ವಾಹನಗಳಾಗಿವೆ. ಜೊತೆಗೆ 15 ವರ್ಷ ಮೀರಿದ ಪೆಟ್ರೋಲ್‌ ವಾಹನಗಳ ನೋಂದಣಿಯನ್ನು ರದ್ದು ಮಾಡುವ ಯೋಜನೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 15 ವರ್ಷ ಮೀರಿದ 32 ಲಕ್ಷ ದ್ವಿಚಕ್ರ ವಾಹನಗಳು ಮತ್ತು 11 ಲಕ್ಷ ಕಾರುಗಳು ಸೇರಿದಂತೆ 43 ಲಕ್ಷಕ್ಕೂ ಅಧಿಕ ಪೆಟ್ರೋಲ್‌ ವಾಹನಗಳನ್ನು ಗುರುತಿಸಲಾಗಿದೆ.

ಓಲಾ, ಉಬರ್, ಜೊಮೊಟೊಗೆ ದೆಹಲಿ ಸರ್ಕಾರ ನೀಡಲಿದೆ ಖಡಕ್ ಸೂಚನೆ!

ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಇದೆ ಮಾನ್ಯತೆ ಪಡೆದ ಘಟಕ: ವಾಹನ ಗುಜರಿ ನೀತಿಯಿಂದ 15ವರ್ಷಕ್ಕಿಂತ ಹಳೇ ವಾಹನವನ್ನು ಗುಜುರಿಗೆ ಹಾಕಬೇಕು. ಉಳಿಸಿಕೊಳ್ಳಲು ಹಲವು ಕಠಿಣ ನಿಯಮ ಪಾಲಿಸಬೇಕು. ಫಿಟ್ನೆಸ್ ಪಾಸಾಗದಿದ್ದರೆ ಗುಜುರಿಗೆ ಹಾಕಲೇಬೇಕು. ದೆಹಲಿಯಲ್ಲಿ ಈ ನಿಯಮ ಮತ್ತಷ್ಟು ಕಠಿಣವಾಗಿದೆ. ಇದೇ ಜನವರಿ 1, 2022ರಿಂದ 10 ವರ್ಷಕ್ಕಿಂತ ಹಳೇ ಡೀಸೆಲ್ ವಾಹನ ಬ್ಯಾನ್ ಮಾಡಲಾಗಿದೆ. ಹೀಗಾಗಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ದೆಹಲಿ ಸಾರಿಗೆ ಇಲಾಖೆ ಹಳೇ ವಾಹನ ಮಾಲೀಕರಿಗೆ ಒಂದು ಅವಕಾಶ ನೀಡಿದೆ. ಹಳೆ ಡೀಸೆಲ್ ವಾಹನವನ್ನು ಎಲೆಕ್ಟ್ರಿಕ್ ವಾಹವನ್ನಾಗಿ ಪರಿವರ್ತಿಸಲು ಅವಕಾಶ ನೀಡಿದೆ.

ದೆಹಲಿಯಲ್ಲಿ ಹೊಸ ನಿಯಮ ಜಾರಿಯಾಗಲು ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದೆ. ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೇಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಪೆಟ್ರೋಲ್ ವಾಹನಕ್ಕೆ ನಿಷೇಧ ಹೇರಲಾಗಿದೆ. ಈ ವಾಹನಳ ರಿಜಿಸ್ಟ್ರೇಶನ್ ರದ್ದಾಗಲಿದೆ. ಇದೀಗ ಹಳೇ ವಾಹನ ಹೊಂದಿರುವ ಮಾಲೀಕರಿಗೆ ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸಲು ಅವಕಾಶ ನೀಡಿದೆ. ಇದಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಕೆಲ ಘಟನಗಳು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ದೆಹಲಿ ಸಾರಿಗೆ ಇಲಾಖೆ ಹಳೇ ವಾಹನಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಅವಕಾಶ ನೀಡಿದೆ. ಇದಕ್ಕಾಗಿ ದೆಹಲಿ ಸರ್ಕಾರ 6 ವಾಹನ ಎಲೆಕ್ಟ್ರಿಕ್ ಕಿಟ್ ಉತ್ಪಾದಕರಿಗೆ ಮಾನ್ಯತೆ ನೀಡಿದೆ. ಶೀಘ್ರದಲ್ಲೇ ಮತ್ತಷ್ಟು ಎಲೆಕ್ಟ್ರಿಕ್ ಕಿಟ್ ಕನ್ವರ್ಟರ್ ಉತ್ಪಾದಕರಿಗೆ ದೆಹಲಿ ಸರ್ಕಾರ ಮಾನ್ಯತೆ ನೀಡಲು ಮುಂದಾಗಿದೆ.

Electric Scooter: 1,999 ರೂಗೆ ಬುಕ್ ಮಾಡಿ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಒಕಾಯ!

ದೆಹಲಿ ಸರ್ಕಾರದಿಂದ ಮಾನ್ಯತೆ ಪಡೆದ ಎಲೆಕ್ಟ್ರಿಕ್ ಕಿಟ್ ಉತ್ಪಾದಕರು ಅಂತಾರಾಷ್ಟ್ರೀಯ ಅಟೋಮೇಟೀವ್ ಟೆಕ್ನಾಲಜಿನಿಂದ ಮಾನ್ಯತೆ ಪಡೆದಿದೆ. ಈ ಉತ್ಪಾದಕರಲ್ಲಿ ವಿವಿಧ ರೀತಿಯ ಕಿಟ್ ಲಭ್ಯವಿದೆ. ಇಷ್ಟೇ ಅಲ್ಲ ಪೆಟ್ರೋಲ್, ಡೀಸೆಲ್ ವಾಹನಕ್ಕೆ ಸರಿ ಹೊಂದುವ ಕಿಟ್ ಸುಲಭವಾಗಿ ಹಳೇ ವಾಹನಕ್ಕೆ ಅಳವಡಿಸಲು ಸಾಧ್ಯವಿದೆ. ಸ್ಕೂಟರ್, ಬೈಕ್, ಆಟೋ ರಿಕ್ಷಾ, ಕಾರು ಸೇರಿದಂತೆ ಇಂಧನ ವಾಹವನ್ನು ಹೆಚ್ಚು ಖರ್ಚಿಲ್ಲದೆ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ.

Follow Us:
Download App:
  • android
  • ios