Asianet Suvarna News Asianet Suvarna News

ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಬಾಲಕ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಅಜ್ಜನಿಂದಲೇ ಕೃತ್ಯ

ಇಡೀ ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಬಾಲಕ ಕಿಡ್ನಾಪ್ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಬಾಲಕ ಸೇಫ್ ಆಗಿ ಮನೆ ಸೇರಿದ್ದಾನೆ.

Big Twist To child kidnapping In Bhatkal grandfather Kidnaped his grandson for Money rbj
Author
Bengaluru, First Published Aug 22, 2022, 4:03 PM IST

ಕಾರವಾರ, (ಆಗಸ್ಟ್.22): ಭಟ್ಕಳದಲ್ಲಿ ಬಾಲಕ ಕಿಡ್ನ್ಯಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶನಿವಾರ ಸಂಜೆ ನಡೆದಿದ್ದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.

ಹಣದ ವಿಚಾರವಾಗಿ ಕೌಟುಂಬಿಕ ಕಲಹದಿಂದಾಗಿ ಮೊಮ್ಮಗನನ್ನೇ ಅಜ್ಜ ಅಪಹರಿಸಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಾಲಕನನ್ನು ಮಾರುತಿ ಸುಜುಕಿ ಇಕೋ ವಾಹನದಲ್ಲಿ ಆಜಾದ್ ನಗರದಿಂದ ಅಪಹರಿಸಿ, ಬಳಿಕ ಮತ್ತೊಂದು ವಾಹನ ಬಳಸಿ ಗೋವಾಕ್ಕೆ ಬಾಲಕನನ್ನ ಕರೆದೊಯ್ಯಲಾಗಿತ್ತು. ಸೋಮವಾರ ಬೆಳಗ್ಗೆ ಅಲ್ಲಿನ ಕಲಂಗುಟ್ ಬೀಚ್ ನ ರೂಮೊಂದರಲ್ಲಿ ಅನೀಶ್ (29) ಎಂಬಾತನೊಂದಿಗೆ ಬಾಲಕ ಪತ್ತೆಯಾಗಿದ್ದಾನೆ.

ಭಟ್ಕಳ: ಬ್ರೆಡ್ ತರಲು ಅಂಗಡಿಗೆ ಹೋದ ಬಾಲಕ ಕಿಡ್ನ್ಯಾಪ್, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಬಾಲಕನ ತಾಯಿಯ ಸೋದರ ಮಾವ (ಬಾಲಕನ ಅಜ್ಜ), ಸೌದಿಅರೇಬಿಯಾದಲ್ಲಿರುವ ಇನಾಯತ್ ಉಲ್ಲಾ ಎಂಬಾತನ ಸೂಚನೆಯ ಮೇರೆಗೆ ಈ ಅಪಹರಣ ನಡೆದಿದೆ. ಐವರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಓರ್ವನನ್ನು ಬಂಧಿಸಲಾಗಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಬಾಲಕನ ತಂದೆ ಮತ್ತು ಅಜ್ಜನಿಗೆ ಹಣದ ವ್ಯವಹಾರವಿತ್ತು. ಅದಕ್ಕಾಗಿ ಬಾಲಕನನ್ನ ಅಪಹರಣ ಮಾಡಿಸಲಾಗಿತ್ತು. ಬಾಲಕನಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಸುರಕ್ಷಿತವಾಗಿ ಕರೆತರಲಾಗಿದೆ ಎಂದ ಅವರು, ಈ ಅಪಹರಣದಿಂದ  ಉತ್ತರ ಕನ್ನಡ ಜಿಲ್ಲೆಯ ಜನತೆ ಭಯಪಡುವಂಥದ್ದೇನೂ ಇಲ್ಲ. ಇದು ಕೌಟುಂಬಿಕ ಕಲಹದಿಂದ ನಡೆದ ಅಪಹರಣವಷ್ಟೇ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ
ಆ.20ರಂದು ಸಂಜೆ ಅಂಗಡಿಗೆ ತೆರಳಿದ್ದ ಭಟ್ಕಳ ಆಜಾದ್ ನಗರದ ಎಂಟು ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು. ಬಾಲಕನ ಹುಡುಕಾಟ ಹಾಗೂ ಆತನನ್ನ ಸುರಕ್ಷಿತವಾಗಿ ಕರೆತರಲು ಐದು ತಂಡಗಳನ್ನ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ನೆರವಿನಿಂದ ಹಾಗೂ ಕುಟುಂಬದವರನ್ನ ವಿಚಾರಣೆ ನಡೆಸಿದಾಗ ಹಣದ ವ್ಯವಹಾರವೇ ಇದಕ್ಕೆ ಕಾರಣ ಎಂಬುದು ಪೊಲೀಸರಿಗೆ ತಿಳಿದು ಕಾರ್ಯಾಚರಣೆ ನಡೆಸಿದ್ದರು.

Follow Us:
Download App:
  • android
  • ios