Asianet Suvarna News Asianet Suvarna News

ರಾಷ್ಟ್ರಕ್ಕೆ ನಾವೇನು ಮಾಡಬೇಕೆಂದು ಧರ್ಮ ಕಲಿಸುತ್ತದೆ: ಸುಮಿತ್ರಾ ಮಹಾಜನ್

ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

dharma teaches us what to do for nation says Sumitra Mahajan
Author
Bangalore, First Published Nov 26, 2019, 10:40 AM IST

ಬೆಳ್ತಂಗ​ಡಿ(ನ.26): ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶದಲ್ಲಿ ಹಲವಾರು ಮತ, ಸಂಪ್ರದಾಯಗಳು ಇದ್ದರೂ ಅವೆಲ್ಲದರ ಗುರಿ, ದಾರಿ ಅಂತಿಮವಾಗಿ ದೇವರ ಕಡೆಗೆ ಹೋಗು​ವುದೇ ಆಗಿದೆ ಎಂದಿದ್ದಾರೆ.

ಗದಗನಲ್ಲಿ ಸರ್ವ ಕಾಲಿಕ ದಾಖಲೆ ಕಂಡ ಈರುಳ್ಳಿ ಬೆಲೆ

ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮುಖ್ಯವಾಗಿ ಚಾರಿತ್ರ್ಯ ಇರಲೇಬೇಕು. ನಮ್ಮ ಬದುಕಿನಲ್ಲಿ ರಾಷ್ಟ್ರ ಆದ್ಯತೆಯಾಗಿರಬೇಕು. ರಾಷ್ಟ್ರಕ್ಕಾಗಿ ನಾನು ಎಂಬ ಭಾವ ನಮ್ಮಲ್ಲಿ ಸದಾ ಸ್ಫುರಿಸುತ್ತಿರಬೇಕು ಎಂದಿದ್ದಾರೆ. ಡಾ. ಹೆಗ್ಗಡೆ ಸಾಮಾಜಿಕ ಸೇವೆಯ ಮೂಲಕ ಅನೇಕ ಮಂದಿಯಲ್ಲಿ ಆತ್ಮವಿಶ್ವಾಸ ತಂದಿದ್ದಾರೆ. ಜೀವನದಲ್ಲಿ ನಾವು ಏನೆಲ್ಲಾ ಪ್ರಾಪ್ತ ಮಾಡಿಕೊಳ್ಳುತ್ತೇವೆಯೋ ಅದರಿಂದ ಇನ್ನೊಬ್ಬರ ನೋವನ್ನು ಶಮನ ಮಾಡುವಂತಿರಬೇಕು ಎಂದು ಹೇಳಿದ್ದಾರೆ.

ಲಕ್ಷದೀಪ ಸಂಭ್ರಮ: ದೀಪಾ​ಲಂಕಾರದಲ್ಲಿ ಜಗಮಗಿಸಿದ ಧರ್ಮ​ಸ್ಥ​ಳ

ಅಧ್ಯಕ್ಷತೆ ವಹಿಸಿದ್ದ ಇಸ್ಕಾನ್‌ನ ಇಂಡಿಯನ್‌ ಲೈಫ್‌ ಸ್ಟೈಲ್‌ ಕೋಚ್‌ ಗೌರ್‌ಗೋಪಾಲದಾಸ್‌ಅವರು, ಜಪಾನ್‌ ತಂತ್ರಜ್ಞಾನದಲ್ಲಿ, ಅರಬರು ತೈಲದಲ್ಲಿ, ಜರ್ಮನಿ ಸಮಯ ಪಾಲನೆಯಲ್ಲಿ, ಅಮೇರಿಕಾ ಲಿಬರ್ಟಿಯಲ್ಲಿ ಗುರುತಿಸಿಕೊಂಡಲ್ಲಿ, ಭಾರತ ಆಧ್ಯಾತ್ಮಿಕತೆಯಲ್ಲಿ ವಿಶೇಷತೆಯನ್ನು ಹೊಂದಿದೆ. ಇದರ ಅಧ್ಯಯನಕ್ಕೆ ವಿದೇಶಿಯರು ಬರುತ್ತಾರೆ. ಆಧ್ಯಾತ್ಮಿಕತೆ ಧರ್ಮ​ವನ್ನು ಮೀರಿದ್ದು, ಅದು ಪರಿವರ್ತನೆಯ ಹಾದಿಯನ್ನುತೋರಿಸುತ್ತದೆ. ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ ಎಂದರು.

ಸತ್ಯ, ನಿಷ್ಠೆಯೇ ಧರ್ಮ:

ಸ್ವಾಗತಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು, ಧರ್ಮದ ಹೆಸರಿನಲ್ಲಿ ತಪ್ಪು ಕಾರ್ಯಗಳು ನಡೆಯದಿರಲಿ ಎಂಬುದೇ ಈ ಸರ್ವಧರ್ಮದ ಘನ ಉದ್ದೇಶ. ಪ್ರತಿಯೊಂದು ಕ್ರಿಯೆ, ವ್ಯವಹಾರ, ಆಚರಣೆಯೂ ಸತ್ಯ, ನಿಷ್ಠೆಗಳಿಂದ ಇದ್ದರೆ ಅದು ಧರ್ಮ. ಈ ದಾರಿತಪ್ಪಿದರೆ ಅದುವೇ ಅಧರ್ಮ ಎಂದಿದ್ದಾರೆ.

ಎಲ್ಲಾ ಧರ್ಮದವರೂ ಸಹ ಶ್ರದ್ಧೆ, ವಿಶ್ವಾಸ ಹಾಗೂ ಮಾನವೀಯ ಸಂಬಂಧಗಳ ಮೂಲಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡುತ್ತಿರುವುದು ಶ್ಲಾಘನೀಯ. ಜಗತ್ತನ್ನು ಮರೆತು, ಆತ್ಮೋದ್ಧಾರ ಮಾಡಲಾರೆವು. ನಮ್ಮನ್ನು ಮರೆತು ಜಗದ ಉದ್ಧಾರ ಮಾಡಲಾರೆವು. ನಾವೇ ಸ್ವತಃ ಏಳಬೇಕು ಇತರರನ್ನುಜಾಗೃತರನ್ನಾಗಿ ಮಾಡಬೇಕು. ಅದುವೇ ಧರ್ಮದ ತಿರುಳು ಎಂದಿದ್ದಾರೆ. ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರಕುಮಾರ್‌, ಡಿ. ಹರ್ಷೇಂದ್ರಕುಮಾರ್‌, ಪ್ರೊ.ಎ​ಸ್‌.​ಪ್ರ​ಭಾ​ಕರ್‌ ಇದ್ದ​ರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮ ದಿನದ ಸಂಭ್ರಮ

‘ಜೀವನ ಮತ್ತು ಧರ್ಮ’ ಕುರಿತು ಮೈಸೂರಿನ ಫೋಕಸ್‌ ಅಕಾಡೆಮಿಯ ಮುಖ್ಯಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್‌, ‘ರಾಜಕೀಯ ಮತ್ತು ಭಾರತೀಯ ಸಿದ್ಧಾಂತ’ದ ಕುರಿತು ದಿ ಟೈಮ್ಸ್‌ಆಫ್‌ಇಂಡಿಯದ ಸಹಾಯಕ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿಹಾಗೂ ‘ಗಾಂಧಿ ಎಂಬ ಪ್ರವಾದಿ’ ಕುರಿತುಖ್ಯಾತ ಸಾಹಿತಿ ಬೊಳುವಾರು ಮಹಮದ್‌ ಕುಂಞಿ ಉಪನ್ಯಾಸ ನೀಡಿದರು.

ಸಮ್ಮೇಳನದ ಉದ್ಘಾಟಕರು, ಅಧ್ಯಕ್ಷರನ್ನುಡಾ. ಹೆಗ್ಗಡೆ ಹಾಗೂ ಉಪನ್ಯಾಸ ನೀಡಿದ ಅತಿಥಿಗಳನ್ನು ಡಿ.ಸುರೇಂದ್ರಕುಮಾರ್‌ ಕ್ಷೇತ್ರದ ಪರವಾಗಿ ಗೌರವಿಸಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಿಯಶೋವರ್ಮ ಹಾಗೂ ಉಪನ್ಯಾಸಕ ಸುನಿಲ್‌ ಪಂಡಿತ್‌ ಸನ್ಮಾನ ಪತ್ರ ವಾಚಿಸಿದರು. ಉಜಿರೆ ಕಾಲೇಜಿನ ಉಪನ್ಯಾಸಕ ಡಾ.ಶ್ರೀಧರ ಭಟ್‌ ನಿರ್ವ​ಹಿ​ಸಿ​ದ​ರು. ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಪಿ. ವಂದಿಸಿದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ನಿಮಗೆ ತಿಳಿಯದ ಸತ್ಯಗಳಿವು!

ಧರ್ಮಸ್ಥಳಕ್ಕೆ ಬಂದರೆ ಅಂತರ್‌ಮನದಲ್ಲಿ ದಿವ್ಯಾನುಭೂತಿ ಸಿಗುತ್ತದೆ. ಆಂತರ್ಯದಲ್ಲಿ ಜ್ಯೋತಿ ಯಾವಾಗ ಪ್ರಜ್ವಲಿತವಾಗುತ್ತದೋ ಅವಾಗಲೇ ಧರ್ಮ ಭಾವರೂಪ ತಾಳುತ್ತದೆ ಎಂದು ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

Follow Us:
Download App:
  • android
  • ios