ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾ​ಶ​ಯದ ಮೂಲಕ ಕೃಷ್ಣಾ ನದಿಗೆ ನಾಳೆ(ಸೆ.2)ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.  

ಆಲಮಟ್ಟಿ(ಸೆ.01): ಈ ಬಾರಿ ಮಹಾರಾಷ್ಟ್ರ ಹಾಗೂ ಬೆಳಗಾವಿಯ ಘಟ್ಟಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಭರ್ತಿಯಾಗಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾ​ಶ​ಯದ ಮೂಲಕ ಕೃಷ್ಣಾ ನದಿಗೆ ನಾಳೆ(ಸೆ.2)ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. 

ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10ಕ್ಕೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆಳಗ್ಗೆ 10.50ಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್‌ ಜಿಂದಾಲ್‌ ಏರ್‌ಸ್ಟ್ರಿಪ್‌ಗೆ ಬರಲಿದ್ದಾರೆ. ನಂತರ ಅಲ್ಲಿಂದ ಕಾಪ್ಟರ್‌ ಮೂಲ​ಕ ಬೆಳಗ್ಗೆ 11ಕ್ಕೆ ನಿರ್ಗಮಿಸಿ 11.45ಕ್ಕೆ ಆಲಮಟ್ಟಿಯ ಹೆಲಿಪ್ಯಾಡ್‌ಗೆ ಬಂದು, ನೇರವಾಗಿ ಕಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸುವರು.

ವಿಜಯಪುರ: 3 ವರ್ಷದಲ್ಲಿ 622 ಬೈಕ್ ಸವಾರರ ಸಾವು, ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ..!

ನಂತರ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ಕ್ಕೆ ಸಂಬಂಧಿಸಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣದ ಕುರಿತು ಚರ್ಚಿಸುವರು. ಮಧ್ಯಾಹ್ನ 3ಕ್ಕೆ ಆಲಮಟ್ಟಿಯಿಂದ ಹೊರಟು ಸಂಜೆ 4.40ಕ್ಕೆ ಬೆಂಗಳೂರು ತಲುಪುವರು ಎಂದು ಪ್ರಕಟಣೆ ತಿಳಿಸಿದೆ.

ಭಾರೀ ಭದ್ರತೆ: 

ಮುಖ್ಯ​ಮಂತ್ರಿ ಭೇಟಿ ಹಿನ್ನೆ​ಲೆ​ಯ​ಲ್ಲಿ ಆಲಮಟ್ಟಿ ಪೆಟ್ರೋಲ್‌ ಪಂಪ್‌ ಬಳಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ ಮಾಹಿತಿ ನೀಡಿದರು.