ಉತ್ತರ ಕನ್ನಡದ ಭಟ್ಕಳದಲ್ಲಿ ಕಪ್ಪೆಚಿಪ್ಪು ತರಲು ನದಿಗೆ ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರುಪಾಲಾಗಿದ್ದಾರೆ. ಈ ದುರಂತಕ್ಕೆ ಮರುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರು/ಉತ್ತರ ಕನ್ನಡ: ಕಪ್ಪೆಚಿಪ್ಪು ತರಲ ನದಿಗೆ ತೆರಳಿದ ಎಂಟು ಜನರು ನೀರುಪಾಲಾಗಿರುವ ಘಟನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ‌ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಮೃತ 8 ಜನರು ಪೈಕಿ, ಏಳು ಜನ ಮಹಿಳೆಯರು, ಓರ್ವ ಪುರುಷ

1. ಲಕ್ಷ್ಮಿ ಮಾದೇವ ನಾಯ್ಕ, 38 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

2. ಲಕ್ಷ್ಮಿ ಮಹಾದೇವ ನಾಯ್ಕ

3. ಲಕ್ಷ್ಮಿ ಶಿವರಾಂ ನಾಯ್ಕ, 39ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

4. ಉಮೇಶ್ ಮಂಜುನಾಥ್ ನಾಯ್ಕ, 42 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

5. ಮಾಸ್ತಮ್ಮ ಮಂಜುನಾಥ್ ನಾಯ್ಕ, 43 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

6. ಲಕ್ಷ್ಮಿ ಅಣ್ಣಪ್ಪ ನಾಯ್ಕ ನಾಯ್ಕ, 44 ವರ್ಷ, ಪಡುಶಿರಾಲಿ ಶಾರದಾ ಹೊಳೆ ಭಟ್ಕಳ

ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ತಂದಿರುವ ಮೃತರ ಮಾಹಿತಿ

1. ಜ್ಯೋತಿ ನಾಗಪ್ಪ ನಾಯ್ಕ ವಯಸ್ಸು : 37ವರ್ಷ, ಸಾ: ಶಾರದಾ ಹೊಳೆ ಹೀರೆಹಿತ್ಲು

2. ಮಾಲತಿ ಜಟ್ಟಪ್ಪ ನಾಯ್ಕ ವಯಸ್ಸು : 38ವರ್ಷ, ಸಾ: ಪಡುಶಿರಾಲಿ ಶಾರದಹೊಳೆ ಭಟ್ಕಳ

ನಾಪತ್ತೆಯಾದವರ ಸಂಖ್ಯೆ: 03

2 ಹೆಂಗಸು 1 ಗಂಡಸು

1.ಮಾದೇವ ಜಟ್ಟಪ್ಪ ನಾಯ್ಕ 52 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

2.ಮಂಜಮ್ಮ ಗೊತ್ತಾ ನಾಯ್ಕ 50 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

3. ನಾಗರತ್ನ ಪರಮೇಶ್ವರ್ ನಾಯ್ಕ 40ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

ಅಸ್ವಸ್ಥರಾದವರ ಸಂಖ್ಯೆ: ಇಬ್ಬರು ಮಹಿಳೆಯರು

1. ನಾಗರತ್ನ ಈಶ್ವರ ನಾಯ್ಕ

2. ಮಾದೇವಿ ನಾಯ್ಕ

ಅಸ್ವಸ್ಥರಾದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಆಂಧ್ರದ ಕುಪ್ಪಂನಿಂದ ಬೆಂಗಳೂರಿಗೆ ಹೊಸ ಮಾರ್ಗ; ಬಂಗಾರಪೇಟೆ ರೈತರ ಬದುಕಿನಲ್ಲಿ ಬಿರುಗಾಳಿ?

ಇದನ್ನೂ ಓದಿ: ಭಟ್ಕಳ ನದಿಯಲ್ಲಿ ಕಪ್ಪೆಚಿಪ್ಪು ದುರಂತ: ಸಾವಿನ ಸಂಖ್ಯೆ 8ಕ್ಕೇರಿಕೆ, ಮೂವರಿಗಾಗಿ ಹುಡುಕಾಟ

Scroll to load tweet…