Asianet Suvarna News Asianet Suvarna News

ಇದರಿಂದಾಗಿ ಜೆಡಿ​ಎಸ್‌ ಧೃತಿ​ಗೆ​ಡು​ವು​ದಿಲ್ಲ : ಪಕ್ಷದ ಮೇಲೆ ಯಾವುದೇ ಪರಿಣಾಮ ಇಲ್ಲ

  • ಹಾನ​ಗಲ್‌ ಮತ್ತು ಸಿಂಧಗಿ ಕ್ಷೇತ್ರ ಉಪ​ಚು​ನಾ​ವಣೆ ಫಲಿ​ತಾಂಶ ಜೆಡಿ​ಎಸ್‌ ಪಕ್ಷದ ಮೇಲೆ ಯಾವುದೇ ಪರಿ​ಣಾಮ ಬೀರು​ವು​
  • ಅದ​ರಿಂದ ಧೃತಿ ಗೆಡು​ವುದೂ ಇಲ್ಲ ಎಂದು ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ ಪ್ರತಿ​ಕ್ರಿಯೆ
By Election Result not Effects On Jds party Says mla Manjunath snr
Author
Bengaluru, First Published Nov 3, 2021, 6:21 AM IST
  • Facebook
  • Twitter
  • Whatsapp

 ರಾಮ​ನ​ಗರ (ಅ.03):  ಹಾನ​ಗಲ್‌ (Hanagal) ಮತ್ತು ಸಿಂಧಗಿ (Sindagi) ಕ್ಷೇತ್ರ ಉಪ​ಚು​ನಾ​ವಣೆ (By Election) ಫಲಿ​ತಾಂಶ ಜೆಡಿ​ಎಸ್‌ ಪಕ್ಷದ ಮೇಲೆ ಯಾವುದೇ ಪರಿ​ಣಾಮ ಬೀರು​ವು​ದಿಲ್ಲ. ಅದ​ರಿಂದ ಧೃತಿ ಗೆಡು​ವುದೂ ಇಲ್ಲ ಎಂದು ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ (MLA A Manjunath) ಪ್ರತಿ​ಕ್ರಿಯೆ ನೀಡಿ​ದರು.

ಮಾಗಡಿ (magadi) ಕ್ಷೇತ್ರ ವ್ಯಾಪ್ತಿಯ ಕಣ್ವ ಗ್ರಾಮ​ದಲ್ಲಿ ಸಿಸಿ ರಸ್ತೆ , ಕೂಟ​ಗಲ್‌ ಗ್ರಾಮ​ದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಗೊಲ್ಲ​ರ​ದೊಡ್ಡಿ ಗ್ರಾಮ​ದಲ್ಲಿ ಸಿಸಿ ರಸ್ತೆ ಕಾಮ​ಗಾ​ರಿಗೆ ಭೂಮಿ ಪೂಜೆ ನೆರ​ವೇ​ರಿ​ಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದರು.

ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ರಿಸಲ್ಟ್: ಬೊಮ್ಮಾಯಿ ಹನಿಮೂನ್ ಅವಧಿ ಕೊನೆಗೊಂಡಿದೆ ಎಂದ ಸಿದ್ದು

ಉಪ ಚುನಾ​ವ​ಣೆ​ಗಳ ಫಲಿ​ತಾಂಶ (By election Result) ಜೆಡಿ​ಎಸ್‌ ಸಂಘ​ಟನೆ ಮೇಲೆ ಯಾವುದೇ ಪರಿ​ಣಾಮ ಬೀರು​ವು​ದಿಲ್ಲ. ಈ ಫಲಿ​ತಾಂಶ ಎಚ್ಚ​ರಿ​ಕೆ​ಯಾ​ಗಿದ್ದು, ಪರಾ​ಜಿ​ತ​ಗೊಂಡಿ​ರುವ ಕ್ಷೇತ್ರ​ಗ​ಳ​ಲ್ಲಿ​ರುವ ಜೆಡಿ​ಎಸ್‌ (JDS) ಕಾರ್ಯ​ಪ​ಡೆ​ಯನ್ನು ಚುರು​ಕು​ಗೊಳಿಸಿ ಪಕ್ಷ ಸಂಘ​ಟನೆ ಮಾಡು​ತ್ತೇವೆ ಎಂದರು.

ಹಾನ​ಗಲ್‌ (Hanagal) ಕ್ಷೇತ್ರ​ದಲ್ಲಿ ಜೆಡಿ​ಎಸ್‌ (JDS) ಸಂಘ​ಟನೆ ಇರ​ಲಿಲ್ಲ. ಇನ್ನು ಸಿಂಧಗಿ ಕ್ಷೇತ್ರ​ದಲ್ಲಿ ಶಾಸ​ಕ​ರಾ​ಗಿದ್ದವರ ಪುತ್ರ ಕಾಂಗ್ರೆಸ್‌ (Congress) ಸೇರ್ಪ​ಡೆ​ಗೊಂಡು ಅಭ್ಯ​ರ್ಥಿಯಾ​ಗಿ​ದ್ದರು. ಅವ​ರಿಗೂ ಉಪ​ಚು​ನಾ​ವ​ಣೆ​ಯಲ್ಲಿ ಸೋಲಾ​ಗಿದೆ. ಜೆಡಿ​ಎಸ್‌ ಹೊಸ ಮುಖಕ್ಕೆ ಅವ​ಕಾಶ ನೀಡಿ ಕಣ​ಕ್ಕಿ​ಳಿ​ಸಿತ್ತು.

News Hour; ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಚಾರಗಳು!

ಆದರೆ, ಸಿಂಧಗಿ ಕ್ಷೇತ್ರದ ಜನರು ​ಬಾಕಿಯಿರುವ ನೀರಾ​ವರಿ ಯೋಜ​ನೆ​ಗಳನ್ನು ಕಾರ್ಯ​ಗ​ತ​ಗೊ​ಳಿ​ಸು​ವು​ದಾಗಿ ಮುಖ್ಯ​ಮಂತ್ರಿ ಬೊಮ್ಮಾಯಿ (CM Basavaraja bommai) ಭರ​ವಸೆ ನೀಡಿ​ರು​ವು​ದ​ರಿಂದ ಬಿಜೆಪಿ ಅಭ್ಯ​ರ್ಥಿ​ಯನ್ನು ಬೆಂಬ​ಲಿ​ಸುವ ಮಾತು ಹೇಳಿ​ದ್ದರು. ಅದ​ರಂತೆ ಆ ಕ್ಷೇತ್ರ​ದಲ್ಲಿ ಬಿಜೆಪಿಗೆ ಗೆಲುವು ದೊರ​ಕಿದೆ ಎಂದು ಹೇಳಿ​ದರು.

ಸಾರ್ವ​ತ್ರಿಕ ಚುನಾ​ವಣೆ ಹಾಗೂ ಉಪ​ಚು​ನಾ​ವ​ಣೆ​ಗ​ಳಿಗೆ (Election) ಸಾಕಷ್ಟುವ್ಯತ್ಯಾ​ಸ​ವಿದೆ. ಅಧಿ​ಕಾ​ರ​ದ​ಲ್ಲಿ​ರುವ ಪಕ್ಷದ ಅಭ್ಯ​ರ್ಥಿ​ಗಳು ಉಪ​ಚು​ನಾ​ವ​ಣೆ​ಗ​ಳಲ್ಲಿ (By Election) ಗೆಲುವು ಸಾಧಿ​ಸು​ವುದು ಸಹಜ. ಈ ಫಲಿ​ತಾಂಶ​ದಿಂದ ಜೆಡಿ​ಎಸ್‌ ಧೃತಿ​ಗೆ​ಡು​ವು​ದಿಲ್ಲ. ಬದ​ಲಿಗೆ ಪಕ್ಷ​ವನ್ನು ಮತ್ತಷ್ಟುಸದೃ​ಢ​ಗೊ​ಳಿ​ಸುವ ನಿಟ್ಟಿ​ನಲ್ಲಿ ಕಾರ್ಯೋ​ನ್ಮುಖವಾಗ​ಲಿದೆ ಎಂದರು.

123 ಮಿಷನ್‌ಗೆ ಕಾರಾರ‍ಯಗಾರ: ಜನತಾ ಪರ್ವ ಹಾಗೂ ಜೆಡಿ​ಎಸ್‌ ಮಿಷನ್‌ 123 ಕಾರ್ಯಾ​ಗಾ​ರವನ್ನು 2023ರ ವಿಧಾ​ನ​ಸಭೆಯ ಸಾರ್ವ​ತ್ರಿಕ ಚುನಾ​ವ​ಣೆ​ಯನ್ನು ದೃಷ್ಟಿ​ಯ​ಲ್ಲಿ​ಟ್ಟು​ಕೊಂಡು ನಡೆ​ಸ​ಲಾ​ಗಿತ್ತು. ಆ ಚುನಾ​ವ​ಣೆ​ಯಲ್ಲಿ ಕ್ಷೇತ್ರದ ಜನರ ಬಳಿಗೆ ಹೇಗೆ ತೆರ​ಳ​ಬೇಕು. ಪಕ್ಷದ ಕಾರ್ಯ​ಕ್ರ​ಮ​ಗ​ಳನ್ನು ಹೇಗೆ ಮನ​ವ​ರಿಕೆ ಮಾಡಿ​ಕೊಟ್ಟು ಮತ​ದಾ​ರರ ಮನ ಗೆಲ್ಲುವ ಕುರಿತು ಅಭ್ಯ​ರ್ಥಿ​ಗ​ಳಿಗೆ ಮನ​ವ​ರಿಕೆ ಮಾಡಿ​ಕೊ​ಡ​ಲಾ​ಗಿದೆ ಎಂದು ಮಂಜು​ನಾಥ್‌ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

ಕಳೆದ ಚುನಾ​ವಣೆ ಸಂದ​ರ್ಭ​ದಲ್ಲಿ ಈ ಭಾಗದ ಮುಖಂಡರು ಅನೇಕ ಸಮ​ಸ್ಯೆ​ಗ​ಳನ್ನು ಗಮ​ನಕ್ಕೆ ತಂದಿ​ದ್ದರು. ಅ​ವು​ಗ​ಳಿಗೆ ಹಂತ ಹಂತ​ವಾಗಿ ಪರಿ​ಹಾರ ಕಲ್ಪಿ​ಸುವ ಕೆಲಸ ಮಾಡು​ತ್ತಿ​ದ್ದೇನೆ. ಕಣ್ವ​ದಿಂದ ಕೆರೆ ತುಂಬಿ​ಸುವ ಯೋಜ​ನೆಗೆ ಪೈಪ್‌ಲೈನ್‌ ಅಳ​ವ​ಡಿ​ಸುವ ಕಾರ್ಯ ಸೇರಿ​ದಂತೆ ಅನೇಕ ಅಭಿ​ವೃದ್ಧಿ ಕಾರ್ಯಗ​ಳು ನಡೆ​ಯು​ತ್ತಿವೆ ಎಂದು ಹೇಳಿ​ದ​ರು.

ತಾಪಂ ಮಾಜಿ ಅಧ್ಯಕ್ಷೆ ಸುಮಿ​ತ್ರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಹ​ದೇ​ವಯ್ಯ,​ಹು​ಲ್ಲೂ​ರಮ್ಮ, ಜೆಡಿ​ಎಸ್‌ ಮುಖಂಡರಾದ ಮಹೇಶ್‌ , ದೇವ​ರಾಜು, ಅಜಯ್‌ ದೇವೇ​ಗೌಡ, ಅರೇ​ಹ​ಳ್ಳಿ ಮೂರ್ತಿ, ರೈತ​ಸಂಘ ಮುಖಂಡ ಕುಮಾ​ರ​ಸ್ವಾ​ಮಿ ಮತ್ತಿ​ತ​ರರು ಹಾಜ​ರಿ​ದ್ದ​ರು.

ಜೆಡಿಎಸ್ ಸೋಲು

18ನೇ ಸುತ್ತಿನ ಮತ ಎಣಿಕೆ  ಬಳಿಕದ ಬಲಾಬಲದ ನಂತರ 7325-ಮತಗಳಿಂದ ಕಾಂಗ್ರೆಸ್(Congress) ಮುನ್ನಡೆ ಸಾಧಿಸಿದೆ. ಬಿಜೆಪಿ: 75999 ಮತಗಳನ್ನು ಗಳಿಸಿದರೆ, ಕಾಂಗ್ರೆಸ್: 83324 ಹಾಗೂ ಜೆಡಿಎಸ್ 866 ಮತ ಗಳಿಸಿದೆ. ಏನೇನೋ ಕಸರತ್ತು ಮಾಡಿದರೂ ಜೆಡಿಎಸ್ ಸಾವಿರ ಮತ ಪಡೆಯುವುದಕ್ಕೂ ಸಾಧ್ಯವಾಗಿಲ್ಲ.

ಬಹಳಷ್ಟು ಪ್ರಯತ್ನ, ಪ್ರಚಾರ ಮಾಡಿಯೂ ಮತ ಪಡೆಯೋಕೆ ಜೆಡಿಎಸ್(JDS) ವಿಫಲವಾಗಿದ್ದು ಹೇಗೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಗೌಡರು, ಮಕ್ಕಳು ಹಾಗೂ ಮೊಮ್ಮಕ್ಕಳು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಸಾವಿರ ಮತವೂ ಬರದಿರುವುದು ಅಚ್ಚರಿಗೆ ಕಾರಣವಾಗಿದೆ.

ತಲೆಕೆಳಗಾದ ದಳಪತಿಗಳ ಲೆಕ್ಕಾಚಾರ:

ಉಪಚುನಾವಣೆಯಲ್ಲಿ(Election) ಮುಸ್ಲಿಂ ಅಸ್ತ್ರ ಪ್ರಯೋಗಿಸಿದ್ದ ದಳಪತಿಗಳು ಮತಗಳನ್ನು ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಅದೇ ಸಮುದಾಯದ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದರು. ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳೆರಡಲ್ಲೂ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದ ದಳಪತಿಗಳು ಹಾಗಿದ್ದರೂ ಮತಗಳನ್ನು ಪಡೆಯೋಕೆ ವಿಫಲರಾಗಿದ್ದಾರೆ.

Follow Us:
Download App:
  • android
  • ios