King Maker| ಜೆಡಿಎಸ್‌ ಕೈಯಲ್ಲಿ ಕಲಬುರಗಿ ಪಾಲಿಕೆ ಅಧಿಕಾರ ಚುಕ್ಕಾಣಿ..!

*  ಮೇಯರ್‌, ಉಪ ಮೇಯರ್‌ ಚುನಾವಣೆಗೆ ನ.20ರಂದು ದಿನ ನಿಗದಿ
*  ಜೆಡಿಎಸ್‌ ಕಿಂಗ್‌ ಮೇಕರ್‌
*  ಕಲಬುರಗಿ ಪಾಲಿಕೆ ಗದ್ದುಗೆ ಕೈಗೋ, ಕಮಲಕ್ಕೋ?
 

JDS Will be King the Maker in Kalaburagi City Corporation grg

ಕಲಬುರಗಿ(ನ.08):  ಕಲಬುರಗಿ ಪಾಲಿಕೆ(Kalaburagi City Corporation) ಮೇಯರ್‌, ಉಪ ಮೇಯರ್‌ ಚುನಾವಣೆಗೆ ನ.20ರಂದು ದಿನ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಚುಟುವಟಿಕೆ ಗರಿಗೆದರಿದೆ.

ಅತಂತ್ರ ಪಾಲಿಕೆಯಲ್ಲಿ ಜೆಡಿಎಸ್‌(JDS) ಕಿಂಗ್‌ ಮೇಕರ್‌(King Maker). ರಾಷ್ಟ್ರೀಯ ಪಕ್ಷಗಳ ದರ್ಬಾರ್‌ಗೆ ಇಲ್ಲಿ ಪ್ರಾದೇಶಿಕ ಪಕ್ಷದ(Regional Party) ಸಾಥ್‌ ಬೇಕೇಬೇಕು. ಹೀಗಾಗಿ ಪ್ರಬಲರಾಗಿರುವ ಕೈ, ಕಮಲ ನಾಯಕರಿಗೆ ಜೆಡಿಎಸ್‌ ಒಲಿಸಿಕೊಳ್ಳುವುದು ಹೇಗೆಂಬ ಗುಂಗು ಹಿಡಿದಿದೆ. ಆದರೆ ತನ್ನ ಬೆಂಬಲ ಯಾರಿಗೆ ಎಂಬುದನ್ನು ಜೆಡಿಎಸ್‌ ಇನ್ನೂ ನಿಗೂಢವಾಗಿಟ್ಟಿದೆ.

ಕಳೆದ ಸೆ.3ರಂದು ಚುನಾವಣೆ(Election) ನಡೆದು ಸೆ.6ಕ್ಕೆ ಸದಸ್ಯರ ಆಯ್ಕೆ ಆಗಿತ್ತು. ಕಾಂಗ್ರೆಸ್‌(Congress) 27 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ(BJP) 23, ಜೆಡಿಎಸ್‌ 3 ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಗೆಲ್ಲುವ ಮೂಲಕ ಪಾಲಿಕೆ ಅತಂತ್ರವಾಗಿತ್ತು. ಕೈ, ಕಮಲ ಎರಡಕ್ಕೂ ಜೆಡಿಎಸ್‌ ಬೆಂಬಲ ಇಲ್ಲೀಗ ಅನಿವಾರ್ಯವಾಗಿದ್ದರಿಂದ ಇಲ್ಲಿ 3 ಸ್ಥಾನ ಗೆದ್ದಿರುವ ಜೆಡಿಎಸ್‌ ಕಿಂಗ್‌ ಮೇಕರ್‌ ಆಗಿದೆ.

Ballari| ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌!

ಪಾಲಿಕೆಯ 55 ಸದಸ್ಯರು, ಇಬ್ಬರು ಸಂಸದರು, ಮೂವರು ಶಾಸಕರು, ಇಬ್ಬರು ಎಂಎಲ್‌ಸಿಗಳನ್ನೊಳಗೊಂಡು ಸದಸ್ಯರ ಬಲಾಬಲ 62ಕ್ಕೇರಿದೆ. ಆಡಳಿತ ಚುಕ್ಕಾಣಿ ಹಿಡಿಯಲು 32 ಇಲ್ಲಿ ಮ್ಯಾಜಿಕ್‌ ನಂಬರ್‌. ಈ ಮ್ಯಾಜಿಕ್‌ ನಂಬರ್‌ ತಲುಪಬೇಕಾದಲ್ಲಿ ಕೈ, ಬಿಜೆಪಿ ಇವೆರಡಕ್ಕೂ ಜೆಡಿಎಸ್‌ ಬೆಂಬಲ ಅನಿವಾರ್ಯವಾಗಿದೆ. ಇಲ್ಲಿಂದ ಗೆದ್ದಿದ್ದ ಏಕೈಕ ಪಕ್ಷೇತರ ಸದಸ್ಯ ಬಿಜೆಪಿಗೆ ಬೆಂಬಲಿಸಿದ್ದರೂ ಸಹ ಮ್ಯಾಜಿಕ್‌ ನಂಬರ್‌(Magic Number) ತಲುಪಲು ಜೆಡಿಎಸ್‌ ಸಾಥ್‌ ಅನಿವಾರ್ಯ.

ಕೈ ಪಾಳಯದ ಸುತ್ತಮುತ್ತ:

ಚುನಾವಣೆಯಲ್ಲಿ ಕಾಂಗ್ರೆಸ್‌ನ 27 ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷದಿಂದ ರಾಜ್ಯಸಭೆ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಕಲಬುರಗಿ ಉತ್ತರ ಶಾಸಕಿ ಕನೀಜ್‌ ಫಾತೀಮಾ ಒಗೊಂಡು ಕೈ ಬಲಾಬಲ 29 ಆಗಲಿದೆ. ಮ್ಯಾಜಿಕ್‌ ನಂಬರ್‌ಗೆ ಇವರಿಗೆ ಇನ್ನೂ ಇಬ್ಬರು ಸದಸ್ಯರ ಕೊರತೆಯಾಗಲಿದೆ. ಇದನ್ನು ಹೇಗಾದರೂ ಮಾಡಿ ಸಾಧಿಸಬೇಕು ಎಂದು ಕೈ ಪಕ್ಷದಲ್ಲಿ ರಾಜಕೀಯ ಸಾಗಿದೆ. ವರಿಷ್ಠರು ಈಗಾಗಲೇ ದಳಪತಿಗಳ ಜೊತೆ ಮಾತನಾಡಿದ್ದು ಬೆಂಬಲ ಕೋರಿದ್ದಾರೆ.

ಕಮಲ ಪಾಳಯದ ಸುತ್ತಮುತ್ತ:

ಪಾಲಿಕೆಯಲ್ಲಿ ಬಿಜೆಪಿಯ 23 ಸದಸ್ಯರಿದ್ದಾರೆ. ಪಕ್ಷೇತರ ಓರ್ವ ಸದಸ್ಯ ಬಿಜೆಪಿ ಬೆಂಬಲಿಸಿದ್ದಾರೆ. ಇದಲ್ಲದೆ ಬಿಜೆಪಿಯ ಸಂಸದ ಡಾ. ಉಮೇಶ ಜಾಧವ್‌, ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಸವರಾಜ ಮತ್ತಿಮಡು, ಎಂಎಲ್‌ಸಿಗಳಾದ ಶಶಿಲ್‌ ನಮೋಶಿ, ಬಿಜಿ ಪಾಟೀಲ್‌ ಸೇರಿದಂತೆ ಬಿಜೆಪಿ ಸಂಖ್ಯಾಬಲ 29ಕ್ಕೆ ತಲುಪುತ್ತದೆ. ಮ್ಯಾಜಿಕ್‌ ನಂಬರ್‌ ತಲುಪಲು ಇವರಿಗೂ ಜೆಡಿಸ್‌ ಬೆಂಬಲ ಬೇಕೇಬೇಕು. ಬಿಜೆಪಿಯ ವರಿಷ್ಠರೂ ಕುಮಾಸ್ವಾಮಿ(HD Kumaraswamy), ದೇವೇಗೌಡರ(HD Devegowda) ಜೊತೆ ನಿರಂತರ ಸಂಪರ್ಕದಲ್ಲಿರೊದರಿಂದ ದಳಪತಿಗಳ ಬೆಂಬಲ ಯಾರತ್ತ ಎಂಬುದೇ ಇನ್ನೂ ನಿಗೂಢವಾಗಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ: ಆಪ್ತರಿಗೆ ಪಟ್ಟ ಕಟ್ಟಲು ಬಿಜೆಪಿ ನಾಯಕರ ಕಸರತ್ತು..!

ಮೇಯರ್‌ ಕೊಟ್ಟವರಿಗೆ ಬೆಂಬಲ: ನಾಸೀರ್‌

ಜೆಡಿಸ್‌ನ ಮೂವರು ಸದಸ್ಯರು ಬೆಂಗಳೂರಿಗೆ(Bengaluru) ತೆರಳಿ ಕುಮಾರಸ್ವಾಮಿ, ದೇವೇಗೌಡರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ. ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್‌ ಹುಸೇನ್‌ ಪಾಲಿಕೆಯ ಈ ಅವಧಿಯ ಮೊದಲ ನಾಲ್ಕು ಪಾಳಿಗೆ ಯಾವ ಪಕ್ಷದವರು ನಮ್ಮವರಿಗೆ ಮೇಯರ್‌(Mayor) ಪಟ್ಟನೀಡುತ್ತಾರೋ ಅವರಿಗೇ ಬೆಂಬಲ ಎಂದಿದ್ದಾರೆ. ಜೆಡಿಎಸ್‌ನವರ ಈ ನಿರ್ಣಯ ಉಭಯ ರಾಷ್ಟ್ರೀಯ ಪಕ್ಷಗಳವರ ಪಾಲಿಗೆ ಬಿಸಿ ತುಪ್ಪವಾಗಿದೆ.

ಅಧಿಕಾರ ಗದ್ದುಗೆ ಏರುವುದು ತಾವೇ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ ಒಳಗೊಳಗೆ ಮಾತುಕತೆಗಲು ಜೋರಾಗುತ್ತಿವೆ. ದಿನಾಂಕ ನಿಗದಿಯಾಗಿದ್ದರಿಂದ ಮೇಯರ್‌ ಆಕಾಂಕ್ಷಿಗಳೂ ಇದೀಗ ಭಾರಿ ಲಾಭಿಯಲ್ಲಿ ತೊಡಗಿದ್ದರಿಂದ ಅವರಿಗೇ ಜೆಡಿಎಸ್‌ ಬೆಂಬಲ ಪಡೆಯುವ ಜವಾಬ್ದಾರಿ, ಹೊಣೆಗಾರಿಕೆಯನ್ನೂ ಕಾಂಗ್ರೆಸ್‌, ಬಿಜೆಪಿ ವರಿಷ್ಠರು ಒಪ್ಪಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಎಲ್ಲಾ ಮತದಾರರ ಕೂಡಿ ಕಳೆದು ಲೆಕ್ಕ ಹಾಕಿದರೂ ಮ್ಯಾಜಿಕ್‌ ನಂಬರ್‌ಗೆ 3 ಸ್ಥಾನ ಕೊರತೆ ಕಾಡುತ್ತಿದೆ. ಹೀಗಾಗಿ ಜೆಡಿಎಸ್‌ನ ಬೆಂಬಲ ಇವರಿಬ್ಬರಿಗೂ ಬೇಕೇಬೇಕು. ಹೀಗಾಗಿ ಮತ್ತೆ ಮಾತುಕತೆ ರಾಜಕೀಯ, ಹೇಳಿಕೆ ಪ್ರತಿ ಹೇಳಿಕೆಗಳ ಸಮರ, ಮುಸುಕಿನ ರಾಜಕೀಯ ತಂತ್ರಗಾರಿಕೆಗಳು ಆದ್ಯತೆ ಪಡೆಯಲಿವೆ.
 

Latest Videos
Follow Us:
Download App:
  • android
  • ios