Asianet Suvarna News Asianet Suvarna News

ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ

  • ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಅಹಾರ
  • ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಸಂಚಾರಿ ಕ್ಯಾಂಟಿನ್ 
  • ಹಸಿವಿನಿಂದ ತತ್ತರಿಸುತ್ತಿರುವವರಿಗೆ ಸಹಾಯ ಮಾಡಲು ಆಹಾರ ಪೂರೈಕೆ
Free food For People from Appaji mobile canteen in bengaluru snr
Author
Bengaluru, First Published May 18, 2021, 2:07 PM IST

ಬೆಂಗಳೂರು (ಮೇ.18): ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ತತ್ತರಿಸುತ್ತಿರುವವರಿಗೆ ಸಹಾಯ ಮಾಡಲು ಮುಂದಾಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ ಸರವಣ ಅವರು ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಸಂಚಾರಿ ಕ್ಯಾಂಟಿನ್  ಆರಂಭಿಸಿದ್ದಾರೆ. 

ಉಚಿತವಾಗಿ ಊಟದ ಪ್ಯಾಕೇಟ್‌ಗಳನ್ನು  ವಿತರಣೆ ಮಾಡಲು ಪ್ರಾರಂಭಿಸಿದ್ದಾರೆ. 

ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಕೆ.ಆರ್‌ ಮಾರುಕಟ್ಟೆ ಮೆಟ್ರೋ, ಸ್ಟೇಷನ್ ಬಳಿ ಈ ಕ್ಯಾಂಟಿನ್‌ಗೆ  ಮೇ 17 ರಂದು ಚಾಲನೆ ನಿಡಿದ್ದಾರೆ.  ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹುಟ್ಟುಹಬ್ಬವನ್ನಿ ಆಚರಿಸಬಾರದು. ನೊಂದವರು, ಬಡವರಿಗೆ ನೆರವಾಗಬೇಕು ಎಂದು ಹೆಳಿದ್ದರು. ಅದರಂತೆ  ಸಂಚಾರಿ ಕ್ಯಾಂಟೀನ್ ಮೂಲಕ  ಮನೆ ಬಾಗಿಲಿಗೆ ಊಟದ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದರು.

ನಿತ್ಯ 500 ಮಂದಿಗೆ ನಟ ಶಿವಣ್ಣ ಊಟ, ತಿಂಡಿ, ಚಹಾ ‘ಆಸರೆ’! ...

ಕಳೆದ ನಾಲ್ಕು ವರ್ಷದಿಂದ ಹಲುಮಂತನಗರದಲ್ಲಿ  ಅಪ್ಪಾಜಿ ಕ್ಯಾಂಟೀನ್ ನಡೆಸಲಾಗುತ್ತಿದೆ. ಕಲೆದ ವರ್ಷ ಲಾಕ್‌ಡೌನ್ ವೇಳೆಯಲ್ಲಿ ಇದೇ ರೀತಿಯ ವ್ಯವಸ್ಥೆ ಕ್ಪಿಸಲಾಗಿತ್ತು. ಇದೀಗ ಸಂಚಾರಿ ಕ್ಯಾಂಟೀನ್ ಮೂಲಕ ಸೇವೆ ಒದಗಿಸುತ್ತಿದ್ದೇವೆ. ಅಗತ್ಯ ಇರುವವರು ಮೊದಲೇ ಬೇಡಿಕೆ ಸಲ್ಲಿಸಿದರೆ ಅಗತ್ಯಕ್ಕೆ ತಕ್ಕಂತೆ ಊಟ ಪೂರೈಸುತ್ತೇವೆ ಎಂದರು. 

2 ಸಾವಿರ ಮಂದಿಗೆ ಊಟ : ಲಾಕ್ಡೌನ್ ವೇಳೆ ಕಷ್ಟದಲ್ಲಿರುವ ಜನರಿಗೆ ಸಹಾಯವಾಗಲಿ ಎಂಬ ಉದ್ದೇಸದಿಂದ ನಿತ್ಯ ಎರಡು ಸಾವಿರ ಊಟ  ನಿಡಲಾಗುತ್ತದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಿಗೆ ಶುಚಿ ರುಚಿಯಾದ ಊಟವನ್ನು ನೀಡಲಾಗುತ್ತದೆ. ಒಂದು ದಿನ ಮುಂಚಿತವಾಗಿ ಕರೆ ಮಾಡಿ ಎಷ್ಟು ಪೊಟ್ಟಣಗಳು ಬೇಕೆಂದು ಹೇಳಬೇಕು. ಎಷ್ಟು ಬೇಕಾಗುತ್ತದೆಯೋ ಅಷ್ಟನ್ನು ನೀಡಲಾಗುತ್ತದೆ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios