ಮಂಡ್ಯ(ಡಿ.03): ನಿಮ್ಮ ಜತೆಯಲ್ಲಿದ್ದು ಮನೆ ಮಗನಂತೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಗೆಲ್ಲಿಸಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ, ಮಾಚಗೋನಹಳ್ಳಿ, ಬಲ್ಲೇನಹಳ್ಳಿ, ಕಾಶಿಮುರಕುನಹಳ್ಳಿ, ಹೆರಗನಹಳ್ಳಿ, ಬಸ್ಥಿಹೊಸಕೋಟೆ, ದೊಡ್ಡಗಾಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ್ದಾರೆ.

ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

ಬಿಜೆಪಿ ನೀಡುವ ಹಣ, ಸೀರೆ, ಮೂಗು ಬಟ್ಟು, ವಾಚ್‌ ತಗೆದುಕೊಳ್ಳಿ. ಆದರೆ, ಮತವನ್ನು ನನಗೆ ಹಾಕಿ, ಎರಡು ಬಾರಿ ಸೋಲಿಸಿದ್ದೀರಿ. ಈ ಬಾರಿ ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.

ನಾನು ಕೂಡ ಈ ಹಿಂದೆ ಹಣಕ್ಕಾಗಿ ಮಾರಾಟ ಮಾಡಿಕೊಳ್ಳಬಹುದಿತ್ತು. ಕೇಳಿದಷ್ಟುದುಡ್ಡು, ಅಧಿಕಾರ ಎಲ್ಲವನ್ನೂ ನೀಡುತ್ತಿದ್ದರು. ಆದರೆ, ಮತದಾರರು ನೀಡಿರುವ ಅಧಿಕಾರವನ್ನು ಮಾರಾಟ ಮಾಡಿಕೊಂಡರೇ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಭಾವಿಸಿ ಅಂತಹ ನೀಚ ಕೆಲಸಕ್ಕೆ ಹೋಗಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಬಲೆಗೆರೆ ಪುಟ್ಟಸ್ವಾಮಿ, ಲಕ್ಕೇಗೌಡ, ಬಸವರಾಜು, ಗ್ರಾಪಂ ಸದಸ್ಯ ಮಂಜು ಸೇರಿದಂತೆ ಹಲವರಿದ್ದರು.

ಪ್ರಣಾಳಿಕೆ ಬಿಡುಗಡೆ: ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಏನು..?