Asianet Suvarna News Asianet Suvarna News

ಮುಸ್ಲಿಮರ ಮೀಸಲಾತಿ ರದ್ದು ಹೇಳಿಕೆಗೆ ಇಸ್ಮಾಯಿಲ್ ತಮಾಟಗಾರ ಖಂಡನೆ

ಶಾಸಕ ಅರವಿಂದ ಬೆಲ್ಲದ ಮತ್ತು ಯತ್ನಾಳ ಅವರು ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತೆಗೆದು ನಮಗೆ ಕೊಡಿ ಎಂದು ಮುಸ್ಲಿಂ ಸಮುದಾಯದ ವಿರುದ್ದ ಕೊಡುತ್ತಿರುವ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.

Ismail Tamatgar condemns the statement Cancel reservation for Muslims gow
Author
First Published Nov 3, 2022, 2:30 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

 ಧಾರವಾಡ (ನ.3): ಜಯ ಮೃತ್ಯುಂಜಯ ಸ್ವಾಮಿಜಿ ಅವರು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ ಅದನ್ನು ನಾನು ಸ್ವಾಗತ ಮಾಡುತ್ತೇನೆ, ಆದರೆ ಶಾಸಕ ಅರವಿಂದ ಬೆಲ್ಲದ ಮತ್ತು ಯತ್ನಾಳ ಅವರು ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತೆಗೆದು ನಮಗೆ ಕೊಡಿ ಎಂದು ಮುಸ್ಲಿಂ ಸಮುದಾಯದ ವಿರುದ್ದ ಕೊಡುತ್ತಿರುವ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ . ಅವರು ಚುನಾವಣೆ ಇರುವ ಹಿನ್ನೆಲೆ ಈ ರೀತಿಯಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರ ಸಮಾಜದವರು ಮಿಸಲಾತಿಗಾಗಿ ಹೋರಾಟವನ್ನ ಮಾಡಬಹುದು. ಆದರೆ ಯಾಕೆ ಹೀಗೆಲ್ಲ ನಮ್ಮ ಸಮಾಜಕ್ಕೆ ಕೆಲಸ ಮಾತನಾಡುತ್ತಾರೆ, ಇದನ್ನ ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇನ್ನು ಧಾರವಾಡ ಗ್ರಾಮೀಣ ವಿಧಾನಸಭೆಯಿಂದ ನಾನು ಸ್ಪರ್ದೆ ಮಾಡುತ್ತೇನೆ, ನಾನು ಕೂಡಾ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ನಾನು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನು ಮಾಧ್ಯಮಗಳು ವಿನಯ ಕುಲಕರ್ಣಿ ಅವರಿಗೆ ಟಿಕೆಟ್ ಪಿಕ್ಸ್ ಇದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೇ ನೀಡಿದ ತಮಟಗಾರ , ವಿನಯ ಕುಲಕರ್ಣಿ ಅವರು ರಾಜ್ಯ ನಾಯಕರು ಅವರು 224 ರಲ್ಲಿ ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಂತರೂ ಅವರು ಜಯ ಸಾಧಿಸುತ್ತಾರೆ ಅವರು ದೊಡ್ಡ ರಾಜ್ಯ ನಾಯಕರಾಗಿದ್ದಾರೆ. ನಾನು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ.

 

ಇನ್ನು ನವೆಂಬರ್ 7 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಕಿತ್ತೂರಿನಲ್ಲಿ ಅದ್ದೂರಿಯಾಗಿ ಬರ್ತಡೆಯನ್ನು ಆಚರಣೆ ಮಾಡಿಕ್ಕೊಳ್ಳುತ್ತಿದ್ದಾರೆ ನನಗೆ ಆಹ್ವಾನ ಬಂದಿಲ್ಲ ನಾನು ಹೋಗೋದಿಲ್ಲ ಎಂದ ತಮಟಗಾರ . ಅದೇನೆ ಇರಲಿ ನಾನು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ, ನಾನು ಯಾವುದೇ ಕಾರಣಕ್ಕೂ ಚುಣಾವಣೆಯ ಕಣದಿಂದ ಹಿಂದೆ ಸರಿಯಲ್ಲ ಎಂದು ವಿನಯ ಕುಲಕರ್ಣಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

 Karnataka Politics: ಚುನಾವಣೆ ಹೊತ್ತಲ್ಲೇ ಬಿಲ್ಲವ ಸಮುದಾಯ ಶಕ್ತಿ ಪ್ರದರ್ಶನ?

ಎಸ್ಟಿಗೆ ವಿಶ್ವಕರ್ಮ ಸಮಾಜ ಸೇರಿಸಿ: ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಲಾಭವನ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹೋರಾಟಗಾರರು, ಜ್ಯುಬಿಲಿ ವೃತ್ತ, ಕೋರ್ಚ್‌ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಜತೆಗೆ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಂದಾಜು 45 ಲಕ್ಷ ಜನ ಸಂಖ್ಯೆ ಹೊಂದಿದ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಪಂಚ ಕಸಬುಗಳನ್ನು ಅವಲಂಬಿಸಿರುವ ಸಮಾಜ ಜಾಗತೀಕರಣ ಮತ್ತು ಉದಾರೀಕರಣದಿಂದ ನಲುಗಿದೆ. ಸದ್ಯ ವಿಶ್ವಕರ್ಮರು ಇರುವ 2ಎ ಮೀಸಲಾತಿಯಲ್ಲಿ ನೂರಾರು ಜಾತಿಗಳು ಇರುವುದರಿಂದ ವಿಶ್ವಕರ್ಮರು ಮೀಸಲಾತಿ ಪಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸಲು ಪರಿಶಿಷ್ಟವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿದರು.

ಮೀಸಲಾತಿಗಾಗಿ ಜನಜಾಗೃತಿ ಅತ್ಯವಶ್ಯಕ; ವಚನಾನಂದ ಶ್ರೀ

ಕುಲಶಾಸ್ತ್ರ ಅಧ್ಯಯನ ನಡೆಸಿ ಪರಿಶಿಷ್ಟಜಾತಿಗೆ ಸೇರಿಸಲು ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಕೂಡಲೇ ಕುಲಶಾಸ್ತ್ರ ಅಧ್ಯಯನ ನಡೆಸಿ ಎಸ್‌ಟಿ ಮೀಸಲಾತಿ ನೀಡಬೇಕು. ಬಿಹಾರ, ಜಾರ್ಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಶ್ವಕರ್ಮ ಸಮಾಜವನ್ನು ಎಸ್‌ಟಿಗೆ ಸೇರಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಎಸ್‌ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಡಳಿತ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

Follow Us:
Download App:
  • android
  • ios