ವಿಜಯಪುರ: 3 ವರ್ಷದಲ್ಲಿ 622 ಬೈಕ್ ಸವಾರರ ಸಾವು, ಇನ್ಮುಂದೆ ಹೆಲ್ಮೆಟ್ ಕಡ್ಡಾಯ..!
ಇತ್ತೀಚಿನ ದಿನಗಳಲ್ಲಿ ವಿಜಯಪುರ ನಗರ ಸೇರಿದಂತೆ ಹೈವೇಗಳಲ್ಲಿ ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಅದ್ರಲ್ಲು ಹೆಡ್ ಇಂಜ್ಯೂರಿಗಳೇ ಬೈಕ್ ಸವಾರರ ಸಾವಿಗೆ ಕಾರಣವಾಗಿದ್ವು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈಗ ವಿಜಯಪುರ ಜಿಲ್ಲೆಯಾದ್ಯಂತ ದ್ವಿಚಕ್ರವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಆ.31): ಗುಮ್ಮಟನಗರಿ ವಿಜಯಪುರದಲ್ಲಿ ವಿಪರೀತ ಬಿಸಿಲು ಅನ್ನೋ ಕಾರಣಕ್ಕೆ ಹೆಲ್ಮೆಟ್ ಕಡ್ಡಾಯವಾಗಿರಲಿಲ್ಲ. ಹೀಗಾಗಿ ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಅದ್ರಲ್ಲೂ ಯುವಕರು ಹೈವೇಗಳಲ್ಲಿ ಮನಬಂದಂತೆ ಬೈಕ್ ಚಲಾಯಿಸಿ ಹೆಡ್ ಇಂಜುರಿಗಳಿಂದ ಸಾವನ್ನಪ್ಪುತ್ತಿದ್ರು. ಸಧ್ಯ ಎಚ್ಚೆತ್ತ ಪೊಲೀಸ್ ಇಲಾಖೆ ಇನ್ಮುಂದೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶಿಸಿದೆ. ಇದಕ್ಕೆ 5 ದಿನಗಳ ಕಾಲಾವಕಾಶವನ್ನ ಕೊಟ್ಟಿದೆ.
ಗುಮ್ಮಟನಗರಿ ವಿಜಯಪುರದಲ್ಲಿ ಇನ್ಮುಂದೆ ಹೆಲ್ಮೆಟ್ ಕಂಪಲ್ಸರಿ..!
ವಿಜಯಪುರ ಜಿಲ್ಲೆಯಲ್ಲಿ ವಿಪರೀತ ತಾಪಮಾನ, ಬೇಸಿಗೆಯಲ್ಲಿ 43 ಡಿಗ್ರಿ ದಾಟುವ ಬಿಸಿಲಿನ ಪ್ರಮಾಣ. ಇದರಿಂದ ಹೆಲ್ಮೆಟ್ ಧರಿಸಿ ಓಡಾಡುವವರಿಗೆ ಚರ್ಮ ಕಾಯಿಲೆ, ತಲೆಯಲ್ಲಿ ಕೂದಲು ಉದುರುವಿಕೆಯಂತ ಸಮಸ್ಯೆಗಳು ಕಂಡು ಬರ್ತಿದ್ದವು. ಹೀಗಾಗಿ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಈ ವರೆಗು ಹೆಲ್ಮೆಟ್ ಬಳಕೆಯಲ್ಲಿ ಸಡಲಿಕೆ ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ವಿಜಯಪುರ ನಗರ ಸೇರಿದಂತೆ ಹೈವೇಗಳಲ್ಲಿ ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಅದ್ರಲ್ಲು ಹೆಡ್ ಇಂಜ್ಯೂರಿಗಳೇ ಬೈಕ್ ಸವಾರರ ಸಾವಿಗೆ ಕಾರಣವಾಗಿದ್ವು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈಗ ವಿಜಯಪುರ ಜಿಲ್ಲೆಯಾದ್ಯಂತ ದ್ವಿಚಕ್ರವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಬರುವ ಸೆಪ್ಟೆಂಬರ್ 5 ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.
ವಿಜಯಪುರ: ಬಿಡಾಡಿ ದನಗಳ ಹಾವಳಿ, ಬಸ್, ಲಾರಿ ಕೆಳಗೆ ಸಿಕ್ಕು ಸಾಯ್ತಿವೆ ಜಾನುವಾರುಗಳು!
ಸವಾರರಿಬ್ಬರಿಗೂ ಹೆಲ್ಮೆಟ್ ಕಡ್ಡಾಯ..!
ಬೈಕ್ ಮೇಲೆ ಸಂಚರಿಸುವ ಸವಾರರಿಬ್ಬರು ಹೆಲ್ಮೆಟ್ ಧರಿಸಬೇಕು ಎನ್ನುವ ಆದೇಶವನ್ನ ಎಸ್ಪಿ ಹೆಚ್ ಡಿ ಆನಂದಕುಮಾರ್ ಮಾಡಿದ್ದಾರೆ. ಬೈಕ್ ಅಪಘಾತಗಳಲ್ಲಿ ಬೈಕ್ ಮೇಲಿದ್ದ ಸವಾರರಿಬ್ಬರಿಗು ಗಂಭೀರ ಪ್ರಮಾಣದ ಗಾಯಗಳಾಗುವ ಕಾರಣ ಇಬ್ಬರಿಗೂ ಹೆಲ್ಮೆಟ್ ಫಿಕ್ಸ್ ಎನ್ನಲಾಗಿದೆ. ತಪ್ಪಿದಲ್ಲಿ ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ ಎಸ್ಪಿ ಹೆಚ್.ಡಿ. ಆನಂದಕುಮಾರ್
ಈಗಾಗಲೇ ಅಲರ್ಟ್ ಆಗಿರುವ ಟ್ರಾಫಿಕ್ ಪೊಲೀಸರು..!
ಇನ್ನೂ ಈಗಾಗಲೇ ಅಲರ್ಟ್ ಆಗಿರುವ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರೋ ಬೈಕ್ ಸವಾರರನ್ನ ತಡೆದು ಹೆಲ್ಮೆಟ್ ಕಡ್ಡಾಯದ ಬಗ್ಗೆ ಹೇಳ್ತಿದ್ದಾರೆ. ಸೆ.5 ನಂತರ ಹೆಲ್ಮೆಟ್ ಇಲ್ಲದೆ ರಸ್ತೆಗೆ ಬಂದ್ರೆ ದಂಡ ಫಿಕ್ಸ್ ಎಂದು ವಾರ್ನ್ ಮಾಡ್ತಿದ್ದಾರೆ. ಗಾಂಧಿ ವೃತ್ತ, ಶಿವಾಜಿ ಚೌಕ್, ಗೋಳಗುಮ್ಮಟಕ್ಕೆ ರಸ್ತೆ, ಬಿಎಲ್ಡಿಇ ರಸ್ತೆ, ಅಥಣಿ ರಸ್ತೆ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. ಹೆಲ್ಮೆಟ್ ಖರೀದಿಗೂ ಅವಕಾಶ ನೀಡಿದ್ದು ಸೆಪ್ಟೆಂಬರ್ 5 ಒಳಗೆ ಹೆಲ್ಮೆಟ್ ಖರೀದಿ ರಸ್ತೆಗಿಳಿಯಲು ಸೂಚಿಸಿದ್ದಾರೆ.
ಈ ದಿಢೀರ್ ನಿರ್ಧಾರಕ್ಕೂ ಕಾರಣವಿದೆ..!
ಇನ್ನು ಏಕಾಏಕಿ ಈ ನಿರ್ಧಾರಕ್ಕೆ ಕಾರಣವು ಇದೆ. ಕಳೆದ ಮೂರು ವರ್ಷದಲ್ಲಿ ನಡೆದ ಅಪಘಾತ-ಸಾವು ಪ್ರಕರಣಗಳಲ್ಲಿ ಶೇ 90 ರಷ್ಟು ಸಾವು ಹೆಲ್ಮೆಟ್ ಇಲ್ಲದ ಪರಿಣಾಮ ಸಂಭವಿಸಿವೆ. ಕಳೆದ ಮೂರು ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಜಿಲ್ಲೆಯಾದ್ಯಂತ 622 ಜನ ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ಮೂರು ವರ್ಷಗಳ ಸಾವಿನ ಸಂಖ್ಯೆ ಇಲ್ಲಿವೆ ನೋಡಿ..!
• 2021ರಲ್ಲಿ 236 ಬೈಕ್ ಸವಾರರು ಸಾವನ್ನಪ್ಪಿದ್ದಾರೆ. 209 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ
• 2022ರಲ್ಲಿ ನಡೆದ ಬೈಕ್ ಅಪಘಾತಗಳಲ್ಲಿ 251 ಬೈಕ್ ಸವಾರರು ಸಾವನ್ನಪ್ಪಿದ್ದಾರೆ. 234 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ..
• 2023ರ ಜನವರಿಯಿಂದ ಆಗಷ್ಟ್ 31ರ ವರೆಗೆ ನಡೆದ ಬೈಕ್ ಅಪಘಾತಗಳಲ್ಲಿ 135 ಜನ ಬೈಕ್ ಸವಾರರು ಸಾವನ್ನಪ್ಪಿದ್ದಾರೆ. 132 ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ರಾಜಕೀಯದಲ್ಲಿ ಅನಾಹುತ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಮೊನ್ನೆಯಷ್ಟೆ ಹೈವೇಯಲ್ಲಿ ಇಬ್ಬರು ಯುವಕರ ಸಾವು..!
ಅದ್ರಲ್ಲೂ ಮೊನ್ನೆಯಷ್ಟೆ ಸೊಲ್ಲಾಪುರ ಹೈವೇ ಬ್ರಿಡ್ಜ್ ನಲ್ಲಿ ಹಂಚನಾಳ ತಾಂಡಾದ ಇಬ್ಬರು ಯುವಕರು ಲಾರಿ ಕೆಳಗೆ ತಲೆ ಸಿಕ್ಕು ಸ್ಥಳದಲ್ಲೆ ಮೃತಪಟ್ಟಿದ್ದರು. ಈ ದೃಶ್ಯ ಎಷ್ಟು ಭಯಾನಕವಾಗಿತ್ತು ಎಂದ್ರೆ, ಲಾರಿ ಹರಿದ ಪರಿಣಾಮ ಇಬ್ಬರು ಯುವಕರ ಮೆದುಳು ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿತ್ತು. ಪ್ರಕರಣ ಗಂಭೀರವಾಗಿ ಪರಿಣಿಸಿರುವ ಪೊಲೀಸರು ಹೆಲ್ಮೆಟ್ ಕಡ್ಡಾಯ ಮಾಡ್ತಿದ್ದಾರೆ. ಪೊಲೀಸರ ಈ ನಿರ್ಧಾರವನ್ನ ಬೈಕ್ ಸವಾರರು ಸ್ವಾಗತ ಮಾಡಿದ್ದಾರೆ.
ನೆಪ ಹೇಳುವ ಹಾಗೆ ಇಲ್ಲ, ಹೆಲ್ಮೆಟ್ ಧರಿಸಲೇ ಬೇಕು..!
ಅತಿ ಬಿಸಿಲು-ಚರ್ಮರೋಗಗಳ ನೆಪ ಮಾಡಿ ಹೆಲ್ಮೆಟ್ ಇಲ್ಲದೆ ಓಡಾಡ್ತಿದ್ದವರಿಗೆ ಈಗ ಪೊಲೀಸ್ ಇಲಾಖೆ ಪೈನಲ್ ವಾರ್ನಿಂಗ್ ನೀಡಿದೆ. ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದ್ರೆ ಕಠಿಣ ಕ್ರಮದ ಜೊತೆಗೆ ಸಾವಿರಾರು ರೂಪಾಯಿ ದಂಡ ಫಿಕ್ಸ್ ಎನ್ನಲಾಗಿದೆ. ನೆಪಹೇಳುವ ಹಾಗಿಲ್ಲ, ಹೆಲ್ಮೆಟ್ ಧರಿಸಲೇ ಬೇಕು ಎನ್ನುವ ಎಚ್ಚರಿಕೆಯನ್ನ ಪೊಲೀಸರು ನೀಡಿದ್ದಾರೆ.