ಹೆಚ್ಚಿದ ಒಳಹರಿವು: 1605 ಅಡಿ ತಲುಪಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ
* ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ
* ಜಲಾಶಯದಲ್ಲಿ ಸದ್ಯ 26 ಟಿಎಂಸಿ ನೀರು ಶೇಖರಣೆ
* ಡ್ಯಾಂಗೆ 32,343 ಕ್ಯೂಸೆಕ್ ನೀರು ಒಳಹರಿವು
ಮುನಿರಾಬಾದ್(ಜೂ.24): ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ 1605 ಅಡಿಗಳಿಗೆ ತಲುಪಿದೆ. ಬರೋಬ್ಬರಿ 32,343 ಕ್ಯೂಸೆಕ್ ನೀರು ಹರಿದು ಬಂದಿದೆ.
ಜಲಾಶಯದಲ್ಲಿ ಸದ್ಯ 26 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಕಳೆದ 6 ದಿನಗಳಿಂದ (ಜೂ. 18ರಿಂದ ಜೂ. 23ರ ವರೆಗೆ) 1,86,600 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದ್ದು, 1,633 ಅಡಿಗಳು ಇದ್ದು, ಭರ್ತಿಯಾಗಲು ಇನ್ನೂ 28 ಅಡಿ ಬಾಕಿ ಇದೆ.
ಹೊಸಪೇಟೆ: ತುಂಗಭದ್ರೆ ಒಡಲಿಗೆ ಹರಿದು ಬಂದ ಅಪಾರ ನೀರು..!
ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ 1,586.52 ಅಡಿಗಳು ಇತ್ತು. ಜಲಾಶಯದ ಒಳಹರಿವು 6,781 ಕ್ಯುಸೆಕ್ ಒಳಹರಿವು ಇತ್ತು ಹಾಗೂ 7 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ 19 ಅಡಿಗಳಷ್ಟು ನೀರು ಅಧಿಕವಾಗಿ ಸಂಗ್ರಹವಾಗಿದೆ.