ಡೆಡ್‌ಲೈನ್‌ಗಿಂತ 8 ತಿಂಗಳ ಮೊದಲೇ ಸೇತುವೆ ಉದ್ಘಾಟಿಸಿದ ಸಂಸದ

First Published 13, Jun 2020, 9:57 AM

ಪಂಪ್‌ವೆಲ್‌ ಮೇಲ್ಸೇತುವೆ ವಿಳಂಬಗತಿಯ ಕಾಮಗಾರಿಯಿಂದ ಟೀಕೆಗೆ ಒಳಗಾಗಿದ್ದ ಸಂಸದ ನಳಿನ್‌ ಕುಮಾರ್‌ ಇದೀಗ ಗುರುಪುರದ ಬೃಹತ್‌ ಸೇತುವೆಯನ್ನು 8 ತಿಂಗಳ ಮೊದಲೇ ಕಾಮಗಾರಿ ಮುಕ್ತಾಯಗೊಳಿಸಿದ್ದಲ್ಲದೆ, ಶುಕ್ರವಾರ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಇಲಲ್ಇವೆ ಫೋಟೋಸ್

ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ 39.4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ 175 ಮೀ. ಉದ್ದದ ಸೇತುವೆ ಇದು. 2019ರ ಫೆಬ್ರವರಿಯಲ್ಲಿ ಸೇತುವೆ ಕಾಮಗಾರಿ ಆರಂಭಿಸಲಾಗಿದ್ದು, ಟೆಂಡರ್‌ ಕರಾರಿನಂತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕಿತ್ತು.

ಆದರೆ ಶರವೇಗದಲ್ಲಿ ಕಾಮಗಾರಿ ನಡೆಸಿ 8 ತಿಂಗಳ ಮೊದಲೇ ಪೂರ್ತಿಗೊಳಿಸಲಾಗಿದೆ. ಮಳೆಗಾಲಕ್ಕೆ ಮೊದಲೇ ಈ ಬೃಹತ್‌ ಸೇತುವೆ ನಿರ್ಮಾಣವಾಗಿರುವುದರಿಂದ ಅಪಾಯಕಾರಿಯಾಗಿದ್ದ ಹಳೆ ಸೇತುವೆಯಲ್ಲಿ ವಾಹನ ಸಂಚಾರ ಮಾಡುವುದು ತಪ್ಪಿದೆ.

ಕೆಲಸದ ಮೂಲಕ ಉತ್ತರ: ಸೇತುವೆ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌, ರಾಜಕಾರಣದಲ್ಲಿ ವಿರೋಧಿಗಳ ಟೀಕೆಗಳು ಸಾಮಾನ್ಯ. ಇಂಥ ಟೀಕೆಗಳಿಗೆ ಕೆಲಸದ ಮೂಲಕ ಉತ್ತರ ನೀಡಬೇಕು. ಹಲವು ಕಾರಣಗಳಿಂದ ಪಂಪ್‌ವೆಲ್‌ ಮೇಲ್ಸೇತುವೆ ಕೆಲಸ ವಿಳಂಬವಾದಾಗ ವಿರೋಧಿಗಳು ನನ್ನ ಮೇಲೆ ಗೂಬೆ ಕೂರಿಸಿದ್ದರು. ಇಲ್ಲಿ ಎರಡು ವರ್ಷದ ಅವಧಿಗಿಂತ ಮುಂಚಿತವಾಗಿ ಗುರುಪುರ ಸೇತುವೆ ಲೋಕಾರ್ಪಣೆಗೊಳ್ಳುತ್ತಲೇ ವಿರೋಧಿಗಳ ಟೀಕೆಗೆ ಬ್ರೇಕ್‌ ಬಿದ್ದಿದೆ, ಜತೆಗೆ ಉತ್ತರವೂ ಸಿಕ್ಕಿದೆ ಎಂದು ಟಾಂಗ್‌ ನೀಡಿದರು.

ಕುಲಶೇಖರ- ಕಾರ್ಕಳ ಹೆದ್ದಾರಿ ಅಗಲವನ್ನು 35 ಮೀ.ಗೆ ಸೀಮಿತಗೊಳಿಸಬೇಕೆಂದು ಮಾಜಿ ಸಚಿವರು ಪಟ್ಟು ಹಿಡಿದಿದ್ದರು, ಆದರೆ ಕೇಂದ್ರ ಸರಕಾರ 45 ಮೀ. ಅಗಲ ಮಾಡಬೇಕು ಎಂದು ಸೂಚಿಸಿತ್ತು. ಇದರಿಂದಾಗಿ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭ ವಿಳಂಬವಾಗಿತ್ತು. ಇದೀಗ 20 ಗ್ರಾಮಗಳ ಪೈಕಿ 18 ಗ್ರಾಮಗಳ 3ಡಿ ಸರ್ವೇ ಸಂಪೂರ್ಣವಾಗಿದೆ. 45 ಮೀ.ಅಗಲೀಕರಣಗೊಳ್ಳಲಿದ್ದು, ಆರು ತಿಂಗಳಲ್ಲಿ ಟೆಂಡರ್‌ ಕರೆಯಲಾಗುತ್ತದೆ ಎಂದವರು ತಿಳಿಸಿದರು.

ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್‌ ಶೆಟ್ಟಿಮಾತನಾಡಿದರು. ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಜಗದೀಶ ಶೇಣವ, ರಾಜೇಶ್‌ ಕೊಟ್ಟಾರಿ, ಜಿಪಂ ಸದಸ್ಯ ಯು.ಪಿ.ಇಬ್ರಾಹಿಂ, ತಾಪಂ ಸದಸ್ಯ ಸಚಿನ್‌ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ.ಎಂ. ಉದಯ ಭಚ್‌, ರಾಜೇಶ್‌ ಸುವರ್ಣ ಗುರುಪುರ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿಮತ್ತಿತರರು ಇದ್ದರು.

loader