ಕೋವಿಡ್ ವೇಳೆ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಪರಿಹಾರ
- ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ45 ಮಂದಿ ಪತ್ರಕರ್ತರ ಕುಟುಂಬಕ್ಕೆ ಮುಖ್ಯಮಂತ್ರಿ ಘೋಷಿಸಿದ 5 ಲಕ್ಷ ರು. ಪರಿಹಾರ
- ಕೋವಿಡ್‌ನಿಂದಾಗಿ ಸಾಕಷ್ಟು ಪತ್ರಕರ್ತರು ಹಿಂದೆಂದೂ ಕಂಡರಿಯದ ಸಮಸ್ಯೆ, ಸವಾಲು ಎದುರಿಸಿದ್ದು, ಅಷ್ಟೇ ಜೀವಗಳನ್ನು ಕಳೆದುಕೊಂಡಿದ್ದೇವೆ.
ಮೈಸೂರು (ಅ.27): ಕೋವಿಡ್ (Covid ) ಸಂದರ್ಭದಲ್ಲಿ ಮೃತಪಟ್ಟ45 ಮಂದಿ ಪತ್ರಕರ್ತರ (Journalist) ಕುಟುಂಬಕ್ಕೆ ಮುಖ್ಯಮಂತ್ರಿ ಘೋಷಿಸಿದ 5 ಲಕ್ಷ ರು. ಪರಿಹಾರವನ್ನು (Compensation) ನೀಡಲಾಗಿದೆ ಎಂದು ಕರ್ನಾಟಕ (Karnataka) ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು (shivananda tagaduru) ಅವರು ಹೇಳಿದರು.
ಮೈಸೂರು (Mysuru) ಜಿಲ್ಲಾ ಪತ್ರಕರ್ತರ ಸಂಘದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ (Covid) ಸಾಕಷ್ಟು ಪತ್ರಕರ್ತರು ಹಿಂದೆಂದೂ ಕಂಡರಿಯದ ಸಮಸ್ಯೆ, ಸವಾಲು ಎದುರಿಸಿದ್ದು, ಅಷ್ಟೇ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ನಡುವೆ ಮೈಸೂರು (Mysuru) ಪತ್ರಕರ್ತರ ಸಂಘ ತನ್ನದೇ ಘನತೆ, ಗೌರವವನ್ನು ಹೊಂದಿದ್ದು, ಅದನ್ನು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಸ ಸಮಿತಿ ಮುನ್ನಡೆಯುವ ವಿಶ್ವಾಸವಿದೆ. ಪತ್ರಕರ್ತರ ಸಹಾಯಕ್ಕೆ ಸದಾಕಾಲ ರಾಜ್ಯ ಸಂಘ ಸಹಕಾರ ನೀಡಲಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಸತ್ಯನಾರಾಯಣ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಕಾರ್ಯದರ್ಶಿ ರಂಗಸ್ವಾಮಿ, ಸಮಿತಿ ಸದಸ್ಯ ಕೃಷ್ಣ, ಮಾಜಿ ಸದಸ್ಯ ಜಯಶಂಕರ್ ಇದ್ದರು.
KSRTC ನೌಕರರಿಗೆ ಪರಿಹಾರ
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಕೊರೋನಾ(Coronavirus) ಮೊದಲ ಹಾಗೂ ಎರಡನೇ ಅಲೆಯಲ್ಲಿ ಒಟ್ಟು 276 ಮಂದಿ ನೌಕರರು ಮೃತಪಟ್ಟಿದ್ದಾರೆ. ಈ ಪೈಕಿ ಕೇವಲ 11 ಮೃತ ನೌಕರರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಲಾಗಿದೆ !
ಕೆಎಸ್‌ಆರ್‌ಟಿಸಿಯಲ್ಲಿ(KSRTC) ಕೊರೋನಾ ಸೋಂಕಿಗೆ ಬಲಿಯಾದ ಒಟ್ಟು 96 ನೌಕರರ ಈ ಪೈಕಿ ಏಳು ಮೃತ ನೌಕರರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಬಿಎಂಟಿಸಿಯಲ್ಲಿ 108 ಮೃತ ನೌಕರರ ಪೈಕಿ ನಾಲ್ವರು ಮೃತ ನೌಕರರ ಕುಟುಂಬಕ್ಕೆ ಮಾತ್ರ ಪರಿಹಾರ(Compensation) ನೀಡಲಾಗಿದೆ. ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ 48 ಹಾಗೂ ಕೆಕೆಆರ್‌ಟಿಸಿಯಲ್ಲಿ 24 ನೌಕರರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಎರಡೂ ನಿಗಮಗಳಲ್ಲಿ ಓರ್ವ ಮೃತ ನೌಕರನ ಕುಟುಂಬಕ್ಕೂ ಪರಿಹಾರ ನೀಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಅವರಿಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಈ ಮಾಹಿತಿ ನೀಡಿವೆ.
KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಾರಿಗೆ ನೌಕರರು ಕೊರೋನಾ ವಾರಿಯರ್‌ಗಳಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸಾರಿಗೆ ನೌಕರರು ಕೊರೋನಾ ವಾರಿಯರ್‌ಗಳಾಗಿ ಪರಿಗಣಿಸಿದ್ದು, ಕೊರೋನಾ ಸೋಂಕಿನಿಂದ ಮೃತಪಟ್ಟಲ್ಲಿ 30 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಅದರಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಸಾಂಕೇತಿಕವಾಗಿ ನಾಲ್ವರು ಮೃತ ನೌಕರರ ಕುಟುಂಬಕ್ಕೆ ತಲಾ 30 ಲಕ್ಷ ರು. ಮೊತ್ತದ ಪರಿಹಾರ ಚೆಕ್ ವಿತರಿಸಲಾಗಿತ್ತು. ಇದಾದ ಬಳಿಕ ಮೃತ ನೌಕರರಿಗೆ ಪರಿಹಾರ ವಿತರಿಸಿಲ್ಲ.