ಹುಬ್ಬಳ್ಳಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ಬೃಹತ್ ಕಟೌಟ್ ಬಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಳ್ಳಲಾಗಿದ್ದ ಮನೆ ಹಂಚಿಕೆ ಕಾರ್ಯಕ್ರಮದ ಬೃಹತ್ ಕಟೌಟ್ ಬಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದ್ದು, ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ, ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಬ್ಯಾಹಟ್ಟಿಯ ಶಂಕರ ಹಡಪದ (28), ಹುಬ್ಬಳ್ಳಿಯ ಶಾಂತಾ ಕ್ಯಾರಕಟ್ಟಿ (60) ಮತ್ತು ಧಾರವಾಡದ ಮಂಜುನಾಥ ವೆರ್ಣೇಕರ (33) ಗಾಯಗೊಂಡವರು. ಕಾರ್ಯಕ್ರಮದ ಸ್ಥಳದಲ್ಲಿ ಅಳವಡಿಸಿದ್ದ ಮುಖಂಡರ ಬೃಹತ್ ಕಟೌಟ್‌ಗಳು ಗಾಳಿಗೆ ಕೆಳಗೆ ಬಿದ್ದಿದ್ದು, ಇದರ ಕೆಳಗಿದ್ದ ಮೂವರಿಗೆ ಗಾಯವಾಗಿದೆ. ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆ ಸಚಿವ ಜಮೀರ್ ಅಹ್ಮದ ಖಾನ್ ಭೇಟಿ ನೀಡಿದ್ದು, ಕಾರ್ಯಕ್ರಮ ಮುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಬಡವರಿಗೆ ಮನೆ ಹಂಚಿಕೆಯಿಂದ ಬಿಜೆಪಿಗೆ ಹೊಟ್ಟೆ ಕಿಚ್ಚು: ವಸತಿ ಸಚಿವ ಜಮೀರ ಅಹಮದ್ ಖಾನ್
ಇದನ್ನೂ ಓದಿ: ತಲಾ ಆದಾಯದಲ್ಲಿ ದೇಶದಲ್ಲಿ ರಾಜ್ಯವೇ ನಂಬರ್ ಒನ್: ಖಜಾನೆ ಖಾಲಿ ಅಂದರಿಗೆ ಸಿಎಂ ತಿರುಗೇಟು


