Nelamangala wife murder case:ನೆಲಮಂಗಲ ತಾಲೂಕಿನ ಹುಣಸೇಘಟ್ಟೆಪಾಳ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿ ಆನಂದ್, ತನ್ನ ಪತ್ನಿ ಅರ್ಚನಾಳನ್ನು ಕೇಬಲ್ ವೈರ್‌ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕಥೆ ಕಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ
ನೆಲಮಂಗಲ (ಜ.7): ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಹುಣಸೇಘಟ್ಟೆಪಾಳ್ಯದಲ್ಲಿ ನಡೆದಿದೆ. ಪತ್ನಿಯ ಕೊಲೆ ಆರೋಪಿ ಪತಿ ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಕನಕಪುರ ಮೂಲದ ಅರ್ಚನಾ(24) ಮೃತ ದುರ್ದೈವಿ. ಆನಂದ್ ಬಂಧಿತ ಆರೋಪಿ.
ಕೇಬಲ್ ವೈರ್ ಬಿಗಿದು ಪತ್ನಿಯ ಕೊಲೆ:
ಕ್ಷುಲ್ಲಕ ಕಾರಣಕ್ಕೆ ಪತ್ನಿ ಅರ್ಚನ ಜೊತೆ ಜಗಳ ಮಾಡುತ್ತಿದ್ದ ಪತಿ. ಇತ್ತೀಚೆಗೆ ಶಾರದಮ್ಮ ಎಂಬುವವರ ತೋಟದ ಕೆಲಸಕ್ಕೆ ಬಂದಿದ್ದ ದಂಪತಿ. ತೋಟದಲ್ಲೂ ವಿನಾಕಾರಣ ಜಗಳ ಪತ್ನಿಯೊಂದಿಗೆ ಜಗಳ ತೆಗೆದಿದ್ದ ಆನಂದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಕೇಬಲ್ ವೈರ್‌ನಿಂದ ಪತ್ನಿ ಅರ್ಚನಾ ಕುತ್ತಿಗೆಗೆ ಬಿಗಿದು ಹತ್ಯೆಗೈದಿದ್ದಾನೆ.
ಕೊಲೆ ಬಳಿಕ ಆತ್ಮ೧ಹತ್ಯೆ ಕಥೆ ಕಟ್ಟಿದ್ದ ದುರುಳ ಪತಿ
ತೋಟದ ಮನೆಯಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿ ಕೋಪದಲ್ಲಿ ಕೇಬಲ್ ವೈರ್‌ನಿಂದ ಕುತ್ತಿಗೆ ಬಿಗಿದು ಹತ್ಯೆಗೈದ ಬಳಿಕ. ಇದು ತಾನು ಕೊಲೆ ಮಾಡಿದ್ದು ಎಂಬ ಸಂಶಯ ಬಾರದಂತೆ ಪತ್ನಿ ಕೇಬಲ್ ವೈರ್‌ನಿಂದ ನೇಣು ಬಿಗಿದು ಆತ್ಮಹ೧ತ್ಯೆ ಮಾಡಿಕೊಂದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆನಂದ. ಘಟನೆ ಮಾಹಿತಿ ತಿಳಿದು ಪೊಲೀಸರ ಪರಿಶೀಲಿಸಿದಾಗ ಗಂಡ ಆನಂದನೇ ಪತಿಯ ಹತ್ಯೆ ಮಾಡಿರುವುದು ಬಯಲಾಗಿದೆ.
ಸದ್ಯ ಪರಾರಿಯಾಗಿದ್ದ ಆರೋಪಿಯನ್ನ ಪತ್ತೆ ಹಚ್ಚಿಬಂಧಿಸಿರುವ ಪೊಲೀಸು ವಿಚಾರಣೆ ಮುಂದುವರಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


