ತುಮಕೂರು(ಡಿ.03): ಕಾಲು ಮತ್ತು ಬಾಯಿ ಕತ್ತ​ರಿ​ಸಿದ ಗಂಡು ಚಿರ​ತೆಯ ಮೃತ ದೇಹವೊಂದು ಸೋಮ​ವಾರ ತಾಲೂ​ಕಿನ ಕನ್ನ​ಮೇಡಿ ಗ್ರಾಮದ ದೊಡ್ಡ ಬೆಟ್ಟ​ದಲ್ಲಿ ಪತ್ತೆ​ಯಾ​ಗಿ​ದೆ.

ಕನ್ನ​ಮೇಡಿ ಗ್ರಾಮದ ದೊಡ್ಡ ಬೆಟ್ಟಬೃಹತ್‌ ಕಾಡಿ​ನಿಂದ ಅವ​ರಿ​ಸಿದ್ದು ಕರಡಿ, ಚಿರತೆ, ಜಿಂಕೆ, ನ​ವಿಲು ಸೇರಿ​ದಂತೆ ಇತರೆ ಕಾಡು​ಪ್ರಾ​ಣಿ​ಗಳು ಸಂಖ್ಯೆ ಹೆಚ್ಚಿದೆ. ಬೆಳಗ್ಗೆ ಮೇವು ತರುವ ಸಲು​ವಾಗಿ ಗ್ರಾಮದ ಸುತ್ತ​ಮು​ತ್ತ​ಲಿನ ಕುರಿ​ಗಾ​ಹಿ​ಗಳು ಬೆಟ್ಟಕ್ಕೆ ಹೋದ ವೇಳೆ ಕಾಲು ಮತ್ತು ಮೂತಿ ಕತ್ತ​ರಿಸಿದ ಸುಮಾರು ಮೂರು ​ನಾಲ್ಕು ವಷ​ರ್‍ದ ಗಟ್ಟು​ಮು​ಟ್ಟಿನ ಗಂಡು ಚಿರ​ತೆಯ ಮೃತ ದೇಹವೊಂದು ಪತ್ತೆ​ಯಾ​ಗಿದ್ದು ಇದನ್ನು ನೋಡಿ ಭಯಾ​ಬೀ​ತ​ರಾದ ಕುರಿ​ಗಾ​ಹಿ​ಗಳು ಕೂಡಲೇ ಬೆಟ್ಟ​ದಿಂದ ಗ್ರಾಮಕ್ಕೆ ವಾಪ​ಸ್ಸಾ​ಗಿ​ದ್ದಾರೆ.

ತುಮಕೂರು: ಸದ್ದಿಲ್ಲದೆ ಸಂಚರಿಸುತ್ತಿದೆ ‘ನರಹಂತಕ’ ಚಿರತೆ!

ಅಲ್ಲದೇ ಮಟ ಮಂತ್ರದ ಸಲು​ವಾಗಿ ಸಂಚು ರೂಪಿ​ಸಿದ ಮಂತ್ರ​ವಾ​ದಿ​ಗಳು ಮನೆ​ಯಿಂದ ತೆಗೆ​ದು​ಕೊಂಡು ಹೋಗಿ ಬೆಟ್ಟ​ದಲ್ಲಿ ಇಟ್ಟಿದ್ದ ಪರಿ​ಣಾಮ ವಿಷ ಪೂರಿತ ಮಾಂಸದ ಆಹಾರ ಸೇವನೆ ಮಾಡಿದ ಚಿರತೆ ಸ್ಥಳ​ದ​ಲ್ಲಿಯೆ ಮೃತ​ಪ​ಟ್ಟಿ​ದ್ದು, ಚಿ​ರತೆ ಸಾವ​ನ್ನ​ಪ್ಪಿ​ರುವ ಬಗ್ಗೆ ಖಚಿತ ಪಡಿ​ಸಿ​ಕೊಂಡ ಮಂತ್ರ​ವಾ​ದಿ​ಗಳು ಆದರ ನಾಲ್ಕು ಕಾಲು ಮತ್ತು ಬಾಯಿ ಕತ್ತ​ರಿ​ಸಿ​ಕೊಂಡು ಪರಾ​ರಿ​ಯಾ​ಗಿರುವ ಶಂಕೆ ವ್ಯಕ್ತ​ವಾ​ಗಿ​ದೆ.

ತುಮಕೂರು: ಇಲ್ಲಿ 1 ಕೆಜಿ ಈರುಳ್ಳಿಗೆ ಅರುವತ್ತೇ ರೂಪಾಯಿ..!

ಈ ಸಂಬಂಧ ಅರಣ್ಯ ಇಲಾಖೆ ಅಧಿ​ಕಾ​ರಿ​ಗಳು ತನಿಖೆ ನಡೆ​ಸ​ಬೇ​ಕು. ಚಿರತೆ ಸಾವಿಗೆ ಕಾರ​ಣ​ರಾದ ದುಷ್ಕ​ಮಿ​ರ್‍ಗಳ ವಿರು​ದ್ಧ ಕಾನೂನು ಕ್ರಮ ಜರಿ​ಗಿ​ಸುವ ಮೂಲಕ ​ಕಾಡು ಪ್ರಾಣಿ​ಗಳ ರಕ್ಷ​ಣೆಗೆ ಮುಂದಾ​ಗಬೇ​ಕು.​ ಇಂತಹ ಘಟ​ನೆ​ಗಳು ಮರು​ಕ​ಳಿ​ಸ​ದಂತೆ ಎಚ್ಚ​ರ​ ವ​ಹಿ​ಸ​ಬೇ​ಕಿದೆ ಎಂದು ಗ್ರಾಮ​ಸ್ಥರು ಆಗ್ರಹಿಸಿದ್ದಾರೆ.