ಕೈಕೊಟ್ಟ ಮಳೆ: ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ..!
100 ವ್ಯಾಟ್‌ದ ಟಿಸಿಗೆ 15 ಪಂಪಸೆಟ್‌ಗಳಿಗೆ ಮಾತ್ರ ವಿದ್ಯುತ್ ಪೂರೈಕೆಯಾಗಬೇಕು. ಆದರೆ ಇಲ್ಲಿನ ಟಿಸಿಗೆ 32 ಪಂ±ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇದರಿಂದಾಗಿ ಪದೇ ಪದೇ ಟಿಸಿ ಸುಟ್ಟು ಸಕಾಲಕ್ಕೆ ದುರಸ್ಥಿ ಆಗದೇ ಇರುವುದಿಂದ ಬೆಳೆಗೆ ನೀರುಣಿಸಿಕೊಳ್ಳಲ್ಲಾಗದೇ ಬೆಳೆ ಒಣಗಿ ಹೋಗಿದ್ದು, ಹೊಲಗಳಲ್ಲಿ ಕುಡಿಯಲು ದನಕರುಗಳಿಗೆ ನೀರು ದೊರೆಯದೆ ರೈತರು ಪರದಾಡುತ್ತಿದ್ದದಾರೆ ಎಂದು ಹೇಳಿದರು.
ಆಳಂದ(ಆ.26): ಕಳೆದೊಂದು ತಿಂಗಳಿಂದ ಮಳೆಯಿಲ್ಲದೆ ಬಿತ್ತನೆಯಾದ ಬೆಳೆ ಒಣಗಲಾರಂಭಿಸಿದ್ದು ಮತ್ತೊಂದಡೆ ನೀರಿದ್ದ ರೈತರು ಪಂಪಸೆಟ್ ಮೂಲಕ ಬೆಳೆಗಳಿಗೆ ನೀರುಣಿಸಿಕೊಳ್ಳಲು ಮುಂದಾದರು ಸಹ ಸಕಾಲಕ್ಕೆ ವಿದ್ಯುತ್20ಪೂರೈಕೆ ಇಲ್ಲದೆ ಬಹುತೇಕ ರೈತರು ಪರದಾಡತೊಡಗಿದ್ದಾರೆ.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿನ ರೈತರ ಹೊಲಗಳ ವಿದ್ಯುತ್ ಪೂರೈಕೆಯ ಟ್ರಾನ್ಸಫಾರಮರ ಸುಟ್ಟು 10 ದಿನಗಳಾದರು ಸಕಾಲಕ್ಕೆ ದುರಸ್ಥಿ ಆಗದೇ ಇರುವುದು ಬೆಳೆ ಉಳಿಸಿಕೊಳ್ಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಮಾಡಿಯಾಳ ಗ್ರಾಮದ ಹಳೆಮನಿ ಅವರ ಹೊಲದಲ್ಲಿನ ವಿದ್ಯುತ್ ಟ್ರಾನ್ಸಫಾರಂ ಸುಟ್ಟು 10 ದಿನಗಳಾದರು ಜೆಸ್ಕಾಂ ಅಧಿಕಾರಿಗಳು ದುರಸ್ಥಿಗೆ ಮುಂದಾಗುತ್ತಿಲ್ಲ. ಮಳೆಯೂ ಬರುತ್ತಿಲ್ಲ. ನೀರುಣಿಸಿಕೊಳ್ಳಲು ಆಗುದೇ ತೊಂದರೆ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತವರಲ್ಲೇ ಇಂದಿರಾ ಕ್ಯಾಂಟೀನ್‌ಗೆ ಗ್ರಹಣ!
ಸುಟ್ಟಿರುವ ಟಿಸಿ ಯಾವಾಗ ದುರಸ್ಥಿ ಮಾಡಲಾಗುತ್ತದೆ ಎಂದು ಸಂಬಂಧಿತ ಕಡಗಂಚಿ ಜೆಸ್ಕಾಂ ವಿಭಾಗದ ಅಧಿಕಾರಿಗಳಿಗೆ ಕೇಳಿದರೆ ನಾಳೆ ನಾಳೆ ಎಂದು 10 ದಿನಗಳಾದರು ಇನ್ನೂ ದುರಸ್ಥಿ ಕೈಗೊಂಡಿಲ್ಲ. ವಿದ್ಯುತ್ ಇಲ್ಲದೆ ಬೆಳೆ ಹಾಳಾಗಿ ನಷ್ಟವಾಗುತ್ತಿದೆ ಎಂದು ಗೋಳಾಡತೊಡಗಿದ್ದಾರೆ.
ಟಿಸಿ ಸುಟ್ಟರೆ 24 ಗಂಟೆಯಲ್ಲಿ ದುರಸ್ಥಿ ಕೈಗೊಳ್ಳಬೇಕು. ಆದರೆ ಮಾಡಿಯಾಳ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕರು ಟಿಸಿ ಸುಟ್ಟಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಇಲ್ಲಿನ ಟಿಸಿಗೆ ವಿದ್ಯುತ್ ಪೂರೈಕೆ ಕಡಿತವಾಗಿದೇ ಎಂದಷ್ಟೇ ಹೇಳುತ್ತಿದ್ದಾರೆ ವಾಸ್ತವ್ಯದಲ್ಲಿ ಟಿಸಿ ಸುಟಿದೆ ಎಂದು ಗ್ರಾಮದವಾಗಿರುವ ಅಖಿಲ ಭಾರತ ಕಿಸಾನಸಭಾ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಆರೋಪಿಸಿದರು.
ಆಳಂದ ಮತ್ತು ಕಡಗಂಚಿಯ ಜೆಸ್ಕಾಂ ಅಧಿಕಾರಿಗಳು ಇದೇ ರೀತಿ ರೈತರೊಂದಿಗೆ ಚೆಲ್ಲಾಟವಾಡಿದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಕಲಬುರಗಿ ಜಿಲ್ಲಾದ್ಯಂತ ಪಿಂಚಣಿ ವಂಚನೆ ಹಗರಣ?
100 ವ್ಯಾಟ್‌ದ ಟಿಸಿಗೆ 15 ಪಂಪಸೆಟ್‌ಗಳಿಗೆ ಮಾತ್ರ ವಿದ್ಯುತ್ ಪೂರೈಕೆಯಾಗಬೇಕು. ಆದರೆ ಇಲ್ಲಿನ ಟಿಸಿಗೆ 32 ಪಂ±ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇದರಿಂದಾಗಿ ಪದೇ ಪದೇ ಟಿಸಿ ಸುಟ್ಟು ಸಕಾಲಕ್ಕೆ ದುರಸ್ಥಿ ಆಗದೇ ಇರುವುದಿಂದ ಬೆಳೆಗೆ ನೀರುಣಿಸಿಕೊಳ್ಳಲ್ಲಾಗದೇ ಬೆಳೆ ಒಣಗಿ ಹೋಗಿದ್ದು, ಹೊಲಗಳಲ್ಲಿ ಕುಡಿಯಲು ದನಕರುಗಳಿಗೆ ನೀರು ದೊರೆಯದೆ ರೈತರು ಪರದಾಡುತ್ತಿದ್ದದಾರೆ ಎಂದು ಹೇಳಿದರು.
ವಿದ್ಯುತ್ ಇಲ್ಲದೆ ಇರುವುದು ರೈತರು ಅವಲಂಬಿತ 32 ಪಂಪಸೆಟ್‌ಗಳಿಗೆ ನೀರಿಲ್ಲದೆ ಈಗಾಗಲೇ ಹಾಕಿದ ಬಾಳೆ, ಕಬ್ಬು, ಮೆಣಸಿಕಾಯಿ, ಈರಳ್ಳಿ, ತರಕಾರಿ, ನಿಂಬೆ, ದಾಳಿಂಬೆ ಹೀಗೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೂಡಲೇ ವಿದ್ಯುತ್ ಪೂರೈಸಿ ರೈತರ ಬೆಳೆ ಉಳಿಸಿಕೊಡದೇ ಹೋದಲ್ಲಿ ವಾರದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಭೀಮಾಶಂಕರ ಮಾಡಿಯಾಳ ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.