Asianet Suvarna News Asianet Suvarna News

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಸೂಚನೆ

 •   ಕೊರೋನಾ ವೈರಸ್‌ ಹೆಸರಿನಲ್ಲಿ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷೆ
 • ಅಕ್ರಮವಾಗಿ ಓಸಿ, ಮದ್ಯ ಮಾರಾಟದಂತಹ ಚಟುವಟಿಕೆಯಲ್ಲಿ ಹಣ ಮಾಡುವುದೇ ಗುರಿಯಾಗಿಸಿಕೊಂಡಿದ್ದಾರೆ
Congress will definitely win in next Election says Beluru Gopalakrishna snr
Author
Bengaluru, First Published Nov 13, 2021, 8:12 AM IST
 • Facebook
 • Twitter
 • Whatsapp

 ರಿಪ್ಪನ್‌ಪೇಟೆ (ನ.13):  ಕೊರೋನಾ (Corona) ವೈರಸ್‌ ಹೆಸರಿನಲ್ಲಿ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ (Hosanagara assembly Constituency) ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷೆ ಧೋರಣೆ ತಾಳಿದ್ದಾರೆ. ಅಲ್ಲದೇ, ಅಕ್ರಮವಾಗಿ ಓಸಿ (OC), ಮದ್ಯ ಮಾರಾಟದಂತಹ (Liquor) ಚಟುವಟಿಕೆಯಲ್ಲಿ ಹಣ ಮಾಡುವುದೇ ಗುರಿಯಾಗಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು (Gopalakrishna Beluru) ಆರೊಪಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ನಡೆದಂತಹ ಹಾನಗಲ್‌ (Hanagal) ಮತ್ತು ಸಿಂಧಗಿ ಉಪಚುನಾವಣೆಯಲ್ಲಿ (By Election) ಹಾನಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ (congress Party) ಜಯಭೇರಿಗಳಿಸಿ ಆ ಮೂಲಕ ಪಕ್ಷದ ಬಲವರ್ಧನೆಗೆ ಕಾರಣವಾಗಿದೆ. ಅದೇ ರೀತಿ ಸಿಂಧಗಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ (JDS) ಜಯಭೇರಿ ಬಾರಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಬರುವ ಮೂಲಕ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ (Election) ಗೆಲುವು ಸಾಧಿಸುವ ಸೂಚನೆ ಇದಾಗಿದೆ ಎಂದರು.

ಈ ಹಿಂದೆ ಎಂಎಸ್‌ಐಎಲ್‌ (MSIL) ಅಂಗಡಿ ತೆರೆಯುವ ವಿಚಾರದಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ಮೂಲಕ ವಿರೋಧಿಸಿದ್ದ ಶಾಸಕ ಹರತಾಳು ಹಾಲಪ್ಪ (Harathalu Halappa) ಅವರು ಇದೀಗ ಖಾಸಗಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಅಂಗಡಿ ಸ್ಥಳಾಂತರಕ್ಕೆ ಜನತೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿರುವಾಗ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಕುಡುಕರ ಸಾಮ್ರಾಜ್ಯ:  ಸಾಗರ ಹೊಸನಗರ (Hosanagara) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಸಿ ಅಂಗಡಿ ಮತ್ತು ಇನ್ನಿತರ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಸಲಾಗುತ್ತಿದೆ. ಒಂದು ರೀತಿಯಲ್ಲಿ ಕುಡುಕರ ಸಾಮ್ರಾಜ್ಯದಂತಾಗಿದ್ದು, ಮುಂಬರುವ ಹಣವನ್ನು ಜೇಬಿಗೆ ಇಳಿಸುವ ಕಾಯಕದಲ್ಲಿ ಎಂ.ಎಸ್‌.ಐ.ಎಲ್‌ ಅಧ್ಯಕ್ಷರು ದಂಧೆಯನ್ನಾಗಿಸಿಕೊಂಡಿದ್ದಾರೆಂದು ವ್ಯಂಗ್ಯವಾಡಿದರು.

ದುಡಿಮೆಯಿಂದ ಬಂದ ಹಣವನ್ನು ಕೂಲಿ ಕಾರ್ಮಿಕರು ಅಕ್ರಮವಾಗಿ ನಡೆಯುವ ಜೂಜಿಗೆ ಕಟ್ಟಿಬೀದಿಗೆ ಬರುವಂತಾಗಿದೆ. ಆದರೆ, ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಳ್ಳವಲ್ಲಿ ವಿಫಲವಾಗಿದೆ. ಗೃಹ ಸಚಿವರು ಇದೇ ಜಿಲ್ಲೆಯವರಾಗಿದ್ದರೂ ಯಾವುದೇ ರೀತಿಯ ಹೆದರಿಕೆ ಜಿಲ್ಲೆಯಲ್ಲಿ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪರಿಷತ್ತಿನಲ್ಲಿ ರಾಜಕೀಯ ತರವಲ್ಲ:  ನ.21ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳ ಪರ ಬಿಜೆಪಿ ರಾಜಕೀಯ ಮಾಡುತ್ತಿರುವುದು ತರವಲ್ಲ. ಸಾಹಿತ್ಯ ಪರಿಷತ್ತು ತನ್ನದೇ ಆದ ನೆಲಗಟ್ಟಿನ ಮೇಲೆ ಬೆಳೆದು ಬಂದಿದೆ. ಕನ್ನಡ ಸಾಹಿತ್ಯ ಭಾಷೆ ಇನ್ನಿತರ ವಿಚಾರದಲ್ಲಿ ರಾಜಕೀಯ ಬೆರೆಸದೆ ಈವರೆಗೂ ಬಂದಿದೆ. ಆದರೆ ಈಗ ಈ ರೀತಿಯ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು.

ಗ್ರಾಪಂ ಸದಸ್ಯ ಡಿ.ಈ. ಮಧುಸೂಧನ್‌, ಅರಸಾಳು ಗ್ರಾಪಂ ಅಧ್ಯಕ್ಷ ಉಮಾಕರ, ಉಂಡುಗೋಡು ನಾಗಪ್ಪ, ಉಲ್ಲಾಸ್‌, ರಾವಣಕಟ್ಟೆನಾಗಪ್ಪ, ರಾಜಪ್ಪಗೌಡ ಶೆಟ್ಟಿಬೈಲು, ನವೀನ ಇನ್ನಿತರು ಹಾಜರು ಇದ್ದರು.

 •  ಕೊರೋನಾ ವೈರಸ್‌ ಹೆಸರಿನಲ್ಲಿ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷೆ
 • ಅಕ್ರಮವಾಗಿ ಓಸಿ, ಮದ್ಯ ಮಾರಾಟದಂತಹ ಚಟುವಟಿಕೆಯಲ್ಲಿ ಹಣ ಮಾಡುವುದೇ ಗುರಿಯಾಗಿಸಿಕೊಂಡಿದ್ದಾರೆ
 • ಮಾಜಿ ಶಾಸಕ ಗೋಪಾಲಕೃಷ್ಣ ಗಂಭೀರ ಬೇಳೂರು ಆರೊಪಿ
 • ಹಾನಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿಗಳಿಸಿ ಆ ಮೂಲಕ ಪಕ್ಷದ ಬಲವರ್ಧನೆಗೆ ಕಾರಣವಾಗಿದೆ
 • ಈ ಬಾರಿ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಬರುವ ಮೂಲಕ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡಿದೆ
Follow Us:
Download App:
 • android
 • ios