* ಬೈಕ್‌ನಲ್ಲಿ ಪಟಾಕಿ ಕೊಂಡೊಯ್ಯುವಾಗ ಸ್ಫೋಟ* ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ* ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು* ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯ
ಪುದುಚೆರಿ(ನ. 05) ದೀಪಾವಳಿ (Deepavali) ಸಂದರ್ಭ ಇದಕ್ಕಿಂತ ಘೋರ ಘಟನೆ ಇನ್ನೊಂದಿಲ್ಲ. ಬೈಕ್‌ನಲ್ಲಿ ಪಟಾಕಿ (Firecrackers) ಕೊಂಡೊಯ್ಯುವಾಗ ಸ್ಫೋಟವಾಗಿದ್ದು (explode) ತಂದೆ ಮಗ ಸಾವನ್ನಪ್ಪಿದ್ದಾರೆ.
ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದೆ. ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು ಕಂಡಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲೈನೇಸನ್ ಮತ್ತು ಅವರ ಏಳು ವರ್ಷದ ಪುತ್ರ ಪ್ರದೀಪ್ ಘಟನೆಯಲ್ಲಿ ದಾರುಣ ಸಾವು ಕಂಡಿದ್ದಾರೆ. ಬೈಕ್ ನಲ್ಲಿ ಪಟಾಕಿ ತೆಗೆದುಕೊಂಡು ಬಾಕ್ಸ್ ಇಟ್ಟುಕೊಂಡು ಮನೆ ಕಡೆ ಬರುತ್ತಿದ್ದರು.
ಸ್ಫೋಟದ ರಭಸಕ್ಕೆ ಹತ್ತಿರದಲ್ಲಿಯೇ ಇದ್ದ ವಾಹನ ಸವಾರ ಗಣೇಶ್, ಸೈಯದ್ ಅಹಮದ್, ಮತ್ತು ವಿಜಿ ಆನಂದ್ ಗಂಭೀರ ಗಾಯಗೊಂಡಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ನಕಲಿ ಮದ್ಯ ಕುಡಿದು ಕೊಯಂಬತ್ತೂರಿನಲ್ಲಿ ಮೂವರು ಮೃತಪಟ್ಟಿದ್ದಾರೆ. ಬೈಕ್ನ ಹಿಟ್ನಿಂದಾಗಿ ಪಟಾಕಿ ಸಿಡಿದಿರುವ ಶಂಕೆ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ಸ್ಫೋಟದ ಭೀಕರ ದೃಶ್ಯ ಸೆರೆಯಾಗಿದೆ.
ಪಟಾಕಿಯಿಂದ ಗಾಯಗೊಂಡರೆ ತಕ್ಷಣ ಮನೆ ಮದ್ದು
ಪಟಾಕಿ ಸಣ್ಣ ಮಕ್ಕಳ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಇದರ ಹುಚ್ಚಿನಿಂದ ಬದುಕನ್ನೇ ಕತ್ತೆಲೆ ದೂಡಿಕೊಂಡವರು ಇದ್ದಾರೆ. ಪಟಾಕಿ ಹೊಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಾಣಿ-ಪಕ್ಷಿಗಳಿಗೂ ಮಾರಕವಾಗಿದ್ದು ಪಟಾಕಿ ಸಿಡಿತ ನಿಯಂತ್ರಣದಲ್ಲಿ ಇರಬೇಕು ಎಂದು ಪರಿಸರ ವಾದಿ ಹೇಳುತ್ತಾರೆ.
ಪಟಾಕಿಯನ್ನು ನಿಷೇಧಿಸುವುದು ಯಾವುದೇ ಸಮುದಾಯದ ವಿರುದ್ಧವಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾಡಿತ್ತು. ಪಟಾಕಿ ನಿಷೇಧವನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ತಿಳಿಸಿತ್ತು. ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ಎಂದು ಹೇಳಿದ್ದರೂ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಶಬ್ದ ತುಂಬಿಕೊಂಡಿದೆ.
ಪಟಾಕಿಯನ್ನೇ ಆಧರಿಸಿ ಬದುಕು ಕಟ್ಟಿಕೊಂಡವರಿಗೆ ಪರ್ಯಾವ ವ್ಯಸವ್ಥೆ ಮಾಡಿ ಆಯಾ ಸರ್ಕಾರಗಳು ಗೃಹ ಮತ್ತು ಗುಡಿ ಕೈಗಾರಿಕೆ ಮೂಲಕ ಉತ್ತೇಜನ ನೀಡಬಹುದು ಎಂಬ ಸಲಹೆಗಳು ಬಂದಿವೆ.
