Asianet Suvarna News Asianet Suvarna News

ರಾಜಕಾರಣದಲ್ಲಿ ಪೂರ್ಣತೃಪ್ತಿ ಸಿಗುವುದಿಲ್ಲ : ಕೋಟ ಪೂಜಾರಿ

  • ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ
  • ಬೊಮ್ಮಾಯಿ ಉತ್ತಮ ಆಡಳಿತ ನೀಡಲಿದ್ದಾರೆ. ಅವರು ಅನುಭವಿ ರಾಜಕಾರಣಿ.
  •  ಕೊಡಗು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
Minister Kota Shrinivas poojary reacts On siddaramaiah statement about bommai govt snr
Author
Bengaluru, First Published Aug 16, 2021, 8:49 AM IST
  • Facebook
  • Twitter
  • Whatsapp

ಮಡಿಕೇರಿ (ಆ.16): ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಬೊಮ್ಮಾಯಿ ಉತ್ತಮ ಆಡಳಿತ ನೀಡಲಿದ್ದಾರೆ. ಅವರು ಅನುಭವಿ ರಾಜಕಾರಣಿ. ಅವರ ಆಡಳಿತ ಸಿದ್ದರಾಮಯ್ಯಗೆ ನಿರಾಸೆ ಉಂಟುಮಾಡುತ್ತದೆ ಎಂದು ಕೊಡಗು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು ಈ ಉತ್ತರ ನೀಡಿದರು.

ಬೊಮ್ಮಾಯಿ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನಗೊಳ್ಳಬಹುದು: ಹೀಗೊಂದು ಭವಿಷ್ಯ

ಸಚಿವ ಸಂಪುಟ ರಚನೆಯಲ್ಲಿ ಅಸಮಾಧಾನ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ಪೂಜಾರಿ, ಟೀಕೆ, ಟಿಪ್ಪಣಿ, ಅಸಮಾಧಾನ ರಾಜಕಾರಣದಲ್ಲಿ ಸಹಜ. 

ಇಲ್ಲಿ ಪೂರ್ಣ ತೃಪ್ತಿ ಸಿಗೋದಕ್ಕೆ ಸಾಧ್ಯವಿಲ್ಲ. ಪೂರ್ಣ ತೃಪ್ತರು ರಾಜಕಾರಣಿಗಳಾಗಲ್ಲ, ಸನ್ಯಾಸಿಗಳಾಗುತ್ತಾರೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ಮುಖ್ಯಮಂತ್ರಿ ಬೊಮ್ಮಾಯಿ ಪರಿಸ್ಥಿತಿ ನಿಭಾಯಿಸುತ್ತಾರೆ ಎಂದರು.

Follow Us:
Download App:
  • android
  • ios