ನಾನು ಬದುಕಿದ್ದಾಗಲೇ ಹಾಸನಕ್ಕೆ ಮತ್ತೆ ಕೃಷಿ ಕಾಲೇಜು ತರುವೆ ಎಂದ ರೇವಣ್ಣ
ಹಾಸನ ತಾಲೂಕಿನ ಕೃಷಿ ಕಾಲೇಜನ್ನು ಸರ್ಕಾರ ರದ್ದುಪಡಿಸಿರುವ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ(ಜೂ. 13): ಹಾಸನ ತಾಲೂಕಿನ ಕೃಷಿ ಕಾಲೇಜನ್ನು ಸರ್ಕಾರ ರದ್ದುಪಡಿಸಿರುವ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಯಡಿಯೂರಪ್ಪರವರು ಏನು ಶಾಶ್ವತವಾಗಿ ಅಧಿಕಾರದಲ್ಲಿ ಇರ್ತಾರ? ನಾನು ಬದುಕಿದ್ದಾಗಲೇ ಹಾಸನದಲ್ಲಿ ಮತ್ತೆ ಕೃಷಿ ಕಾಲೇಜು ತಂದೇ ತರುತ್ತೇನೆ ಎಂದು ರೇವಣ್ಣ ಶಪಥ ಮಾಡಿದರು.
ಉತ್ತರ ಕನ್ನಡದಲ್ಲಿ ಶತಕ ತಲುಪಿದ ಕೊರೋನಾ: ಇನ್ನೂ ಬರಲಿದ್ದಾರೆ 'ಮಹಾ'ಜನ
ಜಿಲ್ಲೆಯ ಬಗ್ಗೆ ದ್ವೇಷದ ರಾಜಕಾರಣ ಮಾಡಿದರೆ ಎದುರಿಸುವ ಶಕ್ತಿ ನಮಗಿದ್ದು, ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಎಚ್ಚರಿಸಿದರು. ವಯಸ್ಸಾದ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಏತಕ್ಕೆ ಈ ಕೆಟ್ಟಾಲೋಚನೆ. ಇಂತಹ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದರು.
ಗುತ್ತಿಗೆದಾರರ ನೂರಾರು ಕೋಟಿ ಹಣ ತಡೆಹಿಡಿಯಲಾಗಿದ್ದು, ಸಣ್ಣ ಗುತ್ತಿಗೆದಾರರ ಹಣ ತಡೆ ಹಿಡಿಯಲಾಗಿದೆ. ಗುತ್ತಿಗೆದಾರರು ತಮ್ಮ ಮನೆಯ ಒಡವೆ ಹಾಗೂ ಇತರೆ ಆಸ್ತಿಯನ್ನು ಅಡವಿಟ್ಟಿದ್ದು, ಕೆಲ ದಿನಗಳಲ್ಲಿ ಬೀದಿಗೆ ಬರಬಹುದು ಎಂದು ಹೇಳಿದರು.
ಡೆಡ್‌ಲೈನ್‌ಗಿಂತ 8 ತಿಂಗಳ ಮೊದಲೇ ಸೇತುವೆ ಉದ್ಘಾಟಿಸಿದ ಸಂಸದ
ನಮ್ಮ ಪಕ್ಷದ ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ ಕಡೆಯವರು ದುಡ್ಡು ಕೊಟ್ಟು ಕಾಮಗಾರಿ ಮಂಜೂರು ಮಾಡಿಸಿಕೊಂಡು ಬಂದು ಯಾವ ಪ್ರಯೋಜನವಾಗಲಿಲ್ಲ. ಈಗ ತಮ್ಮ ಪಕ್ಷದ ಶಾಸಕರ ಕಡೆಯವರೇ ಹಣ ನೀಡಿ ಕಾಮಗಾರಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಕಾಮಗಾರಿ ಬಗ್ಗೆ ರೇವಣ್ಣನವರು ಒಂದೊಂದಾಗಿ ಬಾಯ್ಬಿಟ್ಟರು.
ಹೇಮಾವತಿ ನೀರಾವರಿಯ ಕಾಮಗಾರಿಯಲ್ಲಿ ಶೇ. 8 ರಷ್ಟುಹಣ ನೀಡಿದವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ ಎಂದು ದೂರಿದರು.
ಈಗಿನದು ಎಷ್ಟುಪರ್ಸೆಂಟ್?
ಈ ಹಿಂದೆ ಮೋದಿಯವರು ರಾಜ್ಯ ಸರ್ಕಾರವನ್ನು ಎಂಟು ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ಈಗ ಅವರೇ ತನಿಖೆ ಮಾಡಿಸಲಿ ಈಗಿನದು ಎಷ್ಟುಪರ್ಸೆಂಟ್ ಸರ್ಕಾರ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಎರಡೂವರೆ ಲಕ್ಷ ಹಣದ ಕಾಮಗಾರಿ ಕೆಲಸ ಮಾಡಿಸಲು ಮುಖ್ಯ ಎಂಜಿನಿಯರ್ ಮಾಹಿತಿ ನೀಡಬೇಕು ಎಂದ ಅವರು ಅವರಿಗೂ ಹಣ ಕೊಡಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಭೂಮಿ ಬಗ್ಗೆ ಸರ್ಕಾರ ತಂದಿರೋ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರ ಮಾತನಾಡಿ, ಸರ್ಕಾರ ರೈತರನ್ನ ಒಕ್ಕಲೆಬ್ಬಿಸೋ ನೀತಿ ಇದಾಗಿದ್ದು, ಸರ್ಕಾರ ಲ್ಯಾಂಡ್ ಮಾಫಿಯಾ ಜೊತೆ ಸೇರಿದೆ. ಇವೆಲ್ಲಾದರೂ ಬಗ್ಗೆ ಗಮನ ನೀಡದ ನರೇಂದ್ರ ಮೋದಿಯವರು ಕಣ್ಮುಚ್ಚಿ ಕುಳಿತಿದ್ದು, ಈಗ ಬರೀ ಪಾಕಿಸ್ತಾನ ಲಡಾಕ್ ನೋಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಕರೆಯಿರಿ ಎಂದು ಹೇಳಿದರೆ ಕರೆಯಲು ಮುಂದಾಗುತ್ತಿಲ್ಲ. ಕೆಲ ದಿನಗಳ ನೋಡಿ ನಂತರ 24 ಜನ ಸದಸ್ಯರು ಧರಣಿ ಮಾಡುತ್ತಾರೆ ಎಂದರು.