ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಪತ್ನಿ ಲಲಿತಾ ಜಿಟಿ ದೇವೇಗೌಡ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

 ಹುಣಸೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಪತ್ನಿ ಲಲಿತಾ ಜಿಟಿ ದೇವೇಗೌಡ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಿ.ಟಿ. ದೇವೇಗೌಡರ ಪತ್ನಿ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಸಂಭಾವ್ಯ ಅಭ್ಯರ್ಥಿ ಹರೀಶ್‌ ಗೌಡ ಅವರ ತಾಯಿ ಲಲಿತಾ ದೇವೇಗೌಡ ಅವರು ಹನಗೋಡು ಹೋಬಳಿ ಕರ್ಣಕುಪ್ಪೆ ಗ್ರಾಮದಲ್ಲಿ ಏ. 6 ರಂದು ನಡೆದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಯಮಾನುಸಾರ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಭಾಗವಹಿಸಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಚುನಾವಣಾ ಘೋಷಣೆ ಕೂಗಿದ್ದರು. ಇದನ್ನು ಪರಿಶೀಲಿಸಿದ ಫ್ಲೈಯಿಂಗ್‌ ಸ್ಕಾ$್ವಡ್‌ನ ಅಧಿಕಾರಿ ಸುಬ್ರಹ್ಮಣ್ಯ ಅವರು ಕ್ರಮ ಕೈಗೊಳ್ಳುವಂತೆ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಎಚ್‌ಡಿಕೆ ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಆಸೆ

ಎಚ್‌.ಡಿ.ಕೋಟೆ (ಮಾ.02): ಚಿಕ್ಕಣ್ಣನವರ ಕೊನೆಯ ಆಸೆ ತಮ್ಮ ಮಗ ಜಯಪ್ರಕಾಶ್‌ರನ್ನು ಶಾಸಕರನ್ನಾಗಿ ಮಾಡುವುದು ಮತ್ತು ಎಚ್‌.ಡಿ.ದೇವೇಗೌಡ ಅವರ ಕೊನೆ ಆಸೆ ಅವರ ಮಗನಾದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ಆಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಎಂದರು. ಪಟ್ಟಣದಲ್ಲಿ ಗುರುವಾರ ನಡೆದ ಮಾಜಿ ಶಾಸಕ ಚಿಕ್ಕಣ್ಣನವರ ಹುಟ್ಟುಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು. ಪಂಚರತ್ನ ಕಾರ್ಯಕ್ರಮವನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ರೂಪಿಸಿದ್ದು, ತಾಲೂಕಿಗೂ ಆಗಮಿಸಲಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಬೇಕು ಎಂದು ತಿಳಿಸಿದರು.

ದೇವೇಗೌಡರ ಪ್ರಾದೇಶಿಕ ಪಕ್ಷವನ್ನು ಉಳಿಸುವ ಕೆಲಸ ನಿಮ್ಮ ಮೇಲಿದೆ, ಜೆಡಿಎಸ್‌ ಅಸ್ತಿತ್ವವೇ ಇಲ್ಲದ ವೇಳೆಯಲ್ಲಿ ತಾಲೂಕಿನಲ್ಲಿ ಪಕ್ಷದ ಎಂ.ಪಿ. ವೆಂಕಟೇಶ್‌ ಅವರನ್ನು ಗೆಲ್ಲಿಸಿ ಪಕ್ಷಕ್ಕೆ ಅಸ್ತಿತ್ವ ನೀಡಿದ್ದನ್ನು ನಾವು ಮರೆಯುವುದಿಲ್ಲ. ಮೈಸೂರು ಭಾಗದ ಎಲ್ಲ ಜೆಡಿಎಸ್‌ ಶಾಸಕರು ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಚಿಕ್ಕಣ್ಣನವರ ಮಗನನ್ನೇ ಸೂಚಿಸಿದ್ದು, ಇನ್ನು ಹದಿನೈದು ದಿನದಲ್ಲಿ ಅವರ ಹೆಸರನ್ನು ಘೋಷಿಸಲಾಗುವುದು ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, ನಾನು ಅಂದಿನ ಜಟಾಯು ಜಿ.ಟಿ. ದೇವೆಗೌಡರ ಆಶೀರ್ವಾದದಿಂದ 1987ರಲ್ಲಿ ಜಿಪಂ ಸದಸ್ಯನಾಗದಿದ್ದರೆ ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದರು. ಜಿ.ಟಿ. ದೇವೇಗೌಡರು ಬಿಜೆಪಿಗೆ ಹೋದಾಗ ನಮಗೆ ಜಿಲ್ಲೆಯಲ್ಲೆ ಅಸ್ತಿತ್ವವೇ ಇಲ್ಲವಾಗಿತ್ತು. ಅವರು ಮರಳಿ ನಮ್ಮ ಪಕ್ಷಕ್ಕೆ ಬಂದಾಗ ನಮಗೆ ಭೀಮ ಬಲ ಸಿಕ್ಕಂತಾಗಿದೆ ಎಂದು ತಿಳಿಸಿದರು. ನನ್ನ ಮೇಲೆ ಇಟ್ಟಿರುವ ಅಭಿಮಾನ ಮತ್ತು ಪ್ರೀತಿಯನ್ನು ನನ್ನ ಮಗ ಜಯಪ್ರಕಾಶ್‌ ಮೇಲೆಯೂ ಇಡಬೇಕು ಎಂದು ಕಾರ್ಯಕರ್ತರಲ್ಲಿ ಅವರು ಮನವಿ ಮಾಡಿದರು. ನಾನು ನನ್ನ ಮಗನನ್ನು ಜಿಲ್ಲೆಯ ನಾಯಕರಿಗೆ ಹಾಗೂ ಮತ ನೀಡುವ ಜನರ ಮಡಿಲಿಗೆ ಹಾಕಿದ್ದೇನೆ, ಅವರನ್ನು ಬೆಳೆಸುವ ಭಾರ ಇವರ ಮೇಲಿದೆ ಎಂದರು.

2028ರ ವೇಳೆಗೆ ಜೆಡಿ​ಎಸ್‌ ಯುವ ನಾಯ​ಕ​ತ್ವದ ತಂಡ ರಚ​ನೆ: ಎಚ್‌.ಡಿ.ಕುಮಾರಸ್ವಾಮಿ

ಎಚ್‌.ಡಿ. ಕೋಟೆ, ಸರಗೂರು ಅಧ್ಯಕ್ಷರಾದ ಗೋಪಾಲಸ್ವಾಮಿ, ರಾಜೇಂದ್ರ, ಶಾಸಕ ಕೆ. ಮಹದೇವ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮುಖಂಡ ಗಂಗಾಧರ್‌ಗೌಡ, ಜಯಪ್ರಕಾಶ್‌ ಚಿಕ್ಕಣ್ಣ, ಅನಿತಾ ನಿಂಗನಾಯಕ, ನಹಿಮ ಸುಲ್ತಾನ್‌, ಶಾಮ ಸುಂದರ್‌, ಲಿಂಗಯ್ಯ, ಎಂ.ಸಿ. ದೊಡ್ಡನಾಯಕ, ಎಚ್‌.ಸಿ. ಶಿವಣ್ಣ, ಎಂ.ಟಿ. ಕುಮಾರ್‌, ಪ್ರಕಾಶ್‌, ನಾಗರಾಜ್‌ ಮಲಾಡಿ, ಸುನಿಲ್‌, ರಾಜು, ಓಕೆ ಮಹೇಂದ್ರ, ಮಟಕೆರೆ ರಾಜೇಶ್‌, ಶಿವರಾಜ, ವೇಣುಗೋಪಾಲ್‌, ಚಂದನ್‌ಗೌಡ, ಶಫಿ, ರಂಗಪ್ಪ, ನಾಗರಾಜಪ್ಪ, ಕರಿಗೌಡ, ವಕೀಲ ನಾರಾಯಣಗೌಡ, ಕರಿಗೌಡ, ಚಾ. ನಂಜುಂಡಮೂರ್ತಿ, ಬಸವರಾಜು, ಕುಮಾರಿ, ಸವಿತಾ, ಶಿವಮ್ಮ, ಚಾಕಳ್ಳಿ ಕೃಷ್ಣ, ಸಣ್ಣತಾಯಮ್ಮ, ಚೈತ್ರ, ಎಸ್‌.ಎಲ್‌. ರಾಜಣ್ಣ, ನಂಜಪ್ಪ, ಮಹೇಶ್‌, ನಾಗಣ್ಣ, ರವಿಕುಮಾರ್‌, ಅಯಾಜ್‌, ಮಾರುತಿ ಗೋಪಾಲ್‌ಸ್ವಾಮಿ, ಯೋಗ ನರಸಿಂಹ, ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು.