Asianet Suvarna News Asianet Suvarna News

ಗುಡಿಸಲುಮುಕ್ತ ರಾಜ್ಯ ಮಾಡಲು ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ

  • ಗುಡಿಸಲುಮುಕ್ತ ರಾಜ್ಯವನ್ನಾಗಿ ಮಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ : ಸಚಿವ ಸಚಿವ ಹಾಲಪ್ಪ ಆಚಾರ 
  • ಕೋನಸಾಗರ ಗ್ರಾಮದಲ್ಲಿ ಶುಕ್ರವಾರ ನಿವೇಶನಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
Government is committed to make the state free of slums says Minister Halappa Achara yalaburga rav
Author
Hubli, First Published Aug 20, 2022, 12:38 PM IST

ಯಲಬುರ್ಗಾ (ಆ.20) : ಗುಡಿಸಲುಮುಕ್ತ ರಾಜ್ಯವನ್ನಾಗಿ ಮಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಶುಕ್ರವಾರ ನಿವೇಶನಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಡವರಿಗೆ ವಿವಿಧ ವಸತಿ ಯೋಜನೆಯಡಿ ಸೂರು ಕಲ್ಪಿಸುವುದಕ್ಕಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳನ್ನು ನೀಡಿದೆ ಎಂದರು.

ಸಚಿವರ ಗ್ರಾಮದಲ್ಲೇ ರಸಗೊಬ್ಬರಕ್ಕಾಗಿ ರೈತರ ಪರದಾಟ!

ಯಲಬುರ್ಗಾ(Yalburga) ಪಟ್ಟಣಕ್ಕೆ 700 ಹಾಗೂ ಕುಕನೂರಿ(Kukanuru)ಗೆ 900 ಸೇರಿದಂತೆ ತಾಲೂಕಿನ ನಾನಾ ಗ್ರಾಪಂಗಳಿಗೆ 3000 ಸಾವಿರ ನಿವೇಶನಗಳನ್ನು ಮಂಜೂರಾತಿ ಮಾಡಲಾಗಿದೆ. ಯಾರು ಕಡು ಬಡವರಿದ್ದಾರೆಯೋ ಅಂಥವರಿಗೆ ಮೊದಲು ಮನೆಗಳನ್ನು ನೀಡಬೇಕು. ಮನೆಗಳ ಹಂಚಿಕೆಯಲ್ಲಿ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಕೂಡ ಒಂದು ರುಪಾಯಿ ತೆಗೆದುಕೊಳ್ಳಬಾರದು. ಮನೆಗಳ ನೀಡುವ ವಿಚಾರದಲ್ಲಿ ಯಾರೇ ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ನನ್ನ ಗಮನಕ್ಕೆ ತರಬೇಕು. ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(Department of Women and Child Development) ಸಚಿವನಾಗಿ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಫಲಾನುಭವಿಗಳಿಗೆ ಸಿಗಬೇಕಾದ ಹಲವಾರು ಯೋಜನೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಯಾವ ಲೋಪವಾಗದಂತೆ ಪಾರದರ್ಶಕತೆಯಿಂದ ತಲುಪಿಸಿದ್ದೇನೆ. ಆದರೆ ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿ ಈ ಇಲಾಖೆಯ ಯೋಜನೆಗಳನ್ನು ಜನರಿಗೆ ತಲುಪುತ್ತಿರಲಿಲ್ಲ. ಈ ಖಾತೆ ಸಚಿವನಾದ ಮೇಲೆ ಎಲ್ಲವನ್ನೂ ಪ್ರಾಮಾಣಿಕವಾಗಿ ತಲುಪಿಸಿದ ಸಂತೃಪ್ತಿ ನನಗಿದೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡುವ ಮೂಲಕ ಜನಪರ ಆಡಳಿತ ನೀಡುತ್ತಿದ್ದಾರೆ. ಇದನ್ನು ಸಹಿಸದ ವಿರೋಧ ಪಕ್ಷ ಕಾಂಗ್ರೆಸ್‌ನವರಿಗೆ ನಿದ್ದೆ ಬರದಂತಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

Koppal: ಸೋಲಾರ್‌ ಕಂಪನಿಗೆ 400 ಎಕರೆ ರೈತರ ಭೂಮಿ

ತಹಸೀಲ್ದಾರ್‌ ಶ್ರೀಶೈಲ ತಳವಾರ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಬಿಜೆಪಿ ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ, ಗ್ರಾಪಂ ಅಧ್ಯಕ್ಷೆ ಸುಮಾ ಎಸ್‌. ಮಾಲಿಪಾಟೀಲ, ಕೆಡಿಪಿ ತಾಪಂ ಸದಸ್ಯೆ ನಿರ್ಮಲಮ್ಮ ಮಾಲಿಪಾಟೀಲ, ಉಪಾಧ್ಯಕ್ಷೆ ಚಂದಮ್ಮ ರಾಮಣ್ಣ ಲಮಾಣಿ, ಕಳಕಪ್ಪ ಕಂಬಳಿ, ಶರಣಪ್ಪ ಇಳಗೇರ, ರತನ್‌ ದೇಸಾಯಿ, ಕೊಟ್ರಪ್ಪ ತೋಟದ, ಸಂಗಪ್ಪ ಬಂಡಿ, ಶಿವಮೂರ್ತಿ ರಾಠೋಡ, ರವಿ ಕಲಬುರ್ಗಿ, ಪಿಡಿಒ ಫಕೀರಪ್ಪ ಕಟ್ಟಿಮನಿ ಹಾಗೂ ಗ್ರಾಪಂ ಸರ್ವ ಸದಸ್ಯರು ಇದ್ದರು.

Follow Us:
Download App:
  • android
  • ios