ಸಚಿವರ ಗ್ರಾಮದಲ್ಲೇ ರಸಗೊಬ್ಬರಕ್ಕಾಗಿ ರೈತರ ಪರದಾಟ!

  • ಯೂರಿಯಾ ರಸಗೊಬ್ಬರಕ್ಕಾಗಿ ರೈತರ ಪಾದರಕ್ಷಗಳ ಸಾಲು
  • ಮಹಿಳಾ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ಗ್ರಾಮದಲ್ಲಿ ಘಟನೆ.
  • ಕುಕನೂರ ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಘಟನೆ.

 

Farmers fight for fertilizer in the minister's village koppala rav

ಕೊಪ್ಪಳ (ಅ.1) : ಬೇಡಿಕೆಗೆ ತಕ್ಕಂತೆ ಸೊಸೈಟಿಯಲ್ಲಿ ಯೂರಿಯಾ ರಸಗೊಬ್ಬರ ಇಲ್ಲದಿರುವ ಪರಿಣಾಮ ರೈತರು ರಸಗೊಬ್ಬರಕ್ಕೆ ನೂಕುನುಗ್ಗಲಿನಲ್ಲಿ ಪರದಾಡುವಂತಾಗಿದೆ. ಈ ಬಾರಿ ಮುಂಗಾರು ಉತ್ತಮ ಮಳೆಯಾಗಿದ್ದು, ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ದೊರಕುತ್ತಿಲ್ಲ. ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದಾರೆ. ಗೊಬ್ಬರದ ಅಭಾವದಿಂದಾಗಿ ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿರುವ ಘಟನೆ ಬೇರೆ ಎಲ್ಲೂ ಅಲ್ಲ, ಮಹಿಳಾ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ಅವರ ಗ್ರಾಮದಲ್ಲೇ ನಡೆದಿದೆ.

ಯುರಿಯಾ ರಸಗೊಬ್ಬರಕ್ಕಾಗಿ ಕುಕನೂರ ತಾಲ್ಲೂಕಿನ ಮಸಬಹಂಚಿನಾಳ ರೈತರು ಸೊಸೈಟಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಮುಂಗಾರು ಪ್ರಾರಂಭಕ್ಕೆ ಮೊದಲು ಎಲ್ಲ ರೈತರಿಗೆ ರಸಗೊಬ್ಬರ ಸಿಗುತ್ತದೆಂದು ಸರ್ಕಾರ ಭರವಸೆ ನೀಡಿತ್ತಾದರೂ. ಸಮರ್ಪಕವಾಗಿ ವಿತರಿಸುವಲ್ಲಿ ವಿಫಲವಾಗಿದೆ. ಕೊಪ್ಪಳ ತಾಲೂಕಿನ ಯಲಬುರ್ಗಾ ಮತ್ತು ಗದಗ ತಾಲೂಕಿನ ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿ ಹಲವೆಡೆ ಯೂರಿಯಾಗಾಗಿ ರೈತರು ಸಹಕಾರ ಸಂಘ ಮತ್ತು ಕೃಷಿ ಕೇಂದ್ರಗಳ ಎದುರು ಸರತಿಯಲ್ಲಿ ಕಾಯುತ್ತಿದ್ದಾರೆ.  ಆದರೆ ಕೃಷಿ ಅಧಿಕಾರಿಗಳು   ಗೊಬ್ಬರದ ಸ್ಟಾಕ್‌ ಇದೆ. ಆದರೆ ತುರ್ತಾಗಿ ಗೊಬ್ಬರ ಖರೀದಿಗೆ ರೈತರು ಮುಗಿ ಬಿದ್ದಿದ್ದರಿಂದ ಪೂರೈಕೆಯಲ್ಲಿ ಗೊಂದಲ ಆಗಿದೆ ಎಂದು ಹೇಳಿದ್ದಾರೆ.

Farmers fight for fertilizer in the minister's village koppala rav

ನ್ಯಾನೋ ಯೂರಿಯಾ ಉತ್ಪಾದನೆ ಆರಂಭಿಸಿದ ಮೊದಲ ದೇಶ ಭಾರತ, ಡ್ರೋನ್ ಸಿಂಪಡಣೆ ಯಶಸ್ವಿ!

ಆತಂಕದಲ್ಲಿ ರೈತರು : ಮಳೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಹಾಳಾಗುವ ಹಾಗೂ ಕಳೆ ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರ ನೀಡಿದರೆ ಬೆಳೆ ಚಿಗುರುತ್ತದೆ. ಹೀಗಾಗಿ ರೈತರು ಯೂರಿಯಾಗಾಗಿ ಮುಗಿ ಬೀಳುತ್ತಿದ್ದಾರೆ.  ಬೆಳಗ್ಗೆಯಿಂದ ಸಂಜೆವರೆಗೆ ಸರತಿ ಸಾಲು: ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮಸ್ಥರು ಯೂರಿಯಾ ರಸಗೊಬ್ಬರಕ್ಕಾಗಿ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.  ಈ ಸರತಿ ಸಾಲಿನಿಲ್ಲಿ ನಿಂತು ನಿತ್ರಾಣವಾದ ರೈತರು ಪಾದರಾಕ್ಷೆಗಳನ್ನು ಸರತಿಸಾಲಿನಲ್ಲಿಟ್ಟು ಯೂರಿಯಾ ರಸಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ. 

ಇನ್ಮುಂದೆ ಯೂರಿಯಾ ಗೊಬ್ಬರ ಕೊಳ್ಳಲು ಆಧಾರ್‌ ಕಾರ್ಡ್‌, ಪಹಣಿ ಕಡ್ಡಾಯ..!

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪೂರೈಕೆ ಮಾಡದ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ..  ರಸಗೊಬ್ಬರ ಸ್ಟಾಕ್ ಇದೆ ಎಂದು ಸಚಿವರು, ಅಧಿಕಾರಿಗಳು ಹೇಳುತ್ತಾರೆ. ಆದರೆ ರಸಗೊಬ್ಬರಕ್ಕಾಗಿ ಸೊಸೈಟಿ ಮುಂದೆ ದಿನವಿಡೀ ಕಾದು ನಿಂತರೂ .ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಮರ್ಪಕವಾಗಿ, ತ್ವರಿತವಾಗಿ ರಸಗೊಬ್ಬರ ಪೂರೈಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios