Asianet Suvarna News Asianet Suvarna News

ಗದಗದಲ್ಲಿ ಸರ್ವ ಕಾಲಿಕ ದಾಖಲೆ ಕಂಡ ಈರುಳ್ಳಿ ಬೆಲೆ

ಗದಗನಲ್ಲಿ ಈರುಳ್ಳಿ ಬೆಲೆ ಸರ್ವಕಾಲಿಕ ದಾಖಲೆ ಕಂಡಿದೆ. ಸೋಮವಾರ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ರುಪಾಯಿಯಂತೆ ಈರುಳ್ಳಿ ಮಾರಾಟವಾಗಿದೆ. ಜನರಿಗೆ ಈರುಳ್ಳಿ ಬೆಲೆ ಹೆಚ್ಚಳ ಬಿಸಿ ತಟ್ಟಿದ್ರೆ ರೈತರ ಮುಖದಲ್ಲಿ ನಗುತುಂಬಿದೆ.

highest onion price increase in history of gadag
Author
Bangalore, First Published Nov 26, 2019, 10:19 AM IST

ಗದಗ(ನ.26): ಗದಗನಲ್ಲಿ ಈರುಳ್ಳಿ ಬೆಲೆ ಸರ್ವಕಾಲಿಕ ದಾಖಲೆ ಕಂಡಿದೆ. ಸೋಮವಾರ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ರುಪಾಯಿಯಂತೆ ಈರುಳ್ಳಿ ಮಾರಾಟವಾಗಿದೆ. ಜನರಿಗೆ ಈರುಳ್ಳಿ ಬೆಲೆ ಹೆಚ್ಚಳ ಬಿಸಿ ತಟ್ಟಿದ್ರೆ ರೈತರ ಮುಖದಲ್ಲಿ ನಗುತುಂಬಿದೆ.

ಗದಗ APMCಯಲ್ಲಿ ಮಾರಾಟವಾದ ಈರುಳ್ಳಿ ಕೇವಲ 10 ಕ್ವಿಂಟಲ್ ಗೆ ಮಾತ್ರ 10 ಸಾವಿರ ಬೆಲೆ ನಿಗದಿಯಾಗಿತ್ತು. ಉಳಿದಂತೆ 5 ರಿಂದ 6 ಸಾವಿರ ಬೆಲೆಗೆ ಈರುಳ್ಳಿ ಖರೀದಿಯಾಗಿದೆ.

1 ಕೇಜಿ ಈರುಳ್ಳಿ 220 ರು.: ಪ್ರಧಾನಿ ಮನೆಯಲ್ಲಿ ಈರುಳ್ಳಿ ಬಳಕೆ ಕಟ್‌!

ಖರೀದಿದಾರರು ರೈತರ ಮೂಗಿಗೆ ತುಪ್ಪ ಒರೆಸೋ ಕೆಲಸ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದ ಈರುಳ್ಳಿ ಆವಕವಾಗದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಈರುಳ್ಳಿ ಬೆಲೆ ಏರಿಕೆಯಾಗಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ. ಈಗಾಗಲೇ ವಿಪರೀತ ಮಳೆ, ನೆರೆಯಿಂದ ಕಂಗಾಲಾಗಿದ್ದ ರೈತರ ಕಷ್ಟಕ್ಕೆ ಈರುಳ್ಳಿ ವರದಾನವಾಗಿ ಪರಿಣಮಿಸಿದೆ.

ಉಪಚುನಾವಣೆ: ಹುಣಸೂರಲ್ಲಿ 40 FIR ದಾಖಲು

Follow Us:
Download App:
  • android
  • ios