Asianet Suvarna News Asianet Suvarna News

ಗೆಳೆಯನ ಕೊಲೆಗೈದು ಅಪಘಾತವೆಂದು ಬಿಂಬಿಸಲು ಯತ್ನ: ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಎರಡು ತಿಂಗಳ ಹಿಂದೆ ಅಪಘಾತ ಎಂದು ಬಿಂಬಿಸಿದ್ದ ಘಟನೆಗೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಗಳ ಎಡೆಮುರಿಕಟ್ಟುವಲ್ಲಿ ಕೋಟೆನಾಡಿನ ಖಾಕಿ ಪಡೆ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ನಡೆದಿರೋ ಘಟನೆಯಾದ್ರು ಏನು?

three arrested for trying to pass off friends murder as an accident at chitradurga gvd
Author
First Published Sep 10, 2023, 5:47 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.10): ಎರಡು ತಿಂಗಳ ಹಿಂದೆ ಅಪಘಾತ ಎಂದು ಬಿಂಬಿಸಿದ್ದ ಘಟನೆಗೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಗಳ ಎಡೆಮುರಿಕಟ್ಟುವಲ್ಲಿ ಕೋಟೆನಾಡಿನ ಖಾಕಿ ಪಡೆ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ನಡೆದಿರೋ ಘಟನೆಯಾದ್ರು ಏನು? ಇದೆಲ್ಲದರ ಕಂಪ್ಲೀಟ್ ಡಿಟೈಲ್ಸ್‌ ಇಲ್ಲಿದೆ ನೋಡಿ. ರಸ್ತೆ ಮೇಲೆ ರಕ್ತದ ಮಡಿವಿನಲ್ಲಿ ಸತ್ತು ಶವವಾಗಿ ಬಿದ್ದಿರೋ ವ್ಯಕ್ತಿ ಹೆಸರು ನಾಗೇಂದ್ರ. ಮೂಲತಃ ಚಾಮರಾಜನಗರ ಜಿಲ್ಲೆಯವರು. ಜುಲೈ ತಿಂಗಳ 22ನೇ ತಾರೀಖಿನಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿಯ ಚನ್ನಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಶವ ಪತ್ತೆಯಾಗಿತ್ತು. 

ಆದ್ರೆ ಈ ಘಟನೆ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಘಟನೆಯಲ್ಲಿ ಸಂಶಯ ಬಂದ ಕಾರಣ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ನಡೆದು ಒಂದೂವರೆ ತಿಂಗಳು ಕಳೆದ ಬಳಿಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೃತ ವ್ಯಕ್ತಿ ನಾಗೇಂದ್ರನ ಸ್ನೇಹಿತರಾದ ಯಾದಗಿರಿ ಮ‌ೂಲದ ರಾಜು, ಶರಣು, ಮಾಳಿಂಗರಾಯರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಕುರಿತು ಸತ್ಯ ಬಾಯ್ಬಿಟ್ಟಿದ್ದಾರೆ. ನಾಲ್ವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ವೇಳೆ ಪರಿಚಯವಾಗಿದ್ದ. 

ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಹಾವಳಿ: ಬೇಸತ್ತ ರೈತರು ಹೀಗಾ ಮಾಡೋದು...

ಸಾಲದ ಹಣ ಕೇಳುವ ನೆಪದಲ್ಲಿ ಕರೆಸಿ ನಾಗೇಂದ್ರನನ್ನು ಎ1 ಆರೋಪಿ ರಾಜು ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡಿ ಚನ್ನಮ್ಮಮಹಳ್ಳಿ ಬಳಿ ಅಪಘಾತ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ತನಿಖೆ ಬಳಿಕ ಬಯಲಾಗಿದ್ದು. ಆರೋಪಿಗಳನ್ನು ಬಂಧಿಸುವಲ್ಲಿ ಐಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದ್ರೆ, ಒಂದೂವರೆ ತಿಂಗಳ ಹಿಂದೆ ಓರ್ವ ವ್ಯಕ್ತಿ ನಮ್ಮೂರಿನ ರಸ್ತೆ ಪಕ್ಕದಲ್ಲಿಯೇ ಅಪಘಾತ ಆಗಿರುವ ರೀತಿ ಸಾವನ್ನಪ್ಪಿದ್ದರು. ಅಂದು ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾನು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ಸಂಸದ ಪ್ರತಾಪ್ ಸಿಂಹ

ಆದ್ರೆ ಈ ಘಟನೆಯು ಕೊಲೆ ಎಂದು ತಿಳಿದು ಆಶ್ಚರ್ಯವಾಗಿದೆ. ಆರೋಪಿಗಳು ಬೇರೆ ಜಿಲ್ಲೆಯವರು ಆಗಿದ್ದರು ಕೊಲೆ ಮಾಡಿ ಈ ರೀತಿ ಪ್ರಕರಣ ಬಿಂಬಿಸಲು ಮುಂದಾಗಿದ್ದು ದುರಂತ. ಇಂತಹ ಆರೋಪಿಗಳ ಎಡೆಮುರಿಕಟ್ಟಿರುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಾರೆ ವೈಯಕ್ತಿಕ ದ್ವೇಷಕ್ಕೆ ಜೊತೆಯಲ್ಲಿದ್ದ ಸ್ನೇಹಿತನನ್ನೆ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೊರಟಿದ್ದ ಸ್ನೇಹಿತರಿಗೆ ಪೊಲೀಸರು ಕಂಬಿ ಹಿಂದೆ ನಿಲ್ಲಿಸಿರೋದು ಉತ್ತಮ ಕಾರ್ಯವಾಗಿದೆ.

Follow Us:
Download App:
  • android
  • ios