Asianet Suvarna News Asianet Suvarna News

MLC Election Karnataka : ಈಶ್ವರಪ್ಪ, ಹಾಲಪ್ಪ ಸಮ್ಮುಖ BJP ಸೇರ್ಪಡೆ : ಸಂಜೆ ಗೋಪಾಲಕೃಷ್ಣ ಸಮ್ಮುಖ ಮರಳಿ ಕೈಗೆ

  • ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ - ಪಕ್ಷಾಂತರೂ ಜೋರು
  • ಬೆಳಗ್ಗೆ ಬಿಜೆಪಿಗೆ ಸೇರ್ಪಡೆಗೊಂಡು ಸಂಜೆ ಆಗುವಷ್ಟರಲ್ಲೇ  ಕೈಗೆ ಮರಳಿದ ನಾಯಕಿ
Congress leader joins BJP in the morning returns in the evening in Shivamogga snr
Author
Bengaluru, First Published Dec 9, 2021, 3:11 PM IST
  • Facebook
  • Twitter
  • Whatsapp

ರಿಪ್ಪನ್‌ಪೇಟೆ (ಡಿ.09): ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವರಾದ ಕೆ.ಎಸ್‌.ಈಶ್ವರಪ್ಪ (Minister KS Eshwarappa) ಹಾಗೂ ಶಾಸಕ ಹರತಾಳು ಹಾಲಪ್ಪ (Harathalu Halappa) ಸಮ್ಮುಖ ಅರಸಾಳು ಗ್ರಾಮ ಪಂಚಾಯಿತಿ ಕಾಂಗ್ರೆಸ್‌  (Congress) ಬೆಂಬಲಿತ ಸದಸ್ಯೆ ಪೂರ್ಣಿಮಾ ಬೆಳಗ್ಗೆ ಬಿಜೆಪಿಗೆ (BJP) ಸೇರ್ಪಡೆಗೊಂಡು ಸಂಜೆ ಆಗುವಷ್ಟರಲ್ಲೇ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಮ್ಮುಖ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಒಂದೇ ಬಾರಿಗೆ ಎರಡು ಪಕ್ಷವನ್ನು ಬದಲಿಸಿದ್ದಾರೆ.

ವಿಧಾನ ಪರಿಷತ್ತು ಚುನಾವಣೆ (MLC Election)  ಅಂಗವಾಗಿ ಮಂಗಳವಾರ ಬಿಜೆಪಿ (BJP) ಅಭ್ಯರ್ಥಿ ಡಿ.ಎಸ್‌.ಅರುಣ್‌ ಪರ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಬೆಳಗ್ಗೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾ.ಪಂ. ಸದಸ್ಯೆ ಪೂರ್ಣಿಮಾ ಅವರನ್ನು ‘ಆಪರೇಷನ್‌ ಕಮಲ’ದ ಮೂಲಕ ಬಿಜೆಪಿ ತೆಕ್ಕೆಗೆ ಸೇರಿಕೊಂಡಿದ್ದರು. ಆದರೆ, ಸಂಜೆ ಆಗುವಷ್ಟರಲ್ಲಿ ಪೂರ್ಣಿಮಾ ಅವರು ಕಮಲಕ್ಕೆ ಕೈ ಕೊಟ್ಟು ಕಾಂಗ್ರೆಸ್‌ ಕೈಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆಸೀಫ್‌ ಬಾಷಾ ಸಾಬ್‌, ಗ್ರಾ.ಪಂ. ಸದಸ್ಯ ಎನ್‌.ಚಂದ್ರೇಶ, ಶ್ರೀಮಂತ್‌, ಧನಲಕ್ಷ್ಮೇ, ಉಲ್ಲಾಸ್‌, ಸೋಮಶೇಖರ್‌ ಲಾವಿಗೆರೆ, ಅಶೋಕ ಬೇಳೂರು, ಪ್ರವೀಣ ಹೆದ್ದಾರಿಪುರ ಇನ್ನಿತರು ಹಾಜರಿದ್ದರು.

ನನಗೆ ರಾಜಕೀಯ (Politics) ತಿಳಿವಳಿಕೆ ಅಷ್ಟಾಗಿ ತಿಳಿದಿಲ್ಲ. ನನ್ನನ್ನು ಹೀಗೊಂದು ಗ್ರಾಪಂ ಸದಸ್ಯರ ಕಾರ್ಯಕ್ರಮ ಇದೆ ಎಂದು ಕರೆದುಕೊಂಡು ಬಂದು ಸಚಿವರ ಬಳಿ ಶಾಲು ಹಾಕಿಸಿದರು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ನಂತರವೇ ತಿಳಿದಿದ್ದು. ನಾನು ಅರಸಾಳು ಗ್ರಾಪಂ. ಅಧ್ಯಕ್ಷರಾದ ಉಮಾಕರ್‌ ಜೊತೆ ಗೆದ್ದು ಬಂದಿದ್ದೇನೆ. ಯಾವುದೆ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ

- ಪೂರ್ಣಿಮಾ, ಗ್ರಾಪಂ ಸದಸ್ಯೆ

ಬೆಳಗ್ಗೆ  ಕಾಂಗ್ರೆಸ್ಗೆ ರಾತ್ರಿ ಬಿಜೆಪಿಗೆ  : ಬಂಗಾರಪೇಟೆಯಲ್ಲಿಯೂ  ಇದೇ ರೀತಿಯ ಘಟನೆ ನಡೆದಿತ್ತು.  ಡಿ. 10ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಸದಸ್ಯರನ್ನು (Grama Panchayat Members) ಸೆಳೆಯಲು ಮುಂದಾಗಿದ್ದು, ಅದರಂತೆ ಕೇತಗಾನಹಳ್ಳಿ ಪಂಚಾಯಿತಿ ಬಿಜೆಪಿ ಸದಸ್ಯರನ್ನು ಬೆಳಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಶಾಸಕರು ಸೇರಿಸಿಕೊಂಡರೇ ರಾತ್ರಿ ಮತ್ತೆ ಬಿಜೆಪಿಗೆ ಮರಳಿ ರಾಜಕೀಯವಾಗಿ (Politics) ಗೊಂದಲ ಸೃಷ್ಟಿಸಿದ್ದರು.

ಹೌದು ಇಷ್ಟು ದಿನ ಗ್ರಾಮ ಪಂ ಸದಸ್ಯರನ್ನು ಯಾರೂ ಬೆಲೆ ಕೊಡದೆ ಕಡೆಗಣಿಸಿದ್ದರು, ಈ ಚುನಾವಣೆಯಿಂದ (Election) ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡು (Demand) ಬಂದಿದೆ. ಅದರಂತೆ ತಾಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬಿಜೆಪಿ (BJP) ವಶದಲ್ಲಿದ್ದು, ಇಲ್ಲಿನ ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಡಿಸಿಸಿ ಬ್ಯಾಂಕಿನ (DCC Bank) ನಿರ್ದೇಶಕ ಗೋವಿಂದ ರಾಜು ಮೂಲಕ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ಭಾನುವಾರ ಯಶಸ್ವಿಯಾಗಿದ್ದರು. ಬೆಳಗ್ಗೆ ಬಿಜೆಪಿ ಸೇರಿದ್ದ ಸದಸ್ಯರು ರಾತ್ರಿಯಾಗುತ್ತಿದ್ದಂತೆ ಬಿಜೆಪಿ ನಾಯಕರ ಒತ್ತಡಕ್ಕೆ ಸಿಲುಕಿ ಮತ್ತೆ ಬಿಜೆಪಿ ಸೇರಿದರು. ನಾವು ಬಿಜೆಪಿ ಬಿಟ್ಟು ಕಾಂಗ್ರೆಸ್‌   (Congress) ಸೇರಿಲ್ಲ. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೋವಿಂದರಾಜು ನಮ್ಮನ್ನು ಖಾಸಗಿ ಸಮಾರಂಭಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಮಗೆ ತಿಳಿಯದಂತೆ ಶಾಸಕರ ಜೊತೆ ಫೋಟೋ ತೆಗೆಸಿದರು. ನಂತರ ನಾವು ಕಾಂಗ್ರೆಸ್‌ ಸೇರಿರುವುದಾಗಿ ಅಪಪ್ರಚಾರ ಮಾಡಿದ್ದಾರೆ ಎಂದು ಸದಸ್ಯರಾದ ಮುರಳಿ, ನಾಯ್ಡು, ರಾಮಪ್ಪ ಸ್ಪಷ್ಟನೆ ನೀಡಿದ್ದರು.

ರಾಜಕೀಯ ಪಕ್ಷ ವೊಂದರ ಅಭ್ಯರ್ಥಿ ಹಾಗೂ ನಾಯಕರು ಪಂಚಾಯಿತಿ ಸದಸ್ಯರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ (Dharmasthala Manjunatha) ಫೋಟೋ ಮೇಲೆ ಆಣೆ ಮಾಡಿಸಿಕೊಂಡು, ಪ್ರಸಾದ ನೀಡಿ ತಮಗೇ ಮತ ಹಾಕಬೇಕೆಂದು ಆಣೆ ಪ್ರಮಾಣ ಮಾಡಿಸಿಕೊಂಡು ಹಣದ (Money) ಆಮಿಷ ನೀಡಿದ್ದಾರೆ ಎನ್ನಲಾಗಿದ್ದು ಇದು ಎಲ್ಲೆಡೆ ವೈರಲ್‌ ಆಗಿತ್ತು.

Follow Us:
Download App:
  • android
  • ios