ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟಪಡುತ್ತಿರುವ ಜನರ ಹಸಿವು ನೀಗಿಸಲು ನಟ ಡಾ.ಶಿವರಾಜ್‌ಕುಮಾರ್‌ ಮುಂದಾಗಿದ್ದಾರೆ. ‘ಆಸರೆ’ ಯೋಜನೆ ಹೆಸರಿನಲ್ಲಿ ನಾಗವಾರ ಪ್ರದೇಶದ 500 ಮಂದಿಗೆ ಚಹಾ, ತಿಂಡಿ, ಊಟ ಒದಗಿಸುತ್ತಿದ್ದಾರೆ.

ಡಾ. ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಮತ್ತು ಶಿವಣ್ಣ ಬಾಯ್ಸ್ ಸೇರಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಆಹಾರ ಸರಬರಾಜಿಗಾಗಿ ಶಿವಣ್ಣ ಬೊಲೆರೋ ಕ್ಯಾಂಟರ್‌ ವ್ಯವಸ್ಥೆ ಮಾಡಿದ್ದಾರೆ. 10 ದಿನದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದ್ದು, ಲಾಕ್‌ಡೌನ್‌ ಮುಂದುವರೆದರೆ ಸುಮಾರು 1000 ಮಂದಿಯ ಹಸಿವು ನೀಗಿಸಲು ಶಿವಣ್ಣ ಮತ್ತು ತಂಡ ಯೋಚನೆ ಮಾಡುತ್ತಿರುವುದಾಗಿ ಶಿವರಾಜ್‌ಕುಮಾರ್‌ ಆಪ್ತ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ನಟ ಉಪೇಂದ್ರ : ತರಕಾರಿ ಖರೀದಿಸಿ ಉಚಿತ ಹಂಚಿಕೆ