Kalaburagi: ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ರವಿವಾರ ಸಂಜೆಯಿಂದ ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಕೊಳ್ಳುರ ಗ್ರಾಮದ ಮಧ್ಯೆ ಇರುವ ಸಣ್ಣ ನಾಲಾದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ‌ಹರಿದ ಪರಿಣಾಮ ಗ್ರಾಮದ ಅನೇಕ ಮನೆಗೆ ‌ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆಗಳು ಹಾಳಾಗಿವೆ. 

Heavy Rain in Chincholi Taluk At Kalaburagi gvd

ಕಲಬುರಗಿ (ಜೂ.12): ರವಿವಾರ ಸಂಜೆಯಿಂದ ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಕೊಳ್ಳುರ ಗ್ರಾಮದ ಮಧ್ಯೆ ಇರುವ ಸಣ್ಣ ನಾಲಾದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ‌ಹರಿದ ಪರಿಣಾಮ ಗ್ರಾಮದ ಅನೇಕ ಮನೆಗೆ ‌ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆಗಳು ಹಾಳಾಗಿವೆ. ಬಡವರು ‌ಕೂಲಿ‌ಕೆಲಸಕ್ಕೆ‌ಹೋದ ಸಂದರ್ಭದಲ್ಲಿ ಗುಡುಗು ಮಿಂಚಿನ ಸಿಡಿಲು ಸಹಿತವಾದ ಮಳೆ ಸುರಿದಿದೆ. ಇದರಿಂದಾಗಿ ‌ಕೊಳ್ಳುರ ಗ್ರಾಮದಲ್ಲಿ ಸಣ್ಣ ‌ನಾಲೆ‌ ಪಕ್ಕದಲ್ಲಿ ಮನೆ ಮನೆಗೆ ‌ನೀರು ನುಗ್ಗಿದೆ. ಬಡವರ ಜೀವನ ಸಂಕಷ್ಟದ ಸ್ಥಿತಿಯನ್ನು ಮಾಡಿದೆ.

ಬೀಜ ಖರೀದಿಗೆ ಮುಗಿ​ಬಿದ್ದ ರೈತರು: ತಾಲೂಕಿನ ಕೆಲವು ಗ್ರಾಮಗಳಲ್ಲಿ ಎರಡು ದಿನ ಹಿಂದೆ ಬಿರುಸಿನ ಮಳೆ ಆದ ಹಿನ್ನೆಲೆ ರೈತರು ಮುಂಗಾರು ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆಗಾಗಿ ಬೀಜಗಳನ್ನು ಖರೀದಿಸಲು ಮುಗಿ​ಬಿ​ದ್ದರು. ಐನಾಪೂರ, ಚಿಂಚೋಳಿ, ಸುಲೇಪೇಟ, ಕೋಡ್ಲಿ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಸೋಯಾಬಿನ್‌, ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸಜ್ಜೆ ಇನ್ನಿತರ ಮುಂಗಾರಿನ ಬಿತ್ತನೆಬೀಜಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ಅನೇಕ ರೈತರು ತಮ್ಮ ಹೊಲಗಳನ್ನು ಹಸನು ಮಾಡಿಕೊಂಡು ಮಳೆ ಬಿದ್ದ ನಂತರ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕಳೆದ 2 ದಿನ​ಗಳಿಂದ ಮಳೆ ಆಗುತ್ತಿರುವುದರಿಂದ ರೈತರು ಬಿತ್ತನೆಯನ್ನು ಸೋಮವಾರ ಮಾಡಲಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿರಾಠೋಡ ತಿಳಿಸಿದ್ದಾರೆ.

ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಧ್ಯೇಯ: ಸಿದ್ದರಾಮಯ್ಯ

ರೈತರಿಗೆ ಬಿತ್ತನೆ ಬೀಜಗಳ ಕೊರತೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ 9 ಮಿ.ಮೀ. ಮಳೆ ಸುರಿದ ನಂತರವೇ ಬಿತ್ತನೆ ಕಾರ್ಯ ನಡೆಸಬೇಕಾಗಿದೆ. ತರಾತುರಿಯಲ್ಲಿ ಬಿತ್ತನೆ ಮಾಡುವುದು ಸರಿಯಲ್ಲ. ಮುಂದೆ ಮಳೆ ಕೊರತೆ ಉಂಟಾದಲ್ಲಿ ಬೀಜಗಳು ಮಣ್ಣಿನಲ್ಲಿ ಕೊಳೆಯುವ ಸಾಧ್ಯತೆ ಇದೆ. ಆದ್ದ​ರಿಂದ ಸಮರ್ಪಕವಾಗಿ ಮಳೆ ಬಿದ್ದ ನಂತರ ಬಿತ್ತನೆ ಕಾರ್ಯ ನಡೆಸಬೇಕೆಂದು ಸಲಹೆ ಅವರು ನೀಡಿದರು. ತಾಲೂಕಿನ ಹಸರಗುಂಡಗಿ, ತುಮಕುಂಟಾ, ದೇಗಲಮಡಿ, ಸಾಲೇಬೀರನಳ್ಳಿ, ಸಲಗರ ಬಸಂತಪೂರ, ಗಡಿಲಿಂಗದಳ್ಳಿ, ಚಂದನಕೇರಾ ಮುಂತಾದ ಗ್ರಾಮಗಳಲ್ಲಿ ಸೋಮವಾರ ಬಿತ್ತನೆ ಕಾರ್ಯವನ್ನು ರೈತರು ನಡೆಸಲಿದ್ದಾರೆ ಎಂದು ರೈತರಾದ ಪ್ರಭುಲಿಂಗ ಲೇವಡಿ ತಿಳಿಸಿದ್ದಾರೆ.

ರೈತರಿಗೆ ಬಿತ್ತನೆ ಬೀಜದ ಸಮಸ್ಯೆ ಇಲ್ಲ: ತಾಲೂಕಿನ ರೈತರಿಗೆ ಬಿತ್ತನೆ ಬೀಜಗಳ ಸಮಸ್ಯೆ ಇಲ್ಲವೇ ಕೊರತೆ ಆಗದಂತೆ ಹೆಚ್ಚು ಗಮನಹರಿಸಲಾಗುತ್ತಿದೆ.ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕೆಂದು ಶಾಸಕ ಡಾ. ಅವಿನಾಶ ಜಾಧವ್‌ ಹೇಳಿದರು. ಪಟ್ಟಣದ ಚಂದಾಪೂರ ನಗರದಲ್ಲಿ ಇರುವ ಸರಕಾರಿ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರಿ ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದರು.ನಮ್ಮ ತಾಲೂಕಿನಲ್ಲಿ ರೈತರಿಗೆ ಕಳೆದ ವರ್ಷ ಬಿತ್ತನೆ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗಿತ್ತು. ಈ ವರ್ಷವೂ ಸಹಾ ಸೋಯಾ, ತೊಗರಿ, ಉದ್ದು, ಹೆಸರು, ಮೆಕ್ಕೆಜೊಳ, ಸಜ್ಜೆ ಇನ್ನಿತರ ಮುಂಗಾರು ಬಿತ್ತನೆ ಬೀಜಗಳನ್ನು ಇಗಾಗಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.ರೈತರು ದಾಖಲೆಗಳನ್ನು ಕೃಷಿ ಇಲಾಖೆಗೆ ನೀಡಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದರು.

ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ಮಾತನಾಡಿ, ಸ್ವಂತ ಹೊಲ ಇರಲಿ ಇಲ್ಲವೇ ಲೀಜಗೆ ಹಾಕಿಕೊಂಡವರಿಗೆ ಕಾನೂನು ಪ್ರಕಾರ ಬಿತ್ತನೆ ಬೀಜಗಳನ್ನು ನೀಡಲಾಗುವುದು.ಆದರು ಸಹಾ ಎಲ್ಲ ರೈತರಿಗೆ ಬಿತ್ತನೆ ಬೀಜಗಳನ್ನು ನೀಡಲಾಗುವುದು. ತಾಲೂಕಿನಲಿ ಮಳೆ ಇನ್ನು ಸರಿಯಾಗಿ ಬಿದ್ದಿಲ್ಲ 90 ಮಿಮಿ ಮಳೆ ಸುರಿದ ನಂತರವೇ ಬಿತ್ತನೆ ಮಾಡಬೇಕು.ಮಳೆ ಕೊರತೆಯಾದರೆ ಬೀಜಗಳು ಮಣ್ಣಿನಲ್ಲಿ ಕೊಳೆಯುತ್ತವೆ.ಕಳೆದ ವರ್ಷ ಕೆಲವು ಗ್ರಾಮಗಳಲ್ಲಿ ರೈತರು ಮಳೆ ಬೀಳದೇ ಇದ್ದರು ಬಿತ್ತನೆ ಮಾಡಿದ್ದಾರೆ. ಈ ವರ್ಷ ಹಾಗೇ ಮಾಡಬಾರದು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳಿವೆ ಸಮಸ್ಯೆ ಇಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios