ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು 2022ರ ಜನವರಿಯಿಂದ ಇದು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಪರಿಶೀಲನೆಗೆ ವಿಶೇಷ ತಂಡ

 ಮೈಸೂರು (ನ.07): ನಗರದಲ್ಲಿ ದ್ವಿಚಕ್ರ ವಾಹನ (Two wheeler) ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ (Helmet) ಧರಿಸಬೇಕು, 2022ರ ಜನವರಿಯಿಂದ ಇದು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಪರಿಶೀಲನೆಗೆ ವಿಶೇಷ ತಂಡ ರಚಿಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ (Police commissioner chandragupta) ಹೇಳಿದರು.

Add Asianetnews Kannada as a Preferred SourcegooglePreferred

ನಗರ ಪೊಲೀಸ್‌ (Police) ಮತ್ತು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂಚಾರ ಜಾಗೃತಿ ಮತ್ತು ಪತ್ರಕರ್ತರಿಗೆ ಹೆಲ್ಮೆಟ್‌ (Helmet) ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್‌ (Covid) ನಿಂದ ಕಠಿಣ ನಿಯಮ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. 2022ರಿಂದ ಜನವರಿಯಿಂದ (January) ನಗರದಲ್ಲಿ ಕಡ್ಡಾಯ ಹೆಲ್ಮೆಟ್‌ ಧಾರಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಲ್ಮೆಟ್‌ ಪರಿಶೀಲನೆಗೆ ವಿಶೇಷ ತಂಡ ರಚಿಸಲಾಗುವುದು. ಕೇವಲ ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ, ಸಾರ್ವಜನಿಕರ ಸಂಚಾರ ನಿಯಮದ ಜಾಗೃತಿ ಮುಖ್ಯ ಎಂದರು.

ಉಂಟಾಗುವ ಅಪಘಾತಗಳಿಗೆ ಪೊಲೀಸರು (Police) ಮತ್ತು ಇತರರನ್ನು ದೂರಿದರೆ ಪ್ರಯೋಜನೆ ಇಲ್ಲ. ದೂರ ಪ್ರಯಾಣಕ್ಕೆ ಮಾತ್ರ ಹೆಲ್ಮೆಟ್‌ ಧರಿಸಬೇಕು, ನಮ್ಮ ಏರಿಯಾದಲ್ಲೇ ಓಡಾಡಲು ಹೆಲ್ಮೆಟ್‌ ಬೇಕಿಲ್ಲ ಎಂಬ ಮನೋಭಾವನೆಯಿಂದ ಹೊರಬರಬೇಕು. ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು ಎಂದು ತಿಳಿಸಿದರು.

ಸಮಾಜದಲ್ಲಿ ಒಬ್ಬರು ಪಾಲಿಸುವುದನ್ನೇ ಇತರರು ಅನುಸರಿಸುತ್ತಾರೆ. ಒಬ್ಬ ಬೈಕ್‌ (Bike) ಸವಾರ ಸಿಗ್ನಲ್‌ ಜಂಪ್‌ (signal Jump) ಮಾಡಿದರೆ, ಹೆಲ್ಮೆಟ್‌ ಧರಿಸದಿದ್ದರೆ ಮತ್ತಿಬ್ಬರು ಅದನ್ನು ಅನುಸರಿಸುತ್ತಾರೆ. ಹೀಗಾಗಿ ಒಂದಿಷ್ಟು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಅದನ್ನು ಉಳಿದವರು ಅನುಸರಿಸುತ್ತಾರೆ. ಹೀಗಾಗಿ ಜವಬ್ದಾರಿ ಸ್ಥಾನದಲ್ಲಿರುವವರು ಸಂಚಾರ ನಿಯಮ ಪಾಲಿಸುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಸುಯೋಗ್‌ ಆಸ್ಪತ್ರೆಯ (Suyog Hospital) ನರರೋಗ ತಜ್ಞ ಡಾ. ರಾಜೇಶ್‌ ಮಾತನಾಡಿ, ಅಪಘಾತ ಉಂಟಾದ ಕೂಡಲೇ ತಡ ಮಾಡದ ಹತ್ತಿರ ಆಸ್ಪತ್ರೆಗಳಿಗೆ ದಾಖಲಿಸಬೇಕು. ಅಪಘಾತಗಳಿಂದ ಉಂಟಾಗುವ ಸಮಸ್ಯೆಗಳು ನರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಮುಂದಿನ ಜೀವನವೇ ಮಂಕಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ಕೋರಿದರು.

ಡಿಸಿಪಿ ಗೀತಾಪ್ರಸನ್ನ, ಟ್ರಾಫಿಕ್‌ ಎಸಿಪಿ ಎ.ಸಿ. ಗಂಗಾಧರ್‌ ಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ, ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಚಾರ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಇದ್ದರು.

 ಕೋಲ್ಕತಾದಲ್ಲೊಂದು ಹೊಸ ನಿಯಮ

ಮೋಟಾರು ವಾಹನ ತಿದ್ದುಪಡಿ ಮಾಡಿ ದಂಡದ ಮೊತ್ತವನ್ನು ದುಪ್ಪಟ್ಟು ಮಾಡಿದ್ದರೂ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾತ್ರ ಸಂಪೂರ್ಣ ನಿಂತಿಲ್ಲ. ಪ್ರಮುಖವಾಗಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಲ್ಲಿದ್ದರೂ ಹಲವರು ಪಾಲಿಸುತ್ತಿಲ್ಲ. ಪ್ರಾಣ ರಕ್ಷಕ ಹೆಲ್ಮೆಟ್ ಕಡ್ಡಾಯಗೊಳಿಸಲು ಪೊಲೀಸರು ಹೊಸ ನಿಯಮ ಜಾರಿಗೆ ತಂದಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ನಿಯಮದ ದೃಷ್ಟಿಯಿಂದ ಮಾತ್ರವಲ್ಲ, ಸವಾರ ಹಾಗೂ ಹಿಂಬದಿ ಸವಾರರ ಪ್ರಾಣ ರಕ್ಷಣೆಗೂ ಹೆಲ್ಮೆಟ್ ಅಗತ್ಯವಾಗಿದೆ. ಹೆಲ್ಮೆಟ್ ರಹಿತ ಸವಾರರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಇದೀಗ ಪ್ರತಿ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸುವಂತೆ ಮಾಡಲು ಪೊಲೀಸರು , ಹೆಲ್ಮೆಟ್ ಧರಿಸಿದವರಿಗೆ ಮಾತ್ರ ಪೆಟ್ರೋಲ್ ಎಂಬ ಹೊಸ ನಿಯಮ ಜಾರಿಗೆ ತಂದಿದ್ದಾರೆ. ಈಗಾಗಲೇ ಹಲವು ನಗರಗಳಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮ ಜಾರಿಯಲ್ಲಿದೆ. ಇದೀಗ ಕೋಲ್ಕತಾದಲ್ಲಿ ಈ ನಿಯಮ ಜಾರಿಯಾಗಿದೆ.