Asianet Suvarna News Asianet Suvarna News

ನಗರಸಭೆ ಅಧ್ಯಕ್ಷರ ಗಮನಕ್ಕೆ ತಾರದೇ ಐಡಿಎಸ್‌ಎಂಟಿ ಮಳಿಗೆ ಕಾಯ್ದಿರಿಸಿದ ಡಿಸಿ: ಆಕ್ರೋಶ

  • ಐಡಿಎಸ್‌ಎಂಟಿ ಮಳಿಗೆ ಕಾಯ್ದಿರಿಸಿದ ಡಿಸಿ: ಆಕ್ರೋಶ
  • ನಗರಸಭೆ ಅಧ್ಯಕ್ಷರ ಗಮನಕ್ಕೆ ತಾರದೇ ಜಿಲ್ಲಾಧಿಕಾರಿ ಕಾಯ್ದಿರಿಸಿರುವುದು ಅಕ್ಷಮ್ಯ: ಆರೋಪ
  • ಮಳಿಗೆ ಕಾಯ್ದಿರಿಸುವ ಅಧಿಕಾರ
DC booked IDSMT shop without coming to the attention of Municipal Chairman: outrage at sirsi
Author
Hubli, First Published Aug 23, 2022, 11:09 AM IST

ಶಿರಸಿ (ಆ.23) : ನಗರಸಭೆಯ ಗಮನಕ್ಕೆ ತರದೇ ಐಡಿಎಸ್‌ಎಂಟಿ (ಸಣ್ಣ, ಮಧ್ಯಮ ಪಟ್ಟಣ ಸಮಗ್ರ ಅಭಿವೃದ್ಧಿ) ಯೋಜನೆಯಡಿ ನಿರ್ಮಾಣವಾದ 27 ಮಳಿಗೆಗಳಲ್ಲಿ ಆರು ಮಳಿಗೆಗಳನ್ನು ಜಿಲ್ಲಾಧಿಕಾರಿ ಕಾಯ್ದಿರಿಸಿದ್ದಾರೆ ಎಂದು ಆರೋಪಿಸಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು. ನಗರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಈ ವಿಷಯ ಚರ್ಚೆಗೆ ಬಂತು. ಪೌರಾಯುಕ್ತ ಕೇಶವ ಚೌಗುಲೆ ಜಿಲ್ಲಾಧಿಕಾರಿ ಆದೇಶದಂತೆ 27 ಮಳಿಗೆಗಳಲ್ಲಿ ಎಸ್ಸಿಗೆ ನಾಲ್ಕು, ಎಸ್ಟಿ, ಅಂಗವಿಕಲರಿಗಾಗಿ ತಲಾ ಒಂದೊಂದು ಮಳಿಗೆ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಬಾಲಕ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಅಜ್ಜನಿಂದಲೇ ಕೃತ್ಯ

ಇದರಿಂದ ಕೆರಳಿದ ವಿರೋಧ ಪಕ್ಷದ ಸದಸ್ಯ ಖಾದರ್‌ ಅನವಟ್ಟಿ, ಮಳಿಗೆಗಳನ್ನು ಕಾಯ್ದಿರಿಸಿರುವುದಲ್ಲಿ ನಮಗೆ ಬೇಸರವಿಲ್ಲ. ಆದರೆ ಸದಸ್ಯರ ಗಮನಕ್ಕಾಗಲಿ ಇಲ್ಲವೇ ಅಧ್ಯಕ್ಷರ ಗಮನಕ್ಕೆ ತರದೇ ಕಾಯ್ದಿರಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು. ಇವರ ಧ್ವನಿಗೆ ವಿರೋಧ ಪಕ್ಷದ ಸದಸ್ಯರು ಕೂಡ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಶ್ರೀಕಾಂತ ತಾರಿಬಾಗಿಲು, ಮಳಿಗೆಗಳನ್ನು ಕಾಯ್ದಿರಿಸುವುದಾದರೆ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದೇ ಮಾಡಬೇಕು. ಮಳಿಗೆ ಕಾಯ್ದಿರಿಸುವ ಅಧಿಕಾರ ಪೌರಾಯುಕ್ತರಿಗೂ ಇಲ್ಲ, ಜಿಲ್ಲಾಧಿಕಾರಿಗೂ ಇಲ್ಲ. ಒಂದು ವೇಳೆ ಜಿಲ್ಲಾಧಿಕಾರಿ ರಿಸವ್‌ರ್‍ ಮಾಡಲು ಸೂಚನೆ ನೀಡಿದ್ದರೆ ಸದಸ್ಯರ ಗಮನಕ್ಕೆ ಇಲ್ಲವೇ ಕೊನೆ ಪಕ್ಷ ಅಧ್ಯಕ್ಷರ ಗಮನಕ್ಕೆ ತಂದೇ ಮಾಡಬೇಕಿತ್ತೆಂದು ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷರ ಗಮನಕ್ಕೆ ತರದೇ ಆರು ಮಳಿಗೆಗಳನ್ನು ರಿಸವ್‌ರ್‍ ಮಾಡಿರುವ ಕ್ರಮದ ಬಗ್ಗೆ ಸದಸ್ಯರಾದ ನಾಗರಾಜ ನಾಯ್ಕ, ರಮಾನಂದ ಭಟ್ಟಪೌರಾಯುಕ್ತರನ್ನು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಅಧ್ಯಕ್ಷ ಗಣಪತಿ ನಾಯ್ಕ ಮಳಿಗೆ ರಿಸವ್‌ರ್‍ ಮಾಡಿರುವ ವಿಷಯ ನನಗೂ ಗೊತ್ತಿಲ್ಲ ಎಂದರು. ಬಳಿಕ ಪೌರಾಯುಕ್ತರು ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರಿಂದ ಮಳಿಗೆ ರಿಸವ್‌ರ್‍ ವಿಷಯ ಅಲ್ಲಿಗೆ ಮುಕ್ತಾಯಗೊಳಿಸಿದರು.

ಸಾರ್ವಜನಿಕರು ಆನ್‌ಲೈನ್‌ನಲ್ಲಿ ದೂರು ನೀಡಿದರೆ ಸಾಕು ಕೂಡಲೇ ಸ್ಪಂದಿಸುತ್ತಾರೆ. ಆದರೆ ಸದಸ್ಯರು ವಾರ್ಡಿನ ದೂರನ್ನು ದೂರವಾಣಿ ಮೂಲಕ ತಿಳಿಸಿದರೂ ಕವಡೆ ಕಾಸಿನ ಕಿಮ್ನತ್ತಿಲ್ಲವೆಂದು ವನಿತಾ ಶೆಟ್ಟಿ, ಖಾದರ ಅನವಟ್ಟಿಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ತಾರೆಬಾಗಿಲ ಮಾತನಾಡಿ, ಸಾರ್ವಜನಿಕರ ದೂರು ನೇರವಾಗಿ ಜಿಲ್ಲಾಧಿಕಾರಿಗೆ ಹೋಗುತ್ತದೆ. ಎಲ್ಲಿ ಬುಡಕ್ಕೆ ಬರುತ್ತೆ ಅಂತ ಕೂಡಲೇ ಬಂದು ಕೆಲಸ ಮಾಡುತ್ತಾರೆ. ಆದರೆ ನಮ್ಮ ದೂರು ಇಲ್ಲೇ ಇರುತ್ತದೆ. ಹೀಗಾಗಿ ನಮ್ಮ ಕೆಲಸವಾಗುವುದಿಲ್ಲವೆಂದರು.

ಗಣೇಶ ಹಬ್ಬ ಬಂದರೂ ನಗರದಲ್ಲಿ ಸ್ವಚ್ಛತೆ ಕೆಲಸ ಆಗದಿರುವ ಬಗ್ಗೆ ಪ್ರದೀಪ ಶೆಟ್ಟಿಹಾಗೂ ಫ್ರಾನ್ಸಿಸ್‌ ಫರ್ನಾಂಡಿಸ್‌ ಆಕ್ರೋಶಭರಿತರಾಗಿ ಮಾತನಾಡಿದರು. ವಾರ್ಡ್‌ ಸ್ವಚ್ಛತೆಯ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆ ಫೋನ್‌ ಮಾಡಿದರೂ ಸೌಜನ್ಯಕ್ಕಾದರೂ ಫೋನ್‌ ಎತ್ತುವುದಿಲ್ಲ. ಚೌತಿ ಹಬ್ಬ ಹತ್ತಿರವಿದ್ದರೂ ವಾರ್ಡ್‌ನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯುವ ಕೆಲಸವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಕುರಿತು ಪೌರಾಯುಕ್ತ ಕೇಶವ ಚೌಗುಲೆ ಮಾಹಿತಿ ನೀಡಿ, ನಗರ ಸ್ವಚ್ಛತೆಗಾಗಿ ಕಾರ್ಮಿಕರನ್ನು ಹಾಗೂ 10 ಬುಶ್‌ ಕಟಿಂಗ್‌ ಯಂತ್ರ ಖರೀದಿಸಿರುವುದರಿಂದ ಚೌತಿ ಒಳಗೆ ನಗರ ಸ್ವಚ್ಛತೆ ಕೆಲಸ ಮುಗಿಸುವ ಬಗ್ಗೆ ಭರವಸೆ ನೀಡಿದರು.

ಭಟ್ಕಳ: ಹೊಸ್ಮಕ್ಕಿ ರಸ್ತೆ ನಡುವೆ 60 ಅಡಿ ಬಾವಿ ನಿರ್ಮಾಣ, ಹೆಚ್ಚಿದ ಕೌತುಕ

ಇನ್ನುಳಿದಂತೆ ಅಮೃತ ನಿರ್ಮಲ ನಗರ ಯೋಜನೆಯಡಿ .20 ಲಕ್ಷ ವೆಚ್ಚದಲ್ಲಿ ವಿಶಾಲ ನಗರದ ಅಮರ ಜವಾನ್‌ ಉದ್ಯಾನವನ ತೆರೆದ ಪ್ರದೇಶದಲ್ಲಿ ಹಸಿರೀಕರಣಕ್ಕೆ, .15 ಲಕ್ಷ ವೆಚ್ಚದಲ್ಲಿ ಶಿರಸಿ ನಗರಸಭೆ ವ್ಯಾಪ್ತಿಯಲ್ಕಿ ಸಂಗ್ರಹವಾಗುವ ಚಿಕನ್‌, ಮಟನ್‌ ಹಾಗೂ ಮೀನಿನ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಎಫ್‌ಆರ್‌ಪಿ ಬಿ®್ಸ… ಖರೀದಿಸಲು, .17.5 ಲಕ್ಷ ವೆಚ್ಚದಲ್ಲಿ ಹಳೆ ಬಸ್‌ನ್ನು ಆಧುನಿಕ ಸೌಲಭ್ಯ ಹೊಂದಿದ ಮೊಬೈಲ್‌ ಶೌಚಾಲಯವಾಗಿ ಮಾರ್ಪಡಿಸಲು .5 ಲಕ್ಷ ಬಳಕೆ ಮಾಡಲಾಗುತ್ತಿದೆ ಎಂದರು.

Follow Us:
Download App:
  • android
  • ios