Asianet Suvarna News Asianet Suvarna News

ಕಲ್ಗುಡಿ ಬ್ರಾಂಡ್ 'ಗನ್' ಕೊಡಗಿನ ಮಾರುಕಟ್ಟೆಗೆ ಎಂಟ್ರಿ: ಈ ಗನ್‌ನ ಸ್ಪೆಷಾಲಿಟಿ ಏನು?

ಕೊಡಗು ಎಂದ ಕೂಡಲೇ ಅಲ್ಲಿಯದ್ದೇ ಆದ ಸಾಕಷ್ಟು ಹೋಂ ಮೇಡ್ ಬ್ರಾಂಡ್ ವಸ್ತುಗಳಿಗೆ ಫೇಮಸ್ ಅಲ್ವಾ. ಅಂತಹ ಹೋಂಮೇಡ್ ಬ್ರಾಂಡ್‌ನಂತೆಯೇ ಕೊಡಗಿನ ಬ್ರಾಂಡ್ ಗನ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಯಾವುದು ಅದು ಗನ್ನು,? ಏನಿದರ ಸ್ಪೆಷಲ್ ಅಂತ ತಿಳಿದುಕೊಳ್ಳಬೇಕು ಅಂದ್ರೆ ನೀವು ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. 

Kalgudi Brand Gun Enters Market in Kodagu gvd
Author
First Published Sep 10, 2023, 6:03 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.10): ಕೊಡಗು ಎಂದ ಕೂಡಲೇ ಅಲ್ಲಿಯದ್ದೇ ಆದ ಸಾಕಷ್ಟು ಹೋಂ ಮೇಡ್ ಬ್ರಾಂಡ್ ವಸ್ತುಗಳಿಗೆ ಫೇಮಸ್ ಅಲ್ವಾ. ಅಂತಹ ಹೋಂಮೇಡ್ ಬ್ರಾಂಡ್‌ನಂತೆಯೇ ಕೊಡಗಿನ ಬ್ರಾಂಡ್ ಗನ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಯಾವುದು ಅದು ಗನ್ನು,? ಏನಿದರ ಸ್ಪೆಷಲ್ ಅಂತ ತಿಳಿದುಕೊಳ್ಳಬೇಕು ಅಂದ್ರೆ ನೀವು ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. ಸಿಂಗಲ್ ಬ್ಯಾರಲ್ ಗನ್, ಡಬ್ಬಲ್ ಬ್ಯಾರಲ್ ಗನ್, ಏರ್ ಗನ್, ಪಿಸ್ತೂಲ್ ಅಯ್ಯೋ ಒಂದಾ ಎರಡ. ನೋಡ್ತಾ ಇದ್ರೆ ಎದೆ ಝಲ್ ಎನಿಸುವ ಗನ್ನುಗಳು ಮಾರಾಟಕ್ಕೆ ಇವೆ. ಅಷ್ಟಕ್ಕೂ ಹೀಗೆ ಹಳೇ ಕಾಲದ ಗನ್ನುಗಳಿಂದ ಹಿಡಿದು ಸೆಮಿ ಆಟೋಮೇಟಿವ್ ಗನ್ನುಗಳವರೆಗೆ ಹತ್ತಾರು ರೀತಿಯ ಗನ್ನುಗಳು ಮಾರಾಟಕ್ಕೆ ಲಭ್ಯ ಇರುವುದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ. 

ಇಲ್ಲಿನ ನಿವಾಸಿ ಸೋಮಣ್ಣ ಎಂಬುವರು 12 ಬೋರ್‌ನ ತಮ್ಮದೇ ಕಲ್ಗುಡಿ ಹೆಸರಿನ ಹೊಸ ಬ್ರಾಂಡ್ ಗನ್ನನ್ನು  ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕೊಡಗಿನಲ್ಲಿ ಹೋಂ ಮೇಡ್ ವೈನ್, ಹೋಂ ಮೇಡ್ ಚಾಕೋಲೇಟ್, ಕೂರ್ಗ್ ಹನಿ ಅಂದರೆ ಇವೆಲ್ಲಾ ತುಂಬಾ ಫೇಮಸ್ ಅಲ್ವಾ. ಹಾಗೆಯೇ ಕೊಡಗಿನಲ್ಲಿ ಕೋವಿಗೆ ವಿಶೇಷ ಸ್ಥಾನಮಾನವೂ ಇದೆ. ಜಮ್ಮಾ ಹಕ್ಕು ಹೊಂದಿರುವ ಎಲ್ಲರಿಗೂ ಕೊಡಗಿನಲ್ಲಿ ಕೋವಿಯನ್ನು ಹೊಂದುವ ವಿಶೇಷ ಹಕ್ಕು ಕೂಡ ಇದೆ. ಆದರೆ ಯಾರು ಕೋವಿ ಉತ್ಪಾದನೆ ಮಾಡಿ ಮಾರಾಟ ಮಾಡುವುದಿಲ್ಲ. ವಿಶೇಷ ಎಂದರೆ ಸೋಮಣ್ಣ ಅವರು ಕೋವಿ ಮಾರಾಟದ ಪರವಾನಗಿ ಪಡೆದಿದ್ದು, ಕೊಡಗಿನಲ್ಲಿಯೇ ಬೃಹತ್ ಮಳಿಗೆ ಆರಂಭಿಸಿದ್ದಾರೆ. 

ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಹಾವಳಿ: ಬೇಸತ್ತ ರೈತರು ಹೀಗಾ ಮಾಡೋದು...

ಸೋಮಣ್ಣ ಅವರು ತೆರೆದಿರುವ ಈ ಕಲ್ಗುಡಿ ಪಿಸ್ತೂಲ್ ಮಾರಾಟ ಮಳಿಗೆಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ವಿರಾಜಪೇಟೆ ಶಾಸಕರು, ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರೂ ಆಗಿರುವ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು. ಬಳಿಕ ಪೊನ್ನಣ್ಣ ಸೇರಿದಂತೆ ಹಲವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುವ ಮೂಲಕ ಮಳಿಗೆಗೆ ಚಾಲನೆ ನೀಡಿದರು. ಮಳಿಗೆ ಆರಂಭವಾಗುತ್ತಿರುವ ವಿಷಯ ತಿಳಿದು ಆಗಮಿಸಿದ್ದ ಕೋವಿ ಪರವಾನಗಿದಾರರು ವಿವಿಧ ಕೋವಿಗಳನ್ನು ನೋಡಿ ಫುಲ್ ಖುಷಿ ಪಟ್ಟರು. ತಾವು ಕೂಡ ವಿವಿಧ ಗನ್ನುಗಳನ್ನು ತಮ್ಮ ಹೆಗಲೇರಿಸಿಕೊಂಡು ಇವುಗಳನ್ನು ಖರೀದಿಸಬಹುದಾ ಎಂದು ಟ್ರಯಲ್ ನೋಡಿದ್ರು. 

ಗೆಳೆಯನ ಕೊಲೆಗೈದು ಅಪಘಾತವೆಂದು ಬಿಂಬಿಸಲು ಯತ್ನ: ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಇನ್ನು ಇಲ್ಲಿ ಗೇಮ್ಸ್ಗಳಿಗೆ ಬಳಸುವ ತರಾವರಿಯ ಗನ್ನುಗಳಿವೆ. ಏರ್ ಗನ್ನುಗಳಿವೆ. ಕನಿಷ್ಠ ಐದು ಸಾವಿರದಿಂದ 25 ರಿಂದ 30 ಲಕ್ಷ ಮೌಲ್ಯದ ಗನ್ನುಗಳು ಇವೆ. ಜೊತೆಗೆ ಆಯಾ ಗನ್ನುಗಳಿಗೆ ತಕ್ಕಂತ ಬುಲೆಟ್ಗಳು ಕೂಡ ಇದ್ದು ಪರವಾನಗಿ ಹೊಂದಿ ಅಗತ್ಯ ಇರುವವರು ಬಂದು ಖರೀದಿಸಬಹುದು. ಇಬ್ಬರು ಕೂಡ ವಿವಿಧ ಕೋವಿಗಳ ಟ್ರಯಲ್ ಕೂಡ ನೋಡಿ ಬಳಿಕ ಸೋಮಣ್ಣ ಅವರ ವ್ಯಾಪಾರಕ್ಕೆ ಒಳ್ಳೆಯದಾಗಲಿ. ಸ್ಥಳೀಯರೊಬ್ಬರು ಇಷ್ಟು ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಿರುವುದು ಅತ್ಯಂತ ಖುಷಿ ವಿಚಾರ ಎಂದು ಹಾರೈಸಿದ್ದಾರೆ. ಒಟ್ಟಿನಲ್ಲಿ ಇದುವರೆಗೆ ಕೊಡಗಿನದೇ ಬ್ರಾಂಡಿನಿಂದ ಕಾಫಿ, ಚಾಕೋಲೇಟ್, ಜೇನು ಜೊತೆಗೆ ವೈನ್ಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಇದೀಗ ಕಲ್ಗುಡಿ ಹೆಸರಿನ ಬ್ರಾಂಡ್ ಮೂಲಕ ಕೊಡಗು ಕೋವಿ ವ್ಯಾಪಾರಕ್ಕೂ ತನ್ನದೇ ಛಾಪು ಮೂಡಿಸುತ್ತಿದೆ ಎನ್ನುವುದೇ ವಿಶೇಷ.

Follow Us:
Download App:
  • android
  • ios