ಅಭಿವೃದ್ಧಿಯ ಹೊಸ ‘ಹೆದ್ದಾರಿ’: 2022ರ ವಿಧಾನಸಭಾ ಚುನಾವಣೆಗೆ ಮೋದಿ ರಣಕಹಳೆ
- 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಭರ್ಜರಿ ರಣಕಹಳೆ
- ಭರ್ಜರಿ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ
ಸುಲ್ತಾನ್‌ಪುರ (ನ.17): 2022ರ ಉತ್ತರ ಪ್ರದೇಶ (Uttara pradesh) ವಿಧಾನಸಭಾ ಚುನಾವಣೆಗೆ (Assembly Election) ಭರ್ಜರಿ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister narendra modi), ‘ಈ ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಮಾಫಿಯಾಗಳ ಕಪಿಮುಷ್ಟಿ ಮತ್ತು ಬಡತನದಲ್ಲಿ ನಲುಗಿದ್ದ ಪೂರ್ವ ಉತ್ತರ ಪ್ರದೇಶದಲ್ಲಿ (Uttara pradesh) ಇದೀಗ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ. ಇದು ಬಿಜೆಪಿ (BJP) ಸರ್ಕಾರದ ಸಾಧನೆ’ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಹಿಂದಿನ ಎಸ್‌ಪಿ, ಬಿಎಸ್‌ಪಿ (BSP) ಹಾಗೂ ಕಾಂಗ್ರೆಸ್ (Cingress) ಆಡಳಿತಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ,.
ಉತ್ತರ ಪ್ರದೇಶದ ರಾಜಧಾನಿ ಲಖನೌ (Laknow) ಮತ್ತು ಘಾಜಿಪುರ್ ನಡುವೆ ಸಂಪರ್ಕ ಕಲ್ಪಿಸುವ 22500 ಕೋಟಿ ರು. ವೆಚ್ಚದ 341 ಕಿ.ಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇಗೆ ಚಾಲನೆ ನೀಡಿದ ಬಳಿಕ ಸುಲ್ತಾನ್ ಪುರದಲ್ಲಿ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ (Modi), ‘ಈ ಹಿಂದಿನ ಮುಖ್ಯಮಂತ್ರಿಗಳ (CM) ಅವಧಿಯಲ್ಲಿ ಅಭಿವೃದ್ಧಿ ಎಂಬುದು ಕೇವಲ ಅವರ ಮನೆ ಮತ್ತು ಕುಟುಂಬ (family) ಸದಸ್ಯರು ಇರುವ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ ಪ್ರಸಕ್ತ ಸರ್ಕಾರ, ಪಶ್ಚಿಮ ಉತ್ತರಪ್ರದೇಶದಲ್ಲಿ (uttara pradesh) ಮಾಡಿದಷ್ಟೇ ಅಭಿವೃದ್ಧಿ ಕೆಲಸಗಳನ್ನು ಪೂರ್ವ ಉತ್ತರಪ್ರದೇಶದಲ್ಲೂ ಕೈಗೊಂಡಿದೆ. ಈ ಹಿಂದಿನ ಸರ್ಕಾರಗಳು ಪೂರ್ವ ಉತ್ತರಪ್ರದೇಶವನ್ನು ಮಾಫಿಯಾ ಮತ್ತು ಬಡತನದ ತೆಕ್ಕೆಗೆ ತಳ್ಳಿದ್ದರೆ, ಈಗಿನ ಸರ್ಕಾರದ ಅಭಿವೃದ್ಧಿಯ ಹೊಸ ‘ಹೆದ್ದಾರಿ’ಯನ್ನೇ ತೆರೆಯುತ್ತಿದೆ’ ಎಂದರು.
‘ಈ ಕಾಮಗಾರಿಗೆ ನಾನು ಶಂಕು ಸ್ಥಾಪನೆ ನೆರೆವೇರಿಸಿದಾಗ, ಮುಂದೊಂದು ದಿನ ನಾನೇ ಇದರ ಮೇಲೆ ಇಳಿಯಲಿದ್ದೇನೆ ಎಂದು ಅಂದು ಕೊಂಡಿರಲಿಲ್ಲ. ಆದರೆ ಈ ಎಕ್ಸ್‌ಪ್ರೆಸ್ ವೇ ಭಾರತೀಯ ವಾಯು ಪಡೆಗೆ ಕೂಡಾ ನೆರವಾಗಲಿದೆ. ಅದೇ ರೀತಿ ಬಡವರು, ಮಧ್ಯಮ ವರ್ಗದವರು, ರೈತರು ಮತ್ತು ಉದ್ಯಮಿಗಳಿಗೆ ಕೂಡಾ ಇದರ ಲಾಭ ಸಿಗಲಿದೆ. ಇದೀಗ ಉದ್ಘಾಟಿಸಲಾಗಿರುವ 6 ಪಥಗಳ ಹೊಸ ರಸ್ತೆಯು ರಾಜ್ಯದ ಪೂರ್ವ ವಲಯದ ಹೊಸ ಜೀವನಾಡಿ ಯಾಗಲಿದ್ದು, ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬಲಿದೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
‘7-8 ವರ್ಷಗಳ ಹಿಂದೆ ಇಲ್ಲಿನ ಆಡಳಿತ ನೋಡಿದಾಗ, ಸರ್ಕಾರಗಳೇಕೆ ಇಲ್ಲಿನ ಜನರನ್ನು ಹಿಂಸಿಸುತ್ತಿವೆ ಎಂದು ಯೋಚಿಸುತ್ತಿದ್ದೆ. ಆದರೆ 2014ರಲ್ಲಿ ನೀವು ನನಗೆ ಈ ದೇಶವನ್ನು ಆಳುವ ಅವಕಾಶ ನೀಡಿದ ಬಳಿಕ, ಓರ್ವ ಸಂಸದನಾಗಿ ನಾನು ಇಲ್ಲಿಯ ಪ್ರತಿಯೊಂದು ಸಣ್ಣ ಅಭಿವೃದ್ಧಿ ಕಾರ್ಯಗಳ ಮೇಲೂ ನಿಗಾ ವಹಿಸತೊಡಗಿದೆ. ಆದರೆ ಆಗಿನ ಸರ್ಕಾರಗಳು ಅಭಿವೃದ್ಧಿಯ ವಿಷಯದಲ್ಲಿ ನನಗೆ ಸಹಕಾರ ನೀಡಲಿಲ್ಲ. ಆದರೆ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯ ಹೊಸ ಪುಟ ತೆರೆಯಿತು’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಉದ್ದದ ಎಕ್ಸ್‌ಪ್ರೆಸ್ ವೇ :
ನವದೆಹಲಿ: ದೇಶದಲ್ಲೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಎಂಬ ಹಿರಿಮೆಗೆ ಪಾತ್ರವಾಗಿರುವ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.
ಸದ್ಯ 6 ಪಥ ಇರುವ, ಮುಂದೆ ಅಗತ್ಯಬಿದ್ದರೆ 8 ಪಥಕ್ಕೆ ವಿಸ್ತರಿಸುವ ಅವಕಾಶವುಳ್ಳ 340.8 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್ ವೇಯನ್ನು 22500 ಕೋಟಿ ರು. ವೆಚ್ಚದಲ್ಲಿ ದಾಖಲೆಯ 3 ವರ್ಷದಲ್ಲಿ ನಿರ್ಮಿಸಲಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌ ಜಿಲ್ಲೆಯ ಗೋಸಾಯಿಗಂಜ್ ಮತ್ತು ಗಾಜಿಪುರ ಜಿಲ್ಲೆಯ ಹಯ್‌ದರಿಯಾ ನಡುವೆ ನಿರ್ಮಾಣಗೊಂಡಿರುವ ಈ ಎಕ್ಸ್‌ಪ್ರೆಸ್ ವೇಗೆ 2018ರ ಜು.14ರಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. 2018ರ ಅ.10ರಂದು ನಿರ್ಮಾಣ ಆರಂಭವಾಗಿತ್ತು. ಅದಾಗಿ ಕೇವಲ 3 ವರ್ಷಗಳಲ್ಲೇ ದಾಖಲೆಯ ಅವಧಿಯಲ್ಲಿ ದೇಶದ ಅತಿ ಉದ್ದದ ಈ ಹೆದ್ದಾರಿ ನಿರ್ಮಾಣಗೊಂಡಿದೆ.