Asianet Suvarna News Asianet Suvarna News

ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕುವವರನ್ನು ತಿರಸ್ಕರಿಸಿ: ಎಚ್‌ಡಿಕೆ

ನನ್ನನ್ನು ಕೈ ಬಿಡಬೇಡಿ. ನನ್ನ ಆರೋಗ್ಯ ಸರಿ ಇಲ್ಲದಿದ್ದರೂ ನಾನು ಪಕ್ಷ ಉಳಿಸಲು ಹೋರಾಡ್ತಿದ್ದೀನಿ. ನಿಮ್ಮಲ್ಲಿ ಯಾರಿಗೆ ಯಾವುದೇ ತೊಂದರೆಯಾದರೂ ನಾನು ಜೊತೆ ಇರುತ್ತೇನೆ. ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕುವ ವ್ಯಕ್ತಿಗಳನ್ನು ತಿರಸ್ಕರಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

hate those who cheats devegowda family says kumaraswamy
Author
Bangalore, First Published Dec 3, 2019, 8:44 AM IST

ಮಂಡ್ಯ(ಡಿ.03): ನನ್ನನ್ನು ಕೈ ಬಿಡಬೇಡಿ. ನನ್ನ ಆರೋಗ್ಯ ಸರಿ ಇಲ್ಲದಿದ್ದರೂ ನಾನು ಪಕ್ಷ ಉಳಿಸಲು ಹೋರಾಡ್ತಿದ್ದೀನಿ. ನಿಮ್ಮಲ್ಲಿ ಯಾರಿಗೆ ಯಾವುದೇ ತೊಂದರೆಯಾದರೂ ನಾನು ಜೊತೆ ಇರುತ್ತೇನೆ. ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕುವ ವ್ಯಕ್ತಿಗಳನ್ನು ತಿರಸ್ಕರಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ಶ್ರೀರಂಗ ಟಾಕೀಸ್‌ ಮೈದಾನದಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶದಲ್ಲಿ ಕೆಆರ್‌ ಪೇಟೆ ತಾಲೂಕು ಅಧ್ಯಕ್ಷ ಜಾನಕಿರಾಮ್ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ದೂರವಾಣಿ ಮೂಲಕವೇ ಮತದಾರರಿಗೆ ಮನವಿ ಮಾಡಿ, ಹೆæಲಿಕಾಪ್ಟರ್‌ ತೊಂದರೆಯಿಂದ ನಾನು ಕೆ.ಆರ್‌.ಪೇಟೆಗೆ ಬರಲಾಗಲಿಲ್ಲ. ದಯಮಾಡಿ ನನ್ನನ್ನು ಕ್ಷಮಿಸಿ. ನನ್ನ ಮೇಲೆ ಕೋಪ, ಅಸಮಾಧಾನ ಬೇಡ, ನಿಮ್ಮ ಮನೆ ಮಗನಿಗಾಗಿ ಈ ಪಕ್ಷ ಉಳಿಸಿಕೊಡಿ, ನನ್ನ ಜೀವ ಮತ್ತು ಜೀವನವನ್ನು ನಿಮಗೆ ಮೀಸಲಿಟ್ಟಿದ್ದೇನೆ. ಜೆಡಿಎಸ್‌ಗೆ ಮತಕೊಟ್ಟು ದೇವೇಗೌಡರಿಗೆ ಶಕ್ತಿ ತುಂಬಿ ಎಂದು ದೂರವಾಣಿ ಮುಖಾಂತರ ಮತ ಯಾಚಿಸಿದ್ದಾರೆ.

ರಾಜಕೀಯ ವ್ಯಭಿಚಾರಿ:

ಸಮಾವೇಶದಲ್ಲಿ ಮಾತನಾಡಿದ ಶಾಸಕ ಸುರೇಶ್‌ ಗೌಡ, ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ಅವನು ಬೆಳಗ್ಗೆ ಕಾಂಗ್ರೆಸ್‌ ರಾತ್ರಿ ಬಿಜೆಪಿ ಜೊತೆ ಇರುತ್ತಾನೆ. ಆತ ಒಬ್ಬ ದುಷ್ಠ ರಾಜಕಾರಣಿ. ಬಿಜೆಪಿಯವರು ಹಣ ಕೊಟ್ಟರೆ ಪಡೆಯಿರಿ. ಓಟ ಮಾತ್ರ ಜೆಡಿಎಸ್‌ಗೆ ಹಾಕಿ, ಮುಂಬೈನಲ್ಲಿ ಬಿಜೆಪಿ ಕದ್ದು ಬಸುರಿ ಆಗೋ ಕೆಲಸ ಮಾಡಿದೆ. ಮಹಾರಾಷ್ಟ್ರದಲ್ಲಿ ಸರ್ಕಾರದ ರಚನೆಗೆ ಮುಂದಾಗಿ ವಿಫಲವಾದ ಬಿಜೆಪಿ ಕದ್ದು ಬಸುರಾಗೊ ಕೆಲಸ ಮಾಡಿದೆ ಎಂದು ಸುರೇಶ್‌ಗೌಡ ಟೀಕಿಸಿದ್ದಾರೆ.

ಎರಡು ಸಲ ಸೋಲಿಸಿದ್ರಿ, ಈ ಬಾರಿ ಗೆಲ್ಲಿಸಿ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

ಜೆಡಿಎಸ್‌ ಸಮಾವೇಶದಲ್ಲಿ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಹೆಣ್ಣಿಗೆ ಗೌರವ ಕೊಟ್ಟು ಪೂಜ್ಯ ಭಾವನೆಯಿಂದ ಕಂಡು ರಾಜಕೀಯ ಮಾಡುತ್ತಿದ್ದೇನೆ. ನಿನಗೆ ಏನಾದರೂ ಯೋಗ್ಯತೆ ಇದಿಯಾ? ನಾಳೆ ಸಂಜೆ ಆರು ಗಂಟೆಗೆ ನೀನು ಹಂಚುತ್ತಿರುವ ಅದೇ ಸೀರೆ ಉಟ್ಟು ಕದ್ದು ಕೆ.ಆರ್‌.ಪೇಟೆ ಖಾಲಿ ಮಾಡಬೇಕು. ಟಿಕೆಚ್‌ ಕೊಡಿಸಿದ್ದು ನಾನು. ನನ್ನ ಯೋಗ್ಯತೆ ಬಗೆಗೆ ಮಾತನಾಡುವಷ್ಟುನಿನಗೆ ತಾಕತ್ತು ಬಂದಿದೆ ಅಂದ್ರೆ ನಿನಗೆ ನನ್ನ ತಾಕತ್ತು ಏನು ಎನ್ನುವುದನ್ನು ತೋರಿಸುತ್ತೇನೆ ಬಾ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಸವಾಲು ಹಾಕಿದ್ದಾರೆ.

ಸೀರೆ ಪ್ರದರ್ಶನ:

ಬಿಜೆಪಿ ಅಭ್ಯರ್ಥಿ ಅವರು ಸೀರೆ ಹಂಚುತ್ತಿದ್ದಾರೆ. ನೋಡಿ ಇದೇ ಸೀರೆ ಹಂಚಿದ್ದಾರೆ ಎಂದು ಸಿ.ಎಸ್‌.ಪುಟ್ಟರಾಜು ಸೀರೆ ಪ್ರದರ್ಶನ ಮಾಡಿದರು. ಕೆಜಿ ಲೆಕ್ಕದಲ್ಲಿ ಸೀರೆ ತಂದು ಹರಕಲು ಸೀರೆಯನ್ನು ಹಂಚಿದ್ದಾರೆ ಎಂದು ಮೂರು ನಾಲ್ಕು ಸೀರೆಗಳನ್ನು ಪ್ರದರ್ಶನ ಮಾಡಿದ್ದಾರೆ. ಸಮಾವೇಶಕ್ಕೆ ಕುಮಾರಸ್ವಾಮಿ ಬರುವುದಿಲ್ಲ ಎಂದು ಗೊತ್ತಾದ ನಂತರ ಈ ಟೈಮ್ ಚೆನ್ನಾಗಿದೆ ಎಂದು ರೇವಣ್ಣರಿಂದಲೇ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಹುಟ್ಟು ಹಬ್ಬದ ದಿನ ಹುಟ್ಟಿಸಿದಾಕೆಯನ್ನೇ ಕೊಂದ ಪಾಪಿ ಮಗ..!

Follow Us:
Download App:
  • android
  • ios